/newsfirstlive-kannada/media/media_files/2025/09/21/solar-eclips-2025-09-21-12-55-39.jpg)
ಗ್ರಹಣಗಳು ಬರ್ತಾವೆ ಹೋಗ್ತಾವೆ. ಆದ್ರೆ, ಬರೋದಕ್ಕೂ ಮುನ್ನ ಮತ್ತು ಬಂದು ಹೋದ್ಮೇಲೂ ಪರಿಣಾಮ ಬೀರ್ತಾವೆ. ಅದು ರಾಜಕೀಯವಾಗಿ, ಪ್ರಾಕೃತಿಕವಾಗಿ, ವ್ಯಕ್ತಿಗತವಾಗಿಯೂ ಬೀರುತ್ತವೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರ ಹೇಳ್ತಿದೆ. ಭಾರತೀಯರು ಗ್ರಹಣಗಳನ್ನ ಕೇವಲ ಖಗೋಳಶಾಸ್ತ್ರದಲ್ಲಿ ನೋಡೋದಿಲ್ಲ. ಅದನ್ನ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ನೋಡುತ್ತಾರೆ. ಕಾರಣ ಸಾವಿರಾರು ವರ್ಷಗಳ ಹಿಂದೆಯೇ ಋಷಿ ಮುನಿಗಳು ನೀಡಿರೋ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಗಳ ಬಗ್ಗೆ ಉಲ್ಲೇಖವಿದೆ. ಗ್ರಹಣಗಳು ಯಾಕೆ ಆಗ್ತಾವೆ? ಗ್ರಹಣಗಳು ಕಾಣಿಸ್ಕೊಂಡಾಗ ಜನ ಯಾವ ರೀತಿಯಲ್ಲಿ ಸೂತಕ ಪಾಲನೆ ಮಾಡ್ಬೇಕು? ಗ್ರಹಣ ಗ್ರಹಚಾರ ಯಾವ ರಾಶಿಯವರಿಗೆ ದೋಷ ಉಂಟು ಮಾಡುತ್ತೆ? ಅದೆಲ್ಲದ್ದಕ್ಕೂ ಪರಿಹಾರ ಏನು ಅನ್ನೋ ಉತ್ತರ ಶಾಸ್ತ್ರದಲ್ಲಿ ಸಿಗುತ್ತದೆ
ಎಲ್ಲೆಲ್ಲಿ, ಯಾವಾಗ ಕಾಣಿಸಿಕೊಳ್ಳುತ್ತೆ..?
ಭೂಮಿ ಮತ್ತು ಸೂರ್ಯನ ನಡುವೆ ಸಮಾನಾಂತರ ರೇಖೆಯಲ್ಲಿ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನ ನೆರಳು ಸೂರ್ಯನ ಒಂದು ಭಾಗಕ್ಕೆ ಮಾತ್ರ ಆವರಿಸುತ್ತದೆ. ಇವತ್ತು ಖಂಡಗ್ರಾಸ ಸೂರ್ಯಗ್ರಹಣ ಅಮೆರಿಕಾದ ಸಮೋವಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಕುಕ್ ಐಸ್‌ಲ್ಯಾಂಡ್, ಫಿಜಿ, ಫ್ರೆಂಚ್ ಪೋಲಿನೇಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಓಷಿಯಾನಿಯಾ ಮತ್ತಿತರ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಗೆ ಶುರುವಾಗುತ್ತೆ. ಸುಮಾರು 4 ಗಂಟೆಗಳ ಕಾಲ ಇರುತ್ತೆ. ಭಾರತದಲ್ಲಿ ಅದಾಗಲೇ ಸೂರ್ಯ ಅಸ್ತಂಗತನಾಗಿರುತ್ತಾನೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಸೂತಕವನ್ನ ಪಾಲನೆ ಮಾಡ್ಬೇಕು ಅನ್ನೋದು ಇಲ್ಲ.
ಗ್ರಹಣದಿಂದಲೇ ಪಿತೃಪಕ್ಷ ಆರಂಭ, ಗ್ರಹಣದಿಂದಲೇ ಅಂತ್ಯ!
ಈ ಬಾರಿ ಹಿಂದೂಗಳಿಗೆ ಗ್ರಹಣದ ವಿಶೇಷ ಏನು ಅಂದ್ರೆ ಯಾವತ್ತು ಚಂದ್ರಗ್ರಹಣ ಕಾಣಿಸಿಕೊಳ್ತೋ? ಆವತ್ತೆ ಪಿತೃಪಕ್ಷ ಶುರುವಾಗಿತ್ತು. ಅಂದಿನಿಂದ ಜನ ಪೂರ್ವಜರ ಆತ್ಮಗಳಿಗೆ ಶಾಂತಿ ನೀಡಲು ಶ್ರಾದ್ಧ, ತರ್ಪಣ ಮತ್ತು ಪಿಂಡ ದಾನ ಮಾಡಿದ್ದಾರೆ. ಇದೀಗ ಮಹಾಲಯ ಅಮಾವಾಸ್ಯೆಗೆ ಪಿತೃಪಕ್ಷ ಅಂತ್ಯವಾಗ್ತಿದೆ. ಇನ್ನೊಂದು ಕಡೆ ಮಹಾಲಯ ಅಮಾವಾಸ್ಯೆಗೆ ಸೂರ್ಯಗ್ರಹಣ ಕಾಣಿಸ್ಕೊಳ್ತಿದೆ. ಹೀಗಾಗಿ ಚಂಗ್ರಹಣದ ಕಾಲದಲ್ಲಿ ಶುರುವಾಗಿದ್ದ ಪಿತೃಪಕ್ಷ, ಸೂರ್ಯ ಗ್ರಹಣದ ವೇಳೆ ಅಂತ್ಯವಾಗ್ತಿದೆ. ಈ ರೀತಿಯಲ್ಲಿ ಕಾಣಿಸ್ಕೊಂಡಿದ್ದು 122 ವರ್ಷಗಳ ನಂತರ. ಹೌದು, 1903 ರಲ್ಲಿ ಗ್ರಹಣದೊಂದಿಗೆ ಆರಂಭವಾಗಿದ್ದ ಪಿತೃಪಕ್ಷ ಗ್ರಹಣದೊಂದಿದೆ ಅಂತ್ಯವಾಗಿತ್ತು.
ಜ್ಯೋತಿಷ್ಯವನ್ನ ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ನಂಬಿಕೆ ಇದ್ದವರು ಪಾಲನೆ ಮಾಡಬಹುದು, ನಂಬಿಕೆ ಇಲ್ಲದವ್ರು ಹಾಗೇ ತಮ್ಮ ಪಾಡಿಗೆ ತಾವು ಇರ್ಬಹುದು. 122 ವರ್ಷಗಳ ನಂತರ ಪಿತೃಪಕ್ಷದ ಆರಂಭ ಮತ್ತು ಅಂತ್ಯ ಕಾಣಿಸಿಕೊಳ್ತಾ ಇರೋದ್ರಿಂದ ಏನಾದ್ರೂ ಸಮಸ್ಯೆಗಳು ಎದುರಾಗ್ತಾವಾ? ಅನ್ನೋ ಪ್ರಶ್ನೆ ಖಂಡಿತವಾಗಿಯೂ ಇದೆ.
ಇದನ್ನೂ ಓದಿ:ಇವತ್ತು ಸೂರ್ಯ ಗ್ರಹಣ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗರ್ಭಿಣಿಯರು ಏನು ಮಾಡಬೇಕು..?
ಗ್ರಹಣಗಳು ಕೇವಲ ವಾತಾವರಣದ ಮೇಲೆ ಅಷ್ಟೇ ಅಲ್ಲ. ಅವು ಮನುಷ್ಯರ ಮೇಲೂ ಪರಿಣಾಮ ಬೀರುತ್ತವೆ. ಹಾಗೇ ರಾಜಕೀಯದ ಮೇಲೂ ಪರಿಣಾಮ ಬೀರುತ್ತೆ ಅನ್ನೋದಕ್ಕೆ ಕೆಲವರು ಎಕ್ಸಾಂಪಲ್‌ಗಳನ್ನ ಕೊಡ್ತಾರೆ. ಸಾಮಾನ್ಯವಾಗಿ ಗ್ರಹಣದ ಎಫೆಕ್ಟ್ ಗ್ರಹಣ ಶುರುವಾಗೋದಕ್ಕೂ ಹಿಂದಿನ ಮೂರು ತಿಂಗಳು ಮತ್ತು ಗ್ರಹಣ ಶುರುವಾದ್ಮೇಲೆ ಮುಂದಿನ ಮೂರು ತಿಂಗಳು ಇರುತ್ತೆ ಅನ್ನೋದನ್ನ ಜ್ಯೋತಿಷಿಗಳು ಹೇಳ್ತಾರೆ. ರಾಜಕೀಯದ ಮೇಲೆ ಗ್ರಹಣದ ಪರಿಣಾಮ ಬೀರಿದ್ರೆ ಅದು ಕ್ರಾಂತಿಯೇ ಆಗುತ್ತೆ. ಈಗಾಗಲೇ ಕಾಂಗ್ರೆಸ್‌ನಲ್ಲಿ ಇದ್ದವರೇ ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಅನ್ನೋ ಬಾಂಬ್ ಹಾಕ್ತಿದ್ದಾರೆ. ಅಂತಾ ಬೆಳವಣಿಗಳು ನಡೆದ್ರೂ ಅಚ್ಚರಿಯಿಲ್ಲ.
ಇಂದಿರಾ ಗಾಂಧಿಗೆ ಕಿರಿಕಿರಿ ಮಾಡಿತ್ತು ಗ್ರಹಣ!
ಗ್ರಹಣಗಳು ರಾಜಕೀಯದ ಮೇಲೆ ಪರಿಣಾಮ ಬೀರುತ್ತವೆ ಅನ್ನೋದ್ ಜ್ಯೋತಿಷಿಗಳು ಹೇಳ್ತಾರೆ. ಅದು ಯಾವ ರೀತಿಯಲ್ಲಿ ಅಂದ್ರೆ, ಗ್ರಹಣ ಯಾವ ರಾಶಿಯಲ್ಲಿ ಯಾವ ನಕ್ಷತ್ರಲ್ಲಿ ನಡೆಯುತ್ತೋ? ಅದೇ ರಾಶಿ ನಕ್ಷತ್ರದ ರಾಜಕಾರಣಿಗಳು ಮೇಲೆ ಪರಿಣಾಮ ಬೀರುತ್ತವೆ. ಗ್ರಹಣ ನಡೆಯೋ ರಾಶಿ ನಕ್ಷತ್ರದಲ್ಲಿ ಹಿಂದೆ ಮುಂದೆ ಇರೋ ರಾಶಿ ನಕ್ಷತ್ರಗಳ ಮೇಲೂ ಪರಿಣಾಮ ಬೀರುತ್ತವೆ ಅನ್ನೋದನ್ನ ಜ್ಯೋತಿಷಿಗಳು ಹೇಳ್ತಾರೆ. 15 ದಿನದಲ್ಲಿ ಎರಡು ಗ್ರಹಣ ನಡೀತಾ ಇರೋದು ರಾಷ್ಟ್ರ ರಾಜಕೀಯ ಮೇಲೆ ಪರಿಣಾಮ ಬೀರುತ್ತಾ? 1980 ರಲ್ಲಿ ಒಂದರ ಹಿಂದೊಂದ್ ಗ್ರಹಣಗಳು ಕಾಣಿಸ್ಕೊಂಡಾಗ ಇಂದಿರಾ ಗಾಂಧಿ ರಾಜಕೀಯ ಮೇಲೂ ಪರಿಣಾಮ ಬೀರಿತ್ತು ಅನ್ನೋದನ್ನ ಕೆಲವು ಪಂಡೀತರು ಹೇಳ್ತಾರೆ.
ಇದನ್ನೂ ಓದಿ:ಇವತ್ತು ಮತ್ತೊಂದು ವಿಸ್ಮಯ.. ಸೂರ್ಯ ಗ್ರಹಣದ ಸಮಯ ಹಾಗೂ ಎಲ್ಲೆಲ್ಲಿ ಗೋಚರಿಸುತ್ತದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ