Advertisment

ಮೌನ ಮುರಿದ ವಿಜಯ್- ಕಾಲ್ತುಳಿತ ದುರಂತದ ಬಗ್ಗೆ ನಟ ಹೇಳಿದ್ದೇನು?

ಘೋರ.. ಘನಘೋರ.. ಭಯಾನಕ.. ಟಿವಿಕೆ ಸಂಸ್ಥಾಪಕ ಕಮ್​ ನಟ ವಿಜಯ್​ ಱಲಿ ವೇಳೆ ಭಾರೀ ದುರಂತ ಸಂಭವಿಸಿದೆ. 39 ಮಂದಿ ಪ್ರಾಣ ಕಳೆದುಕೊಂಡು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದೀಗ ಕಾಲ್ತುಳಿತದ ಬಗ್ಗೆ ನಟ, ರಾಜಕಾರಣಿ ವಿಜಯ್ ಮೌನ ಮುರಿದಿದ್ದಾರೆ.

author-image
Ganesh Kerekuli
Vijay Rally (5)
Advertisment

ಕಾಲ್ತುಳಿತದ ಬೆನ್ನಲ್ಲೇ ಸೈಲೆಂಟ್​ ಆಗಿ ರಸ್ತೆ ಮಾರ್ಗವಾಗಿ ತ್ರಿಚಿಗೆ ತೆರಳಿದ್ದ, ವಿಜಯ್​ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್​, ಈ ದುರಂತದಿಂದ ಹೃದಯ ಚೂರಾಗಿದೆ. ಅಸಹನೀಯ, ವಿವರಿಸಲಾಗದ ನೋವು ಮತ್ತು ದುಃಖದಲ್ಲಿರುವುದಾಗಿ ಎಕ್ಸ್​ ಖಾತೆಯಲ್ಲಿ ನೋವು ಹಂಚಿಕೊಂಡಿದ್ದಾರೆ.

Advertisment

ನನಗೆ ಈ ಘಟನೆಯಿಂದ ಹೃದಯ ಒಡೆದು ಹೋಗಿದೆ. ನಾನು ಅಸಹನೀಯ, ಅತೀವ ನೋವು ಮತ್ತು ದುಃಖದಲ್ಲಿದ್ದೇನೆ. ಕರೂರಿನಲ್ಲಿ ಜೀವ ಕಳೆದುಕೊಂಡ ನಮ್ಮ ಪ್ರೀತಿಯ ಸಹೋದರ ಸಹೋದರಿಯರ ಕುಟುಂಬಗಳಿಗೆ ನನ್ನ ಸಂತಾಪವನ್ನ ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್ ಱಲಿಯಲ್ಲಿ ಘೋರ ದುರಂತ.. ಕಾಲ್ತುಳಿತಕ್ಕೂ ಮುನ್ನ ಅಲ್ಲಿ ಆಗಿದ್ದೇನು..?

Advertisment

ಇನ್ನು, ಕರೂರ್​ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪಗಳೇ ಹರಿದು ಬರ್ತಿದೆ. ಪ್ರಧಾನಿ ಮೋದಿ ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿದ್ದು, ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ಸಮಾವೇಶದ ವೇಳೆ ನಡೆದ ಅಹಿತಕರ ಘಟನೆ ತೀವ್ರ ದುಃಖ ತಂದಿದೆ ಎಂದಿದ್ದಾರೆ. 

ಇದನ್ನೂ ಓದಿ: ಬಿಗ್​ಬಾಸ್​ ಸೀಸನ್ 12 ಇವತ್ತಿನಿಂದ ಆರಂಭ.. ಹೊಸ ಥೀಮ್​ನಡಿ ಅತಿದೊಡ್ಡ ರಿಯಾಲಿಟಿ ಶೋ..!

Advertisment


ಕೇಂದ್ರ ಗೃಹಸಚಿವ ಅಮಿತ್​ ಶಾ, ಕೇಂದ್ರ ಸಚಿವ ಹೆಚ್​ಡಿ.ಕುಮಾರಸ್ವಾಮಿ, ತಮಿಳು ಸೂಪರ್​​ ಸ್ಟಾರ್​ ರಜನಿಕಾಂತ್​ ಸೇರಿದಂತೆ ಹಲವರು, ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ರಾತ್ರಿಯೇ ಕರೂರ್​ಗೆ ದೌಡಾಯಿಸಿದ ಸಿಎಂ ಸ್ಟಾಲಿನ್

ದುರಂತದ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ವರದಿ ಕೇಳಿದ್ದು, ಸಿಎಂ ಸ್ಟಾಲಿನ್​ ರಾತ್ರಿಯೇ ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಿದ್ರು.. ಅಷ್ಟೇ ಅಲ್ಲ.. ರಾತ್ರಿಯೇ ಕಾಲ್ತುಳಿತ ಸಂಭವಿಸಿದ ಕರೂರ್​ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು.. ಇನ್ನು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ:ವಿಜಯ್ ಱಲಿಯಲ್ಲಿ 39 ಮಂದಿ ಸಾವು, ಕಾಲ್ತುಳಿತಕ್ಕೆ ಕಾರಣ ಏನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

stampede Vijay's Rally stampede tvk vijay rally stampede
Advertisment
Advertisment
Advertisment