/newsfirstlive-kannada/media/media_files/2025/10/01/tirupati_timmappa-2025-10-01-14-17-20.jpg)
ತಿರುಪತಿ: ಭೂಲೋಕದ ವೈಕುಂಠವೆಂದು ಎಂದೇ ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಿ ಪ್ರಖ್ಯಾತಿ ಪಡೆದಿದೆ. ಮೊದಲಿನಿಂದಲೂ ಶ್ರೀವೆಂಕಟೇಶ್ವರನಿಗೆ ಭಕ್ತರು ದಂಡು ದೊಡ್ಡ ಮಟ್ಟದಲ್ಲೇ ಇದೆ. ಹಾಗೇ ಭಕ್ತರ ಸಂಕಟಗಳನ್ನು ನಿವಾರಿಸುವ ಈ ಗೋವಿಂದ, ವಿಶ್ವದ ಅತ್ಯಂತ ಶ್ರೀಮಂತ ಎನ್ನುವ ಪಟ್ಟವನ್ನು ಈ ಹಿಂದೆಯೇ ಅಲಂಕರಿಸಿದ್ದಾರೆ. ಈಗ ಹೊಸದು ಏನೆಂದರೆ ಇತ್ತೀಚೆಗೆ ವಿದೇಶಿ ಭಕ್ತರು ಹೆಚ್ಚಾಗಿದ್ದು ಇದುವರೆಗೂ 197 ರಾಷ್ಟ್ರಗಳ ಪೈಕಿ 157 ದೇಶಗಳ ಕರೆನ್ಸಿ ತಿಮ್ಮಪ್ಪನ ಹುಂಡಿಯಲ್ಲಿ ಪತ್ತೆ ಆಗಿವೆ. ಇದರ ಒಟ್ಟು ಮೊತ್ತ ಎಷ್ಟು ಕೋಟಿ ರೂಪಾಯಿ ಗೊತ್ತಾ?.
ತಿರುಮಲದ ಬೆಟ್ಟಕ್ಕೆ ಯಾರೇ ಭಕ್ತರು ಬಂದರೂ ಅವರು ಶ್ರೀವೆಂಕಟೇಶ್ವರನಿಗೆ ಒಂದು ರೂಪಾಯಿ ಕಾಣಿಕೆ ಹಾಕದೇ ಹಾಗೇ ಹೋಗುವುದಿಲ್ಲ. ಶ್ರೀನಿವಾಸನ ಹುಂಡಿಗೆ ನಗದು ಹಣ, ನಾಣ್ಯ, ಚಿನ್ನಾಭರಣಗಳು ಸೇರಿದಂತೆ ಭೂಮಿ, ಭವನ, ಜಮೀನುಗಳ ಪತ್ರಗಳು ಕೂಡ ಭಕ್ತರು ಹಾಕಿ ಹೋಗುತ್ತಿರುತ್ತಾರೆ. ಹುಂಡಿ ಎನ್ನುವುದು ಹಣ ಶೇಕರಣೆ ಮಾಡುವ ಸಾಧನ ಅಲ್ಲ. ಅದು ಭಕ್ತಿಗೆ ಪ್ರತಿಕಾವಾಗಿದೆ. ಹೀಗಾಗಿಯೇ ದೇಶ-ವಿದೇಶಗಳಿಂದ ಬರುವ ಭಕ್ತರು ತಮ್ಮ ತಮ್ಮ ದೇಶದ ಕರೆನ್ಸಿ ನೋಟುಗಳನ್ನು ಹುಂಡಿಗೆ ಹಾಕುತ್ತಿದ್ದಾರೆ.
201,65,97,829 ರೂಪಾಯಿ ಆದಾಯ
ಹೀಗಾಗಿಯೇ ಶ್ರೀನಿವಾಸನ ಹುಂಡಿಯಲ್ಲಿ ವಿಶ್ವದ 197 ರಾಷ್ಟ್ರಗಳ ಪೈಕಿ 157 ದೇಶಗಳ ಕರೆನ್ಸಿ, ನೋಟುಗಳು ಪತ್ತೆ ಆಗಿರೋದು ಆಚ್ಚರಿ ಮೂಡಿಸಿದೆ. 2015 ರಿಂದ 2025ರ ವರೆಗೆ ದಾಖಲೆಗಳ ಆಧಾರದ ಮೇಲೆ 201,65,97,829 ರೂಪಾಯಿ ವಿದೇಶಿ ಕಾಯಿನ್ಸ್, ನೋಟುಗಳು ತಿಮ್ಮಪ್ಪಗೆ ಒಲಿದು ಬಂದಿವೆ. ಕಳೆದ 10 ವರ್ಷಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಪ್ರತಿ ವರ್ಷಕ್ಕೆ 20.16 ಕೋಟಿ ರೂಪಾಯಿ ವಿದೇಶಿ ಸಂಪತ್ತು ಗೋವಿಂದನ ಮಡಿಲಿಗೆ ಬಂದು ಬಿದ್ದಿವೆ.
ವಿದೇಶಿ ಕರೆನ್ಸಿಯನ್ನು ಟಿಟಿಡಿ (Tirumala Tirupati Devasthanams)ಯೂ ಮನಿ ಚೇಂಜರ್ಸ್​ ಮೂಲಕ ಬದಲಾವಣೆ ಮಾಡಿ ಭಾರತೀಯ ಕರೆನ್ಸಿಯನ್ನು ಪಡೆಯುತ್ತದೆ. 2003ರ ವರೆಗೆ ಹುಂಡಿಯಲ್ಲಿ ಪತ್ತೆ ಆಗುತ್ತಿದ್ದ ನಾಣ್ಯಗಳನ್ನು ವಿಕ್ರಯ (ನಾಣ್ಯಕ್ಕೆ ಬದಲಾಗಿ ಇನ್ನೊಂದು ವಸ್ತು ಪಡೆಯುವುದು) ಮಾಡಲಾಗುತ್ತಿತ್ತು. ನಂತರ ಅವುಗಳ ಮೌಲ್ಯಗಳಿಗೆ ತಕ್ಕಂತೆ ಬದಲಾವಣೆ ಮಾಡಲಾಗುತ್ತಿದೆ. ಎಫ್​ಸಿಆರ್​ಎ ಮಾರ್ಗದರ್ಶನದ ಪ್ರಕಾರ ತಿರುಮಲದ ಎಸ್​ಬಿಐ ಬ್ರ್ಯಾಂಚ್​ನಿಂದ ದೆಹಲಿಯಲ್ಲಿರುವ ಎಸ್​ಬಿಐ ಬ್ರ್ಯಾಂಚ್​ಗೆ ತಿಮ್ಮಪ್ಪನ ವಿದೇಶ ಕರೆನ್ಸಿ, ನೋಟುಗಳನ್ನು ಜಮೆ ಮಾಡಲಾಗುತ್ತಿದೆ.
ಈ ಹಿಂದೆ ದಂಡ ಹಾಕಿದ್ದರು.. ಯಾಕೆ?
ಎರಡು ವರ್ಷಗಳ ಹಿಂದೆ ಟಿಟಿಡಿ ಎಫ್​ಸಿಆರ್​ಎ (ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯೂಲೆಷನ್ ಆ್ಯಕ್ಟ್​) ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೂಡ ಕೇಳಿ ಬಂದಿತ್ತು. ದೇಣಿಗೆ ಕೊಡುವವರ ವಿವರವನ್ನು ಕೊಡುತ್ತಿಲ್ಲ ಎಂದು ದಂಡ ಕೂಡ ಹಾಕಲಾಗಿತ್ತು. ಹುಂಡಿಯಲ್ಲಿ ಕಾಣಿಕೆ ಹಾಕುವುದರಿಂದ ಈ ಕಾಣಿಕೆ ಶ್ರೀನಿವಾಸಗೆ ಸಪರ್ಪಿಸಿರುವ ಕಾಣಿಕೆ ಎಂದು ಪರಿಗಣಿಸಲಾಗುತ್ತಿದೆ. ಹೀಗಾಗಿ ದೇಣಿಗೆದಾರರ ವಿವರ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಆ್ಯಕ್ಟ್​ನಿಂದ ವಿನಾಯತಿ ಸಿಕ್ಕಿದೆ.
2007ರ ವರೆಗೆ 15 ರಿಂದ 30 ದೇಶಗಳಿಗೆ ಸಂಬಂಧಿಸಿದ ಕರೆನ್ಸಿ, ನೋಟುಗಳು ಪತ್ತೆ ಆಗಿವೆ ಎಂದು ದಾಖಲೆಗಳು ಹೇಳುತ್ತವೆ. ಇದರ ನಂತರ ಇತರೆ ದೇಶಗಳ ನಾಣ್ಯ, ನೋಟುಗಳು ಹೆಚ್ಚಾಗಿ ಹುಂಡಿಗೆ ಹಾಕಲಾಗುತ್ತಿದೆ. 2010ರವರೆಗೆ ದೇವಾಲಯದ ಲೆಕ್ಕ ನೋಡಿದರೆ ಸಿಂಗಾಪುರ್, ಅಮೆರಿಕ ಡಾಲರ್​, ಯೂರೋ ಸೆಂಟ್, ಬ್ರಿಟಿಷ್ ಪೌಂಡ್​, ಮೆಲೇಷಿಯಾ, ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾದ ಕರೆನ್ಸಿ ಹೆಚ್ಚಾಗಿ ಬರುತ್ತಿತ್ತು.
ಯಾವ್ಯಾವ ದೇಶಗಳ ಕರೆನ್ಸಿ ಪತ್ತೆ
ಇದಾದ ಮೇಲೆ ಮೆಲೇಷಿಯಾ, ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾದ ಕರೆನ್ಸಿ ಜೊತೆಗೆ ಯುಎಇ ಕರೆನ್ಸಿ ಕೂಡ ಹೆಚ್ಚಾಗಿ ಬರಲು ಶುರುವಾಗಿದೆ. ಗೋವಿಂದನ ಕಾಣಿಕೆ ಹುಂಡಿಯಲ್ಲಿ ಪಾಕಿಸ್ತಾನದ ಕರೆನ್ಸಿ ಕೂಡ ಪತ್ತೆ ಅಗಿವೆ.
2004ರಲ್ಲಿ 10 ಟನ್​ ವಿದೇಶಿ ನಾಣ್ಯಗಳನ್ನು ವಿಕ್ರಯ ಮಾಡಿ ಅಂದಾಜು 1 ಕೋಟಿ ರೂಪಾಯಿ ಆದಾಯ ಪಡೆದುಕೊಂಡಿದೆ. ಇದರಲ್ಲಿ 80 ಲಕ್ಷ ಸಿಂಗಾಪುರ ಡಾಲರ್​, 1.6 ಲಕ್ಷ ಅಮೆರಿಕ ಡಾಲರ್​, 3 ಸಾವಿರ ಯೂರೋ ಸೆಂಟ್, 35 ಸಾವಿರ ಬ್ರಿಟಿಷ್ ಪೌಂಡ್​, 8 ಲಕ್ಷ ಮೆಲೇಷಿಯಾದ ರಿಂಗಿಟ್​, 4 ಸಾವಿರ ಆಸ್ಟ್ರೇಲಿಯಾ ಡಾಲರ್​, ಒಂದು ಸಾವಿರ ದಕ್ಷಿಣ ಆಫ್ರಿಕಾ ರಾಂಡ್​, 15 ಸಾವಿರ ಕೆನಡಿಯನ್ ಸೆಂಟ್​, 10 ಸಾವಿರ ಶ್ರೀಲಂಕಾದ ಹಣ ಇತ್ತು.
ಇದನ್ನೂ ಓದಿ:ಆಂಧ್ರದ ಯುವತಿ ಮೇಲೆ ತಮಿಳುನಾಡಿನ ಇಬ್ಬರು ಪೊಲೀಸರಿಂದ ಲೈ*ಗಿಕ ದೌರ್ಜನ್ಯ
ಹುಂಡಿಯಲ್ಲಿ 6 ದಿನದಲ್ಲಿ 14 ದೇಶದ ಕರೆನ್ಸಿ
2007ರ ಡಿಸೆಂಬರ್ ತಿಂಗಳ ಕೊನೆ ವಾರದಲ್ಲಿ ಕೇವಲ 6 ದಿನಗಳಲ್ಲಿ 14 ದೇಶಕ್ಕೆ ಸಂಬಂಧಿಸಿದ ಕರೆನ್ಸಿ ಹುಂಡಿಯಲ್ಲಿ ಇದ್ದವು.
2015ರಲ್ಲಿ 44.81 ಕೋಟಿ ರೂಪಾಯಿ ಬೇರೆ ಬೇರೆ ದೇಶಗಳ ಕರೆನ್ಸಿ ಹುಂಡಿಯಲ್ಲಿ ಪತ್ತೆ ಆಗಿವೆ.
2016ರಲ್ಲಿ ತಿಮ್ಮಪ್ಪನ ಹುಂಡಿಯಿಂದ 50.63 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಕಾಣಿಕೆಯಾಗಿ ಬಂದಿದೆ.
2020-21 ಕೊರೊನಾ ಸಮಯದಲ್ಲಿ 1.92 ಕೋಟಿ ರೂಪಾಯಿ ಬೇರೆ ದೇಶಗಳ ಕರೆನ್ಸಿ ಸ್ವಾಮಿ ಹುಂಡಿಗೆ ಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ