/newsfirstlive-kannada/media/media_files/2025/09/05/baby-2-2025-09-05-20-39-21.jpg)
ಮಧ್ಯಪ್ರದೇಶದ ಜಬಲ್ಪುರದಲ್ಲಿ ಒಂದು ಮಗು ಜನಿಸಿದ್ದು, ಅದರ ತೂಕ ಸಾಮಾನ್ಯ ಮಗುವಿಗಿಂತ ಹೆಚ್ಚು. ಅಂದರೆ ಈ ಮಗುವಿನ ತೂಕ ಆರೋಗ್ಯವಂತ ಮಗುವಿಗಿಂತ ಹೆಚ್ಚಿದೆ. ಈ ಮಗುವನ್ನು ‘ಛೋಟಾ ಭೀಮ್’ ಎಂದೂ ಪ್ರೀತಿಯಿಂದ ಕರೆಯುತ್ತಿದ್ದಾರೆ.
ಜಬಲ್ಪುರದ ರಾಣಿ ದುರ್ಗಾವತಿ ಎಲ್ಗಿನ್ ಆಸ್ಪತ್ರೆಯಲ್ಲಿ 34 ವರ್ಷದ ಆನಂದ್ ಚೌಕ್ಸೆ ಅವರ ಪತ್ನಿ ಶುಭಾಂಗಿ ಚೌಕ್ಸೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮಗು 5.2 ಕೆಜಿ ತೂಕದಲ್ಲಿ ಜನಿಸಿದೆ. ಸಾಮಾನ್ಯವಾಗಿ ನವಜಾತ ಶಿಶುವಿನ ತೂಕ 2.5 ರಿಂದ 3 ಕೆಜಿ ನಡುವೆ ಇರುತ್ತದೆ.
ಇದನ್ನೂ ಓದಿ:ಪಾಂಡ್ಯ ಬೆಂಕಿ ಲುಕ್! ಈ ಫೋಟೋಗಳನ್ನ ನೀವು ನೋಡಲೇಬೇಕು.. Photos
ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಭಾವನಾ ಮಿಶ್ರಾ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಮಗುವಿನ ತೂಕ 3 ಕೆಜಿಗಿಂತ ಹೆಚ್ಚಾದಾಗ ಹೆರಿಗೆ ಸವಾಲಿನದಾಗುತ್ತದೆ. 5 ಕೆಜಿಗಿಂತ ಹೆಚ್ಚಾದ ಮಗುವನ್ನು ಹೊರಗೆ ತರೋದು ತುಂಬಾ ಕಷ್ಟ. ಇಂಥ ಪ್ರಸಂಗಗಳು ಸಾವಿರಾರು ಹೆರಿಗೆಗಳಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಕಂಡುಬರುತ್ತವೆ. ಗರ್ಭಾವಸ್ಥೆಯಲ್ಲಿ ತಾಯಿ ಉತ್ತಮ ಆಹಾರ ಮತ್ತು ಸಾಕಷ್ಟು ಪೋಷಣೆಯಿಂದಾಗಿ ಮಗು ಅಧಿಕ ತೂಕ ಹೊಂದಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಕೆಲವೊಮ್ಮೆ ತಾಯಿಯ ಆರೋಗ್ಯ ಕಾರಣಗಳಿಂದಲೂ ಸಾಧ್ಯ. ಆದರೆ ಶುಭಾಂಗಿ ಚೌಕ್ಸೆ ವೈದ್ಯಕೀಯ ವರದಿಗಳು ಅವರು ಎಲ್ಲವೂ ನಾರ್ಮಲ್ ಆಗಿವೆ. ಸಮತೋಲಿತ ಆಹಾರ ಮತ್ತು ಉತ್ತಮ ಆರೋಗ್ಯವೇ ಈ ತೂಕಕ್ಕೆ ಪ್ರಮುಖ ಕಾರಣ ಎಂದು ನಂಬಲಾಗಿದೆ.
4.5 ಕೆಜಿಗಿಂತ ಹೆಚ್ಚು ತೂಕ ಇರುವ ಶಿಶುಗಳನ್ನು ಮ್ಯಾಕ್ರೋಸೋಮಿಕ್ ಶಿಶುಗಳು ಎನ್ನಲಾಗುತ್ತದೆ. ಅಂತಹ ಶಿಶುಗಳು ಬಹಳ ವಿರಳವಾಗಿ ಜನಿಸುತ್ತವೆ. ಅಧಿಕ ತೂಕದಿಂದಾಗಿ ಹೆರಿಗೆಯ ಸಮಯದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಆದರೆ ಈ ಪ್ರಕರಣದಲ್ಲಿ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿ:‘ಬುರುಡೆ ತಂದು ಕೊಟ್ಟಿದ್ದು ನಾನಲ್ಲ’ ಎಂದ ಜಯಂತ್! ಮತ್ಯಾರು..? ರೋಚಕ ಟ್ವಿಸ್ಟ್..! VIDEO
ಕರ್ನಾಟಕದಲ್ಲಿ 2016ರಲ್ಲಿ ಮಹಿಳೆಯೊಬ್ಬರು 6.82 ಕೇಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ಭಾರತದಲ್ಲಿನ ಇಲ್ಲಿಯವರೆಗಿನ ದಾಖಲೆಯಾಗಿದೆ. 2015ರಲ್ಲಿ ಉತ್ತರಪ್ರದೇಶದ ಮಹಿಳೆಯೊಬ್ಬರು 6.7ಕೇಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ