Union Budget: ಇವತ್ತು ಕೇಂದ್ರದ ಬಜೆಟ್ ಮಂಡನೆ.. ಜನ ಸಾಮಾನ್ಯರ ನಿರೀಕ್ಷೆಗಳೇನು..?

ಇಂದು ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯವನ್ನ ಮಂಡಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಮಂಡನೆಯಾಗಲಿರುವ ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ.

author-image
Ganesh Kerekuli
nirmala seetaraman
Advertisment

ಇಂದು ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯವನ್ನ ಮಂಡಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಮಂಡನೆಯಾಗಲಿರುವ ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ. 

ಈ ಬಾರಿ ಬಜೆಟ್​ನಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಕೇಂದ್ರ ಬಜೆಟ್​ ಮಂಡನೆಗೂ ಮುನ್ನ 16ನೇ ಹಣಕಾಸು ಆಯೋಗದ ವರದಿಯನ್ನ ಸದನದ ಮುಂದೆ ಮಂಡಿಸಲಾಗುತ್ತಿದೆ. ಇದರಲ್ಲಿ ರಾಜ್ಯಗಳ ಪಾಲು ಏನು ಎನ್ನುವುದು ತಿಳಿದುಬರಲಿದೆ. ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲು ಕಡಿಮೆ ದೊರೆಯುತ್ತಿದೆ ಎಂದು ಆರೋಪ ಪದೇ ಪದೇ ಕೇಳಿಬರುತ್ತಿದೆ. ಹಾಗಾಗಿ ಈ ಹಣಕಾಸು ಆಯೋಗದ ವರದಿಲ್ಲಿ ಏನಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ನಿರೀಕ್ಷೆಗಳು ಏನೇನು..? 

  1. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 12 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸಬಹುದು. 
  2. ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಇಳಿಕೆ ಮಾಡಬಹುದು.
  3. ವಿವಾಹಿತ ದಂಪತಿಗಳಿಗೆ ಜಂಟಿ ತೆರಿಗೆ ವ್ಯವಸ್ಥೆ ಜಾರಿಗೊಳಿಸಬಹುದು. ಇದರಿಂದ ದಂಪತಿಗಳಿಗೆ ವಾರ್ಷಿಕ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗಲಿದೆ.
  4. ವಾರ್ಷಿಕ 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಬಹುದು.
  5. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ.5 ಕ್ಕೆ ಇಳಿಕೆ, ಎಲ್‌ಟಿಸಿಜಿ ಶೇ.0 ಕ್ಕೆ ಇಳಿಕೆ
  6. ಮ್ಯೂಚ್ಯುಯಲ್ ಫಂಡ್ ಗಳನ್ನು 5-7 ವರ್ಷದವರೆಗೆ ಹೊಂದಿದ್ದರೇ, ಯಾವುದೇ ತೆರಿಗೆ ಇಲ್ಲ
  7. ಎಚ್‌ಆರ್‌ಎ ಮಿತಿಯನ್ನು ಏರಿಕೆ ಮಾಡಬಹುದು.
  8. ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬಹುದು.
  9. ಈ ಭಾರಿಯ ಬಂಡವಾಳ ವೆಚ್ಚವನ್ನು ಶೇ.10 ರಷ್ಟು ಹೆಚ್ಚಳ ಮಾಡಿ 12 ಲಕ್ಷ ಕೋಟಿ ರೂ.ಗೆ ಏರಿಸಬಹುದು. ಇದರಿಂದ ಹೆದ್ದಾರಿ, ಬಂದರು, ರೈಲ್ವೇ ಸೇರಿ ಮೂಲಸೌಕರ್ಯ ನಿರ್ಮಾಣ
  10. ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.2 ಕ್ಕೆ ತಗ್ಗಿಸುವ ಗುರಿ ಹಾಕಿಕೊಳ್ಳಬಹುದು
  11. ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಎಲ್‌ಟಿಸಿಜಿ, ಎಸ್‌ಟಿಸಿಜಿ ಇಳಿಕೆ.
  12. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ ಸ್ಕೀಮ್ ಯೋಜನೆಯನ್ನು ಮತ್ತಷ್ಟು ಕ್ಷೇತ್ರಕ್ಕೆ, ಮತ್ತಷ್ಟು ವರ್ಷ ವಿಸ್ತರಿಸಬಹುದು.
  13. ಎಂಎಸ್‌ಎಂಇ ಸಾಲ ಸೌಲಭ್ಯವನ್ನು ಹೆಚ್ಚಳ ಮಾಡಬಹುದು
  14. ಹೆಲ್ತ್ ಕೇರ್ ವಲಯದಲ್ಲಿ ಇನ್ಸೂರೆನ್ಸ್ ಸರಳೀಕರಣ ಸೇರಿ ಕೆಲ ಸೌಲಭ್ಯ, ಸುಧಾರಣೆ ಘೋಷಣೆ ನಿರೀಕ್ಷೆ
  15. ಸದ್ಯ ಬೆಳ್ಳಿ ಮೇಲೆ ಶೇ.7.5 ರಷ್ಟು ಕಸ್ಟಮ್ಸ್ ಡ್ಯೂಟಿ ಮತ್ತು ಶೇ.3 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇವೆರಡನ್ನೂ ಕಡಿಮೆ ಮಾಡಿದ್ರೆ ದೇಶದಲ್ಲಿ ಬೆಳ್ಳಿ ಬೆಲೆ ಅಗ್ಗವಾಗಲಿದೆ.
  16. ಇದೇ ರೀತಿ ಚಿನ್ನದ ಮೇಲಿನ ಕಸ್ಟಮ್ಸ್ ಡ್ಯೂಟಿ ಕಡಿಮೆ ಮಾಡಿದ್ರೆ ಚಿನ್ನದ ಬೆಲೆಯೂ ಅಗ್ಗ!
  17. ದೇಶದಲ್ಲಿ ಹೆದ್ದಾರಿ, ಏರ್ ಪೋರ್ಟ್ ಸಂಪರ್ಕ ಉತ್ತಮಪಡಿಸಲು ಹೆಚ್ಚಿನ ಹಣ ಹಂಚಿಕೆ ನಿರೀಕ್ಷೆ
  18. ಜನರ ಮನೆ ಕನಸು ನನಸಾಗಿಸಲು ಅಫರ್ಡಬಲ್ ಹೌಸಿಂಗ್‌ಗೆ ಹೆಚ್ಚಿನ ಒತ್ತು ನಿರೀಕ್ಷೆ.
  19. ಅಫರ್ಡಬಲ್ ಹೌಸಿಂಗ್ ವೆಚ್ಚವನ್ನು 45 ಲಕ್ಷದಿಂದ 60 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆ
  20. ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ
  21. ಅಪರೇಷನ್ ಸಿಂಧೂರ್ ಹಿನ್ನಲೆಯಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚಿನ ಹಣ ಹಂಚಿಕೆ, ಸೇನೆಯ ಅಪ್ ಗ್ರೇಡ್‌ಗೆ ಆದ್ಯತೆೆ, ಹೊಸ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ಹಣ ನೀಡಿಕೆ
  22. ವಂದೇಭಾರತ್ ರೈಲುಗಳಿಗೆ ಹೆಚ್ಚಿನ ಹಣ ಹಂಚಿಕೆ, ರೈಲ್ವೇ ಸುರಕ್ಷತೆ, ರೈಲ್ವೇ ಆಧುನೀಕರಣಕ್ಕೆ ಒತ್ತು ನಿರೀಕ್ಷೆ
  23. ಕೃಷಿ ಸಮ್ಮಾನ್ ನಿಧಿಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ ನೀಡುವುದನ್ನು 2 ಸಾವಿರದಿಂದ 3 ಸಾವಿರಕ್ಕೆ ಏರಿಕೆ ನಿರೀಕ್ಷೆ
  24. ವಿಬಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರಗಳು ಶೇ.40 ರಷ್ಟು ಹಣ ನೀಡಬೇಕಿರುವುದರಿಂದ ಕೇಂದ್ರದಿಂದ ಕಡಿಮೆ ವೆಚ್ಚ
  25. ಎಐ, ಕೌಶಲ್ಯಾಭಿವೃದ್ದಿ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು
  26.  ಭಾರತದ ಬ್ಯಾಂಕ್ ಗಳನ್ನು ಜಾಗತಿಕ ಬ್ಯಾಂಕ್ ಗಳಾಗಿ  ರೂಪಿಸಲು ಪ್ಲ್ಯಾನ್ ಘೋಷಣೆಯ ನೀರೀಕ್ಷೆ

ಇದನ್ನೂ ಓದಿ: ಸದ್ದಿಲ್ಲದೇ ಎಂಗೇಜ್ ಆದ ಸಂಜನಾ.. ಹುಡುಗ ಯಾರು ಗೊತ್ತೇ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nirmala Sitharaman union budget budget 2026 capital expenditure
Advertisment