/newsfirstlive-kannada/media/media_files/2025/09/28/vijay-rally-4-2025-09-28-07-18-06.jpg)
ಟಿವಿಕೆ ಸಂಸ್ಥಾಪಕ ನಟ ವಿಜಯ್​ ಅವರ ಕರೂರ ಱಲಿಯಲ್ಲಿ ನಡೆಸ ಕಾಲ್ತುಳಿತ ದುರಂತ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ತಲ್ಲಣವನ್ನೇ ಸೃಷ್ಟಿಸಿದೆ. ಒಂದೆಡೆ ಕಾಲ್ತುಳಿತದಲ್ಲಿ ಅಪಾರ ಸಾವು-ನೋವು ಸಂಭವಿಸಿದ್ರೆ. ಮತ್ತೊಂದೆಡೆ ದುರಂತಕ್ಕೆ ಕಾರಣ ಹುಡುಕುತ್ತ ಆರೋಪ-ಪ್ರತ್ಯಾರೋಪದ ರಾಜಕೀಯ ಕೆಸರೆರಚಾಟ ಶುರುವಾಗಿದೆ.
ಇದನ್ನೂ ಓದಿ:ವಿಜಯ್ ಱಲಿಯಲ್ಲಿ ಘೋರ ದುರಂತ.. ಕಾಲ್ತುಳಿತಕ್ಕೂ ಮುನ್ನ ಅಲ್ಲಿ ಆಗಿದ್ದೇನು..?
ಕರೂರು ಱಲಿಯಲ್ಲಿ 39 ಜನರು ಮೃತಪಟ್ಟಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ದುರಂತಕ್ಕೆ ಆಡಳಿತ ಪಕ್ಷ ಡಿಎಂಕೆ ನಾಯಕರು... ಆಯೋಜಕರೆ ಕಾರಣ ಎಂದು ಆರೋಪ ಮಾಡ್ತಿದ್ರೆ.. ವಿಜಯ್​ ಅಭಿಮಾನಿಗಳು ಡಿಎಂಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರತ್ಯಾರೋಪ ಮಾಡ್ತಿದ್ದಾರೆ..
ದುರಂತಕ್ಕೆ ಕಾರಣವೇನು?
- ಕಾರ್ಯಕ್ರಮದಲ್ಲಿ ಕೇವಲ 10,000 ಜನರಿಗೆ ಮಾತ್ರ ಅವಕಾಶ
- ನಟ ವಿಜಯ್​ ಱಲಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭಾಗಿ
- ಸೀಮಿತ ಪ್ರದೇಶ ಕಿರಿದಾಗಿರೋ ಕಾರಣಕ್ಕೆ ಉಸಿರುಗಟ್ಟಿ ಸಾವು
- ಬೆಳಗ್ಗೆಯೇ ಱಲಿಯನ್ನು ನಡೆಯಲು ಸಮಯ ನಿಗದಿಯಾಗಿತ್ತು
- ಸುಮಾರು ಆರು ಗಂಟೆ ತಡವಾಗಿ ಱಲಿಗೆ ಆಗಮಿಸಿದ ವಿಜಯ್
- ಹೆಚ್ಚಿನ ಜನ ಸೇರಿದ್ದು, ನಿಯಂತ್ರಿಸಲು ಪೋಲಿಸರಿಗೂ ಆಗಲಿಲ್ಲ
- ಜನದಟ್ಟನೆಯಿಂದ ಉಸಿರಾಟ ಸಮಸ್ಯೆಯಾಗಿ ಮೂರ್ಚೆ ಹೋದರು
- ಪುಟ್ಟ ಮಕ್ಕಳು ತಮ್ಮ ತಮ್ಮ ಕುಟುಂಬಸ್ಥರಿಂದ ದೂರ ಸರಿದರು
- ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಕಾಲ್ತುಳಿತ ಸಂಭವಿಸಿ 38 ಜನ ಮೃತ
- ಈ ದುರಂತಕ್ಕೆ ಆಯೋಜಕರೆ ಕಾರಣ, ವಿಜಯ್​ ಬಂಧನಕ್ಕೆ ಆಗ್ರಹ
ಈ ದುರಂತದ ಬಗ್ಗೆ ಪ್ರತ್ಯದರ್ಶಿಗಳು ಮತ್ತು ವಿಜಯ್​ ಬೆಂಬಲಿಗರು ಹೇಳೋದೇ ಬೇರೆ.. ಡಿಎಂಕೆ ಸರ್ಕಾರ ರಾಜಕೀಯ ಕಾರಣದಿಂದ ಱಲಿಗೆ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ.. ಪೊಲೀಸರು ಲಾಠಿಚಾರ್ಚ್​ಗೆ ಯತ್ನಿಸಿದ್ರು.. ಜೊತೆಗೆ ಕರೆಂಟ್​ ಕೂಡ ಸಡನ್​ ಆಗಿ ಆಪ್​ ಆಗಿತ್ತು ಎಂದು ನಟ ವಿಜಯ್​ ಅವರ ಬೆಂಬಕ್ಕೆ ನಿಂತಿದ್ದಾರೆ.
ಇದನ್ನೂ ಓದಿ:ಚಾಕೋಲೆಟ್​ಗಿಂತ ಬಿಸ್ಕತ್ತು​ಗಳು ನಮ್ಮ ಆರೋಗ್ಯಕ್ಕೆ ತುಂಬಾ ಡೇಂಜರ್.. ಹುಷಾರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ