/newsfirstlive-kannada/media/media_files/2025/09/20/amoeba_cases-2025-09-20-15-11-45.jpg)
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರಕ್ಕಸಕ್ಕೆ ಈವರೆಗೆ 19 ಜನರು ಬಲಿಯಾಗಿದ್ದಾರೆ. ಈ ವರ್ಷದಲ್ಲಿ ಇಲ್ಲಿಯವರೆಗೆ 61 ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಆತಂಕಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಸದ್ಯ ಈ ಮೆದುಳು ತಿನ್ನುವ ಅಮೀಬಾ ದೇವರನಾಡಿನಲ್ಲಿ ಆತಂಕ ಮೂಡಿಸಿದ್ದಂತೂ ಸತ್ಯ. ಈ ಎಲ್ಲದ ನಡುವೆ ಮೆದುಳು ತಿನ್ನುವ ಅಮೀಬಾ ಎಂದರೆ ಏನು?.
ಮೆದುಳು ತಿನ್ನುವ ಅಮೀಬಾ ಎಂದರೆ Primary Amoebic Meningoencephalitis ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಕರ್ನಾಟಕದ ನೆರೆಯ ರಾಜ್ಯವಾದ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ್ದೇ ಸುದ್ದಿಯಾಗಿದೆ. ಇದರಿಂದಗಾಗಿಯೇ ನದಿ, ಕೆರೆ, ಹಳ್ಳ, ತೊರೆ, ಝರಿ ಬಳಿ ಹೋಗದಂತೆ ಆಗಿದೆ. ಈ ಬಗ್ಗೆ ಪ್ರವಾಸಿಗರಿಗೂ ಎಚ್ಚರಿಕೆ ನೀಡಲಾಗಿದೆ. ಮೆದುಳು ತಿನ್ನುವ ಅಮೀಬಾ ಒಂದು ಏಕಕೋಶ ಪರಾವಲಂಬಿ ಜೀವಿ ಆಗಿದೆ. ಇದು ಜೀವಿಸಬೇಕು ಎಂದರೆ ಇತರೆ ಜೀವಿಯನ್ನ ಅವಲಂಬಿಸಬೇಕು. ಹೀಗಾಗಿಯೇ ಇದನ್ನ ಪರಾವಲಂಬಿ ಜೀವಿ ಎಂದು ಕರೆಯುತ್ತಾರೆ.
ನೀರಿನಲ್ಲಿ ಈಜುವಾಗ ಮೂಗಿನ ಮೂಲಕ ನಮ್ಮ ದೇಹದ ಒಳಗೆ ಸೇರಿ ಮೆದುಳನ್ನು ಸೇರಿ ಅಲ್ಲಿಂದ ಜೀವಕ್ಕೆ ಹಾನಿ ಮಾಡುತ್ತದೆ. ಈ ವೇಳೆ ನಮ್ಮಲ್ಲಿ ಉರಿಯೂತ, ಬೆನ್ನು ನೋವು, ಬೆನ್ನು ಉರಿ ಸೇರಿ ಇತರೆ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಒಮ್ಮೆ ಈ ಮೆದುಳು ತಿನ್ನುವ ಅಮೀಬಾ ನಮ್ಮ ದೇಹ ಸೇರಿದರೆ ಶೇ. 99 ರಷ್ಟು ಜೀವ ಹಾನಿ ಮಾಡುವುದು ಖಚಿತ. ಕೆಲವೇ ಕೆಲವು ದಿನಗಳಲ್ಲಿ ಅಂದರೆ ತಿಂಗಳ ಒಳಗಾಗಿ ಜೀವ ಕಸಿದುಕೊಳ್ಳುತ್ತದೆ. ಹೀಗಾಗಿ ಮೊದಲೇ ಹೆಚ್ಚಿನ ಜಾಗೃತಿ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಇದನ್ನೂ ಓದಿ:ದಿನಕ್ಕೆ ಎರಡೇ 2 ಬಾಳೆಹಣ್ಣು ತಿನ್ನಿ ಸಾಕು.. ದೇಹದ ಆರೋಗ್ಯದಲ್ಲಿ ಭಾರೀ ಬದಲಾಣೆಗಳು ಪಕ್ಕಾ!
- ಸಮುದ್ರದ ಉಪ್ಪು ನೀರಿನಲ್ಲಿ ಅಮೀಬಾ ಬದುಕುವುದಿಲ್ಲ
- ಮೆದುಳು ತಿನ್ನುವ ಅಮೀಬಾ ಸಾಂಕ್ರಾಮಿಕವಲ್ಲದ ರೋಗ
- ಅಮೀಬಾವೂ 40 ರಿಂದ 45 ಡಿಗ್ರಿ ಸೆಲ್ಸಿಯಸ್‌ನ ಉಷ್ಣತೆಯಲ್ಲಿ ಬದುಕುತ್ತೆ
- ನೀರಿನಲ್ಲಿ ಈಜಾಡುವ ಮಕ್ಕಳಲ್ಲಿ ಹೆಚ್ಚಾಗಿ ಇದು ಕಾಣಿಸುತ್ತದೆ
- ಇದು ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ 1961-65ರಲ್ಲಿ ಕಾಣಿಸಿತ್ತು
- ಅಮೀಬಾದಿಂದ ಏಕಾಗ್ರತೆ ಕೊರತೆ, ದೃಷ್ಟಿ ಮಂದ, ತಲೆನೋವು, ಅಪಸ್ಮಾರ ಬರುತ್ತೆ
- ತಲೆನೋವು, ವಾಂತಿ, ಸುಸ್ತು, ವಾಕರಿಕೆ ಜ್ವರ ಬರುವುದು ಸಾಮಾನ್ಯ
- ಮಾನಸಿಕ ಗೊಂದಲ, ಮುಖದಲ್ಲಿ ಗುಳ್ಳೆಗಳು, ಅಸ್ಥಿರತೆ ಕಾಡುತ್ತೆ
- ಮನುಷ್ಯ ಕೊನೆ ಹಂತದಲ್ಲಿ ಕೋಮಾಗೆ ಹೋಗುವ ಸಾಧ್ಯತೆ ಇದೆ
ಸಮುದ್ರ ತೀರಗಳ ಪ್ರದೇಶಗಳಲ್ಲಿ ಮೆದುಳು ತಿನ್ನುವ ಅಮೀಬಾ ಹೆಚ್ಚು ಆ್ಯಕ್ಟಿವ್ ಆಗಿರುತ್ತದೆ. ಕೇರಳ, ತಮಿಳುನಾಡು, ಬಂಗಾಳ, ಒಡಿಶಾ ತೀರಗಳಲ್ಲಿ ಈ ರೋಗದ ಕಂಡುಬರುತ್ತಿರುತ್ತದೆ. ಅಮೀಬಾ ಹೆಚ್ಚು ಉಷ್ಣಾಂಶ, ತೇವಾಂಶ ಇರುವ ಕಡೆ ಬೆಳವಣಿಗೆ ಸುಲಭವಾಗುತ್ತದೆ. ನಿಮ್ಮ ಮನೆಯ ಪಕ್ಕದ ಕೆರೆ, ಬಾವಿಗಳಲ್ಲೂ ಇದು ಇರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ