/newsfirstlive-kannada/media/media_files/2025/10/31/gold_rate_bng-2025-10-31-12-43-16.jpg)
ಬೆಂಗಳೂರು: ಚಿನ್ನಾಭರಣಗಳ ಬೆಲೆ ಮಾರ್ಕೆಟ್​ನಲ್ಲಿ ಇಂದು ಇದ್ದ ದರ ನಾಳೆ ಇರುವುದಿಲ್ಲ. ನಾಳೆ ಇರುವ ದರ ನಾಡಿದ್ದು ಇರೋದಿಲ್ಲ. ಇದೇ ದೀಪಾವಳಿ ಹಬ್ಬದಲ್ಲಿ ಭಾರೀ ಹೆಚ್ಚಳವಾಗಿದ್ದ ಬಂಗಾರ 10 ಸಾವಿರ ರೂಪಾಯಿ ಇಳಿಕೆ ಕಂಡಿತ್ತು. ಇದು ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿತ್ತು. ಹಲವು ತಿಂಗಳಿನಿಂದ ಚಿನ್ನ ಮಾತ್ರ ನಾನು ಯಾರು ಕೈಗೆ ಸಿಗಲ್ಲ ಎಂದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತ ಹೋಗುತ್ತಿದೆ. ಇದೀಗ ಮತ್ತೆ ದೊಡ್ಡ ಮಟ್ಟದಲ್ಲೇ ಬೆಲೆ ಏರಿಕೆ ಆಗಿದೆ.
ಶುಭ ಸಮಾರಂಭಗಳಲ್ಲಿ ಎಲ್ಲರ ಕುತ್ತಿಗೆ, ಕೈ, ಬೆರಳುಗಳಲ್ಲಿ ಕಂಗೊಳಿಸುತ್ತಿದ್ದ ಬಂಗಾರ, ಬಡವರ ಕೈಗೆಟುಕುವುದು ತುಂಬಾ ದೂರವಾಗಿದೆ. ಹಳದಿ ಲೋಹ ಎಂದರೆ ಹೆಚ್ಚು ಇಷ್ಟ ಪಡುತ್ತಿದ್ದ ಮಹಿಳೆಯರೇ ಈಗೀಗ ಚಿನ್ನ ಎಂದರೆ ಖರೀದಿ ಬೇಡ ಎನ್ನುವ ಆಲೋಚನೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಅದೇ ಚಿನ್ನ ಖರೀದಿ ಮಾಡೋ ಬದಲು ಬೇರೆ ಕಡೆ ಹಣ ಹೂಡಿಕೆ ಅಥವಾ ಮನೆಗೆ ಹೊಸ ವಸ್ತುಗಳನ್ನು ತರಬಹುದು ಎಂದು ನಿರ್ಧರಿಸುತ್ತಿದ್ದಾರೆ ಎನ್ನಲಾಗಿದೆ. ಈ ಎಲ್ಲವೂ ಈಗಿದ್ದರೇ ಸದ್ಯ ಬೆಂಗಳೂರಿನಲ್ಲಿ ಬಂಗಾರದ ದರ 2,100 ರೂಪಾಯಿ ಹೆಚ್ಚಾಗಿದೆ.
ಇದನ್ನೂ ಓದಿ: ಮಹಿಳೆಗೆ ಕಿರುಕುಳ ಆರೋಪ.. ಬೆಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಅರೆಸ್ಟ್​
/filters:format(webp)/newsfirstlive-kannada/media/media_files/2025/10/19/gold_new-2025-10-19-13-28-41.jpg)
22 ಕ್ಯಾರೆಟ್​ನ ಚಿನ್ನದ ಬೆಲೆ ಹೇಗಿದೆ?.
| 1 ಗ್ರಾಂ ಚಿನ್ನ | ಇಂದಿನ ಬೆಲೆ | ನಿನ್ನೆಯ ಬೆಲೆ | ಎಷ್ಟು ರೂ. ಹೆಚ್ಚಳ |
| 1 ಗ್ರಾಂ | 11,355 | 11,155 | 200 |
| 8 ಗ್ರಾಂ | 90,840 | 89,240 | 1,600 |
| 10 ಗ್ರಾಂ | 1,13,550 | 1,11,550 | 2,000 |
24 ಕ್ಯಾರೆಟ್​ನ ಬಂಗಾರದ ದರ?.
| 1 ಗ್ರಾಂ ಚಿನ್ನ | ಇಂದಿನ ಬೆಲೆ | ನಿನ್ನೆಯ ಬೆಲೆ | ಎಷ್ಟು ರೂ. ಹೆಚ್ಚಳ |
| 1 ಗ್ರಾಂ | 11,923 | 11,713 | 210 |
| 8 ಗ್ರಾಂ | 95,384 | 93,704 | 1,680 |
| 10 ಗ್ರಾಂ | 1,19,230 | 1,17,130 | 2,100 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us