/newsfirstlive-kannada/media/media_files/2025/10/31/bc_mylarappa-2025-10-31-11-37-30.jpg)
ಬೆಂಗಳೂರು: ಮಹಿಳೆಗೆ ಕಿರುಕುಳ ನೀಡಿದ್ದ ಆರೋಪದ ಪ್ರಕರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಹಾಗೂ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ಆದ ಬಿ.ಸಿ ಮೈಲಾರಪ್ಪ ಅವರನ್ನು ಬಸವೇಶ್ವರ ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ವಿವಾದಿತ ಪ್ರೊ.ಬಿ.ಸಿ ಮೈಲಾರಪ್ಪ ಅವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿರುವ ಆರೋಪದಲ್ಲಿ ಬಂಧಿಸಲಾಗಿದೆ. ಮಹಿಳೆಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಡ ಏರುತ್ತಿದ್ದರು. ಫೋನ್ ಮಾಡಿಯೂ ಸಹಕರಿಸುವಂತೆ ಹೇಳುತ್ತಿದ್ದನಂತೆ. ಅಲ್ಲದೇ ಅವರ ಮನೆಯ ಬಳಿಯು ಹೋಗಿ ಕಿರುಕುಳ ನೀಡಿದ್ದಾರೆ.
ಇದನ್ನೂ ಓದಿ:ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಮತ್ತೆ 3 ಪ್ರಕರಣ
ತನಗೆ ಸಹಕರಿಸಬೇಕು ಎಂದು ಫೋನ್​ನಲ್ಲಿ ಹೇಳುತ್ತಿದ್ದನು. ಮನೆ ಬಳಿ ಹೋಗಿ ಬಾಗಿಲು ತೆರೆಯುವಂತೆ ಪೀಡಿಸುತ್ತಿದ್ದನು. ಈ ಸಂಬಂಧ ಮಹಿಳೆ ಬಸವೇಶ್ವರ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು, ಸದ್ಯ ಪ್ರೊ.ಬಿ.ಸಿ ಮೈಲಾರಪ್ಪನನ್ನು ಬಂಧಿಸಿದ್ದಾರೆ. ಇದು ಅಲ್ಲದೇ ಮತ್ತೆ ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿಯೂ ಕಾಮಾಕ್ಷಿಪಾಳ್ಯದಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


