/newsfirstlive-kannada/media/media_files/2025/09/05/indian-curency-2025-09-05-21-04-03.jpg)
ಕಳ್ಳರ ಗುಂಪೊಂದು ದೇವಸ್ಥಾನ ದೋಚಲು ಪ್ಲಾನ್ ಹಾಕಿಕೊಂಡು ನುಗ್ಗಿತ್ತು. ಆ ಪ್ರಕಾರವೇ ಅವರು ದೇವಾಲಯಕ್ಕೆ ಎಂಟ್ರಿ ನೀಡಿ, ಕಾಣಿಕೆ ಡಬ್ಬಿಯನ್ನೇ ಹೊತ್ತೊಯ್ದರು. ಆಮೇಲೆ ಏನಾಯ್ತು ಅನ್ನೋದೇ ಇಲ್ಲಿ ಇಂಟ್ರೆಸ್ಟಿಂಗ್!
ಕದ್ದ ಕಾಣಿಗೆ ಡಬ್ಬಿಯನ್ನ ತುಂಬಾ ಉತ್ಸಾಹದಿಂದಲೇ ಒಡೆದಿದ್ದಾರೆ. ಆದರೆ, ಅದೇನು ಆಯ್ತೋ ಗೊತ್ತಿಲ್ಲ. ಕದ್ದ ಎಲ್ಲಾ ಹಣವನ್ನು ಸ್ವಲ್ಪ ದಿನ ಒಂದು ತಿಂಗಳ ನಂತರ ಅದೇ ದೇವಸ್ಥಾನಕ್ಕೆ ತಂದಿಟ್ಟು ಹೋಗಿದ್ದಾರೆ. ಅಂದ್ಹಾಗೆ ಈ ಘಟನೆ ನಡೆದಿರೋದು ಆಂಧ್ರದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂನಲ್ಲಿರುವ ದೇವಸ್ಥಾನವೊಂದರಲ್ಲಿ. ಒಂದು ತಿಂಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಣದ ಜೊತೆಗೆ ಪತ್ರ ಇಟ್ಟು ಹೋದರು..
ಕಳ್ಳರು ಒಂದು ಪತ್ರವನ್ನೂ ದೇವಾಲಯದಲ್ಲಿ ಇಟ್ಟು ಹೋಗಿದ್ದಾರೆ. ಬೆಳಗ್ಗೆ, ಪೂಜಾ ಸೇವೆಗಳಿಗಾಗಿ ದೇವಾಲಯಕ್ಕೆ ಪ್ರವೇಶಿಸಿದ ಅರ್ಚಕರಿಗೆ ಆವರಣದಲ್ಲಿ ಹಣದ ಬ್ಯಾಗ್ ಸಿಕ್ಕಿದೆ. ಅದನ್ನು ನೋಡಿದ ಅರ್ಚಕರಿಗೆ ಶಾಕ್ ಆಗಿದೆ. ಬ್ಯಾಗ್ ಒಳಗೆ ಹಣ ಮತ್ತು ಒಂದು ಪತ್ರ ಇತ್ತು. ಆ ಪತ್ರದಲ್ಲಿ ಏನಿತ್ತು ಅನ್ನೋದನ್ನ ತೆಗೆದು ನೋಡಿದಾಗ.. ತನ್ನ ಮಕ್ಕಳು ದೇವಾಲಯದ ಹುಂಡಿಯಿಂದ ಹಣ ಕದ್ದು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಬರೆಯಲಾಗಿತ್ತು.
ಇನ್ನು ದೇವಸ್ಥಾನದ ಆಡಳಿತಾಧಿಕಾರಿಗಳು ಕಳ್ಳರು ತಂದಿದ್ದ ಹುಂಡಿಯನ್ನು ಎಣಿಸಿದಾಗ ಒಟ್ಟು 1,86,486 ರೂಪಾಯಿ ಇರೋದು ತಿಳಿದುಬಂದಿದೆ. ದೇವಿಯ ಶ್ರೇಷ್ಠತೆಯಿಂದಾಗಿ ಕಳ್ಳರು ಕದ್ದ ಹಣವನ್ನು ವಾಪಸ್ ತಂದಿದ್ದಾರೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:5.2 ಕೆ.ಜಿ ತೂಕದ ‘ಛೋಟಾ ಭೀಮ’ ಜನನ.. ಅಪರೂಪದಲ್ಲಿಯೇ ಅಪರೂಪದ ಕೇಸ್ ಇದು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ