/newsfirstlive-kannada/media/media_files/2025/09/12/solar-eclipse-2025-09-12-14-53-29.jpg)
ಈಗಷ್ಟೇ ಚಂದ್ರ ಗ್ರಹಣದ ಕೌತುಕ ಕಣ್ತುಂಬಿಕೊಂಡಿದ್ದ ವಿಶ್ವಕ್ಕೆ ಈಗ ಮತ್ತೊಂದು ವಿಸ್ಮಯ ನೋಡುವ ಸಮಯ ಬಂದಾಗಿದೆ. ಇಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸ್ತಿದ್ದು, ಇಡೀ ವಿಜ್ಞಾನ ಲೋಕ ಕೌತುಕದಿಂದ ಸಜ್ಜಾಗಿ ನಿಂತಿದೆ. ಹಾಗಾದರೆ ಸೂರ್ಯಗ್ರಹಣ ಸಂಭವಿಸುವ ಸಮಯ, ಭಾರತದಲ್ಲಿ ಈ ಗ್ರಹಣ ಗೋಚರಿಸುತ್ತದೆಯೋ ಇಲ್ಲವೋ? ಅನ್ನೋ ವಿವರ ಇಲ್ಲಿದೆ.
ಹುಣ್ಣಿಮೆಯಂದು.. ಖಗ್ರಾಸ ರಕ್ತ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿದ್ದ ಭೂಮಂಡಲ.. ಇದೀಗ ಕೇತು ಗ್ರಸ್ತ ಸೂರ್ಯ ಗ್ರಹಣ ಕಾಣೋಕೆ ಸಜ್ಜಾಗಿ ನಿಂತಿದೆ. ಖಗೋಳದಲ್ಲಿ ನಡೆಯಲಿರುವ ಮತ್ತೊಂದು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಇಡೀ ವಿಜ್ಞಾನ ಲೋಕವೇ ಕೌತುಕದಿಂದ ಕಾಯ್ತಿದೆ.
ಇದನ್ನೂ ಓದಿ:ಕೇರಳದಲ್ಲಿರೋ ಮೆದುಳು ತಿನ್ನುವ ಅಮೀಬಾ ಎಷ್ಟೊಂದು ಡೇಂಜರ್​ ಗೊತ್ತಾ..?
/filters:format(webp)/newsfirstlive-kannada/media/post_attachments/wp-content/uploads/2024/10/solar-eclipse.jpg)
ಮಹಾಲಯ ಅಮಾವಾಸ್ಯೆಯಂದೇ ಸೂರ್ಯ ಗ್ರಹಣ
ಮಹಾಲಯ ಅಮಾವಸ್ಯೆಯಂದೇ ಸಂಭವಿಸ್ತಿರೋ ಈ ವರ್ಷದ ಕೊನೆ ಖಂಡಗ್ರಾಸ ಸೂರ್ಯ ಗ್ರಹಣ ಭಾರತದಲ್ಲಿ ಗೋಚರವಾಗ್ತಿಲ್ಲ. ಭಾರತೀಯ ಕಾಲಮಾನ 21ರ ರಾತ್ರಿ 10 ಗಂಟೆ 59 ನಿಮಿಷದಿಂದ ಸೆಪ್ಟಂಬರ್​ 22ರ ಬೆಳಗಿನ ಜಾವ 3.23 ನಿಮಿಷಗಳವರೆಗೆ ಗ್ರಹಣ ಸಂಭವಿಸಲಿದೆ.
ಕೇತುಗ್ರಸ್ತ ಸೂರ್ಯಗ್ರಹಣ
- ಗ್ರಹಣ ಸಮಯಲ್ಲಿ ಸೂರ್ಯ ಕನ್ಯಾ ರಾಶಿಯನ್ನ ಪ್ರವೇಶಿಸ್ತಾನೆ
- ಅಂಟಾರ್ಟಿಕಾ, ಕುಕ್ ಐಸ್‌ಲ್ಯಾಂಡ್, ಫ್ರೆಂಚ್ ಪೋಲಿನೇಷ್ಯಾ
- ಆಸ್ಟ್ರೇಲಿಯಾ, ಇಂಡೋನೇಷ್ಯಾದಲ್ಲಿ ಗ್ರಹಣ ಗೋಚರಿಸಲಿದೆ
- ದಕ್ಷಿಣ ಪೆಸಿಫಿಕ್ ಮಹಾಸಾಗರದ ಕೆಲವು ಭಾಗಗಳಲ್ಲಿ ಗೋಚರ
- ಖಂಡಗ್ರಾಸ ಸೂರ್ಯ ಗ್ರಹಣ ಬಹುತೇಕ ಕಡೆ ಗೋಚರಿಸಲ್ಲ
/filters:format(webp)/newsfirstlive-kannada/media/post_attachments/wp-content/uploads/2024/04/Solar-Eclipse.jpg)
2025ರ ಈ ಅಂತಿಮ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಭಾರತದಲ್ಲಿ ರಾತ್ರಿಯಲ್ಲಿ ಸಂಭವಿಸುವುದರಿಂದ, ಇಲ್ಲಿ ಗೋಚರತೆ ಇರುವುದಿಲ್ಲ. ಆದ್ದರಿಂದ, ಧಾರ್ಮಿಕ ದೃಷ್ಟಿಕೋನದಿಂದ, ಭಾರತದಲ್ಲಿ ಸೂತಕ ಕಾಲವು ಅನ್ವಯವಾಗುವುದಿಲ್ಲ. ಗ್ರಹಣಕ್ಕೆ ಯಾರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಹಿರಿಯ ಭೌತಶಾಸ್ತ್ರಜ್ಞ ಡಾ. ಎ.ಪಿ ಭಟ್ ಹೇಳಿದ್ದಾರೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಈ ಅಪರೂಪದ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಬಾರಿಯ ಸೂರ್ಯ ಗ್ರಹಣ ವಿಜ್ಞಾನಿಗಳಿಗೆ ಹಾಗೂ ಆಸಕ್ತರಿಗೆ ವಿಶೇಷವಾಗಿದೆ. ಒಟ್ಟಾರೆ.. ಈ ಸೂರ್ಯಗ್ರಹಣದ ಸೂತಕ ಕಾಲವು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ, ಇದು ಪೂಜೆ ಅಥವಾ ಇತರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಇದನ್ನೂ ಓದಿ:ಟೀಮ್ ಇಂಡಿಯಾ ಜೊತೆ ವಿಶೇಷ ದಾಖಲೆ ಬರೆದ ಒಮಾನ್ ಓಪನರ್ಸ್​.. ಏನದು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us