/newsfirstlive-kannada/media/media_files/2025/09/28/vijay-rally-6-2025-09-28-11-22-48.jpg)
ತಮಿಳುನಾಡಿನ ಕರೂರ್ ಕಾಲ್ತುಳಿತ ದುರಂತದಲ್ಲಿ 39 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ಅಧಿಕೃತವಾಗಿ ಹೇಳಿದೆ. ರಾಜಕಾರಣಿ, ದಳಪತಿ ವಿಜಯ್ ಱಲಿಗೆ ನಿರೀಕ್ಷೆಗೂ ಮೀರಿ ಜನ ಸೇರಿದ ಪರಿಣಾಮ ದುರಂತ ಸಂಭವಿಸಿದೆ.
ವಿಜಯ್ ಭಾಷಣ ಹೇಗಿತ್ತು..?
ದುರಂತದ ಸಮಯದಲ್ಲಿ ವಿಜಯ್ ಆಗಸ್ಟೇ ಸ್ಟೇಜ್​​ಗೆ ಬಂದು ಭಾಷಣ ಮಾಡಲು ಶುರುಮಾಡಿದ್ದರು. ಅವರ ಭಾಷಣ ಆರಂಭ ಹೀಗಿತ್ತು..
ಇದನ್ನೂ ಓದಿ:ಸುಖಾಸುಮ್ಮನೇ ಕೆಣಕಿದ ಪಾಕ್.. ಮತ್ತೆ ಮಣ್ಣು ಮುಕ್ಕಿಸಲು ಸೂರ್ಯ ಸೇನೆ ಮಾಸ್ಟರ್ ಪ್ಲಾನ್
ಹಲೋ, ಹಲೋ..
ನಾನು ಮಾತನ್ನಾಡುತ್ತಿರುವುದು ನಿಮಗೆ ಕೇಳಿಸುತ್ತಿದ್ಯಾ?
ಮೊದಲಿಗೆ ನಾನು ಪೊಲೀಸ್ ಡಿಪಾರ್ಟ್‌ಮೆಂಟ್‌ಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರು ಇಂದು ಇರದೇ ಹೋಗಿದ್ರೆ, ನಾನು ಬೈಪಾಸ್‌ನಿಂದ ಇಲ್ಲಿಯವರೆಗೆ ಬರಲು ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ. ನನ್ನನ್ನು ಕರೆದುಕೊಂಡು ಇಲ್ಲಿಗೆ ತಂದು ನಿಲ್ಲಿಸಿದ ಅವರಿಗೆ ಧನ್ಯವಾದಗಳು.
ಕರೂರು ಒಂದು ಪ್ರಸಿದ್ಧ ಸ್ಥಳ. ಅಷ್ಟು ಮಾತ್ರವಲ್ಲದೆ, ಇಲ್ಲಿ ಟೆಕ್ಸ್‌ಟೈಲ್ ಬ್ಯುಸಿನೆಸ್ ಇದೆ. ಇತ್ತೀಚೆಗೆ ಭಾರತದಲ್ಲಿ ಕರೂರು ಅಂದರೆ ಒಂದು ವಿಶೇಷ. ಕರೂರು ಇತ್ತೀಚೆಗೆ ಏಕೆ ಪ್ರಸಿದ್ಧಿಯಾಯ್ತು ಎಂಬುದು ನಿಮಗೆ ಗೊತ್ತಿದೆ. ಇದರ ಬಗ್ಗೆ ಆಮೇಲೆ ಮಾತನ್ನಾಡೋಣ. ಕರೂರು ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ರು. ಈಗಾಗಲೇ ಈ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ. ಈಗಾಗಲೇ ನಾಲ್ಕುವರೆ ವರ್ಷಗಳ ಕಾಲ ಅಧಿಕಾರ ಮುಕ್ತಾಯಗೊಳಿಸಿದ್ದೀರಿ. ಈಗ ಹೋಗಿ ವಿಮಾನನಿಲ್ದಾಣ ಮಾಡಲು ಹೋಗುತ್ತಿದ್ದೀರಿ. ಇದು ಆಗುವ ಮಾತಾ? ಎಂದು ಪ್ರಶ್ನೆ ಮಾಡ್ತಿದ್ದಾಗಲೇ ಕಾಲ್ತುಳಿತ ಸಂಭವಿಸಿ ಆ್ಯಂಬುಲೆನ್ಸ್ ಬಂದಾಗಿತ್ತು.
ಇದನ್ನೂ ಓದಿ:ಮೌನ ಮುರಿದ ವಿಜಯ್- ಕಾಲ್ತುಳಿತ ದುರಂತದ ಬಗ್ಗೆ ನಟ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ