/newsfirstlive-kannada/media/media_files/2025/09/28/vijay-rally-7-2025-09-28-12-42-45.jpg)
ನಟ, ರಾಜಕಾರಣಿ ವಿಜಯ್​ ಱಲಿಯಲ್ಲಿ ಕಾಲ್ತುಳಿತ ದುರಂತದಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿಕೆ ಆಗಿದೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇಲ್ಲಿಯವರೆಗೆ 28 ಮಂದಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಕಾಲ್ತುಳಿತಕ್ಕೆ ಕಾರಣ!
ಕಾರಣ 01: ಱಲಿಗೆ ನಟ ದಳಪತಿ ವಿಜಯ್​ ತಡವಾಗಿ ಆಗಮನ
ಕಾರಣ 02: ಮಧ್ಯಾಹ್ನದಿಂದ ಕಾದು ತಾಳ್ಮೆ ಕಳೆದುಕೊಂಡಿದ್ದ ಫ್ಯಾನ್ಸ್​
ಕಾರಣ 03: 10 ಸಾವಿರ ಜನರ ನಿರೀಕ್ಷೆ.. 27 ಸಾವಿರ ಜನರ ಜಮಾವಣೆ
ಕಾರಣ 04: ಟಿವಿಕೆ 2 ಕಡೆ ಅನುಮತಿ ಕೇಳಿತ್ತು, ಪೊಲೀಸರಿಂದ ಈ ಜಾಗದ ವ್ಯವಸ್ಥೆ
ಕಾರಣ 05: ಇಷ್ಟು ದೊಡ್ಡ ಱಲಿಗೆ ಮಕ್ಕಳನ್ನ ಕರೆದುಕೊಂಡು ಹೋಗಿದ್ದ ಜನ
ಕಾರಣ 06 : ವಿಜಯ್​​ ನೋಡಲು ಗುಡಿಸಲು, ಟ್ರಾನ್ಸ್​ಫಾರ್ಮ್​ಗಳ ಮೇಲೇರಿದ ಜನ
ಕಾರಣ 07: ಘಟನೆಗೂ ಮೊದಲೇ 9 ವರ್ಷದ ಬಾಲಕಿ ಅಶ್ಮಿಕಾ ಮಿಸ್ಸಿಂಗ್​
ಕಾರಣ 08 : ಮೈಕ್​ನಲ್ಲಿ ಬಾಲಕಿ ತಪ್ಪಿಸಿಕೊಂಡಿದ್ದು, ಹುಡುಕಿಕೊಡಿ ಎಂದ ವಿಜಯ್​
ಕಾರಣ 09 : ವಿಜಯ್​ ಮೈಕ್​ನಲ್ಲಿ ಹೇಳುತ್ತಿದ್ದ ಱಲಿಯಲ್ಲಿ ನೂಕುನುಗ್ಗಲು ಆರಂಭ
ಕಾರಣ 10: ವಿಜಯ್​ ದಳಪತಿ ಭಾಷಣದ ವೇಳೆ ಪವರ್​ ಕಟ್ ಆಗಿದ್ದು
ಕಾರಣ 11 : ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಡುವ ವೇಳೆ ಪೊಲೀಸರ ಲಾಠಿ ಚಾರ್ಜ್​
ಕಾರಣ 12: ಲಾಠಿ ಚಾರ್ಜ್​ ವೇಳೆ ಭಯಬಿದ್ದು ದಿಕ್ಕಾಪಾಲಾಗಿ ಓಡಿದ ಜನರು
ಕಾರಣ 13: ವಿಜಯ್​ ಱಲಿ ವಾಹನದಿಂದ 1 ಕಿ.ಮೀ ​ವರೆಗೂ ಸೇರಿದ್ದ ಜನ
ಇದನ್ನೂ ಓದಿ:ನಟ ಮಾತಾಡ್ತಿದ್ದಾಗಲೇ ಕಾಲ್ತುಳಿತ.. ಕರೂರ್‌ನಲ್ಲಿ ವಿಜಯ್ ಭಾಷಣ ಹೇಗಿತ್ತು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ