Advertisment

ಪಾಕಿಸ್ತಾನದ​ F-16, JF-17 ಸೇರಿ 8 ರಿಂದ 10 ಫೈಟರ್​ ಜೆಟ್​ಗಳು​ ಫಿನೀಶ್- ವಾಯುಪಡೆ ಮುಖ್ಯಸ್ಥ AP ಸಿಂಗ್

93ನೇ ವಾಯುಪಡೆ ದಿನಾಚರಣೆಯ ಕಾರ್ಯಕ್ರದಲ್ಲಿ ಮಾತನಾಡಿದ ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಅವರು, ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನ ಹೇಳಿಕೊಳ್ಳಲಾಗದಷ್ಟು ಹಾನಿ ಮಾಡಲಾಗಿದೆ.

author-image
Bhimappa
AP_SINGH
Advertisment

ನವದೆಹಲಿ: ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಎಫ್​-16, ಜೆಎಫ್​-17 ಸೇರಿದಂತೆ 8 ರಿಂದ 10 ಫೈಟರ್​ ಜೆಟ್​ಗಳನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಭಾರತದ ವಾಯುಪಡೆ (ಐಎಎಫ್) ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಹೇಳಿದ್ದಾರೆ. 

Advertisment

93ನೇ ವಾಯುಪಡೆ ದಿನಾಚರಣೆಯ ಕಾರ್ಯಕ್ರದಲ್ಲಿ ಮಾತನಾಡಿದ ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಅವರು, ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನ ಹೇಳಿಕೊಳ್ಳಲಾಗದಷ್ಟು ಹಾನಿ ಮಾಡಲಾಗಿದೆ. ಇದರಲ್ಲಿ 8 ರಿಂದ 10 ಪಾಕಿಸ್ತಾನದ ಫೈಟರ್​ ಜೆಟ್​ಗಳನ್ನು ಹೊಡೆದುರುಳಿಸಲಾಗಿದೆ. ಅಮೆರಿಕ ತಯಾರಿಸುವ ಎಫ್​-16, ಚೀನಾ ತಯಾರಿಸುವ ಜೆಎಫ್​-17 ಸೇರಿ ಇನ್ನು ನಾಲ್ಕೈದು ಮಾದರಿಯ ಪಾಕಿಸ್ತಾನದ ಫೈಟರ್ ಜೆಟ್​ಗಳನ್ನು ಇಂಡಿಯನ್ ಆರ್ಮಿ ನಾಶಗೊಳಿಸಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ:ದಸರಾ ಮುಗಿದ್ಮೇಲೆಯೂ ವಿವಾದಕ್ಕೆ ಸಿಲುಕಿದ ಸರ್ಕಾರ.. ಪರೇಡ್​​ನಲ್ಲಿ ಸಚಿವರ ಮೊಮ್ಮಗ ಭಾಗಿ

IAF CHIEF AP SINGH

ಭಾರತದ ಯಾವುದೇ ವಿಮಾನವನ್ನು ಪಾಕಿಸ್ತಾನಕ್ಕೆ ಹೊಡೆಯಲು ಆಗಿಲ್ಲ. ಆದರೆ ಭಾರತದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪ್ರಚಾರ ಪಡೆದುಕೊಳ್ಳುತ್ತಿದೆ. ಅವೆಲ್ಲ ಆಕರ್ಷಕ ಕಥೆಗಳು ಆಗಿವೆ ಅಷ್ಟೇ. ನಾವು ಸುಮಾರು 300 ಕಿಲೋ ಮೀಟರ್​ನಿಂದ ದೂರದಿಂದ ಏರ್​ಸ್ಟ್ರೈಕ್ ಮಾಡಿರುವ ಕುರಿತು ಸಾಕ್ಷ್ಯಾಧರಗಳು ಇವೆ. ಪಾಕಿಸ್ತಾನದ ಒಳಗಿನ ಪ್ರದೇಶದ ಒಳಗೆ 300 ಕಿಲೋ ಮೀಟರ್ ದಾಳಿಯು Longest Kill ಎಂದು ಅವರು ಹೇಳಿದ್ದಾರೆ.  ​ 

Advertisment

ಭಾರತವು ರಾಡಾರ್ ವ್ಯವಸ್ಥೆಗಳು, ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರಗಳು (Command and Control Centres), ರನ್‌ವೇಗಳು ಮತ್ತು ಹ್ಯಾಂಗರ್‌ಗಳ (Hangars) ಮೇಲೆ ನಿಖರವಾದ ದಾಳಿಗಳನ್ನು ನಡೆಸಿತು. ಈ ವೇಳೆ ಇನ್ನು 4, 5 ಎಫ್​- 16 ಫೈಟರ್ ಜೆಟ್​ಗಳನ್ನು ನಾಶ ಮಾಡಲಾಯಿತು ಎಂದು ಮುಖ್ಯಸ್ಥ ಎ.ಪಿ ಸಿಂಗ್ ಅವರು ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Operation Sindoor Ind vs Pak India Operation Sindoor Fighter Jet
Advertisment
Advertisment
Advertisment