/newsfirstlive-kannada/media/media_files/2025/09/28/vijay-rally-3-2025-09-28-07-07-28.jpg)
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಚಾರದ ಭಾಗವಾಗಿ ಸೆಪ್ಟೆಂಬರ್ 13ರಿಂದ ಪ್ರತಿ ಶನಿವಾರ ಜನಸಂಪರ್ಕ ಱಲಿ ಆರಂಭಿಸಿದ್ರು.. ಈಗಾಗಲೇ ಎರಡು ಱಲಿ.. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ವು.. ಪ್ರತಿ ಱಲಿಯಲ್ಲಿ ಲಕ್ಷಾಂತರ ಜನ ಭಾಗಿಯಾಗಿ ವಿಜಯ್​ಗೆ ಬೆಂಬಲ ಸೂಚಿಸಿದ್ರು. ನಿನ್ನೆ ಕರೂರಿನಲ್ಲಿ ಱಲಿ ಹಮ್ಮಿಕೊಂಡಿದ್ರು. ಆದ್ರೆ ಅದು ಸಾವಿನ ಱಲಿಯಾಗಿ ಹೋಗಿದೆ.
ಇದನ್ನೂ ಓದಿ:ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಕಾಲಾವಕಾಶ- ಮುಖ್ಯಮಂತ್ರಿ ಸಿದ್ದರಾಮಯ್ಯ
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು. ಇದರಿಂದಾಗಿ ಜನಸಾಗರವೇ ಸೇರಿತ್ತು.. ವಿಜಯ್​ ಱಲಿಗೆ ಮಕ್ಕಳು, ವೃದ್ಧರು, ಮಹಿಳೆಯರು ಬಂದಿದ್ದರು..
ಬಾಲಕಿ ನಾಪತ್ತೆ.. ಕಾಲ್ತುಳಿತ.. ಘನಘೋರ ದುರಂತ
ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ.. ನಟ ವಿಜಯ್ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ರು. ಈ ವೇಳೆ ಬಾಲಕಿಯೊಬ್ಬಳು ಕಾಣೆಯಾಗಿದ್ದು, ನೆರವಿಗಾಗಿ ಪೊಲೀಸರಿಗೆ ಮನವಿ ಮಾಡಿದರು. ಅವರು ವೇದಿಕೆಯಿಂದಲೇ ಜನರಿಗೆ ನೀರಿನ ಬಾಟಲಿ ಎಸೆದು ಸಹಾಯ ಮಾಡಲು ಯತ್ನಿಸಿದ್ರು. ಇದರ ನಡುವೆಯೇ ಕಾಲ್ತುಳಿತ ಸಂಭವಿಸಿದೆ.
ಇದನ್ನೂ ಓದಿ:ಟಿವಿಕೆ ವಿಜಯ್ ರಾಲಿಯಲ್ಲಿ ಕಾಲ್ತುಳಿತ: 38 ಮಂದಿ ಸಾವು, 50 ಮಂದಿಗೆ ಗಾಯ
ಕಾಲ್ತುಳಿತದಲ್ಲಿ ಗಾಯಗೊಂಡು, ಅಸ್ವಸ್ಥರಾದವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ಆಂಬುಲೆನ್ಸ್​ನಲ್ಲಿ ಸಾಗಿಸಲಾಯ್ತು.. ಆಸ್ಪತ್ರೆಯಲ್ಲಿ ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬಸ್ಥರ ಪರದಾಡ್ತಿದ್ದ ದೃಶ್ಯಗಳು ನಿಜಕ್ಕೂ ಕಣ್ಣಲ್ಲಿ ನೀರು ಬರಿಸುವಂತಿದ್ವು. ಈ ದೃಶ್ಯ ನೋಡಿ.. ಒಬ್ಬ ವ್ಯಕ್ತಿಯಲ್ಲಿ ಕೈಯಲ್ಲಿ ಮುಗುವನ್ನು ಹಿಡಿದು ಓಡಿ ಬರುತ್ತಾ ಸಚಿವರ ಮುಂದೆ ಕಾಪಾಡಿ ಎಂದು ಕಣ್ಣೀರಿಡುವ ದೃಶ್ಯವಂತು ಮನಕಲಕುವಂತಿದೆ.
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ
ಈ ದುರಂತದಲ್ಲಿ ಎಂಟು ಮಕ್ಕಳು ಮತ್ತು 16 ಮಹಿಳೆಯರು ಸೇರಿದಂತೆ 39 ಜನರು ಮೃತಪಟ್ಟಿರುವ ಬಗ್ಗೆ ತಮಿಳುನಾಡು ಸರ್ಕಾರದ ಸಚಿವರೇ ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಕೂಡ ಇದೆ. ಇನ್ನು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಾಗಿದೆ. ತಮಿಳುನಾಡಿನ ಡಿಸಿಎಂ ಉದಯ ನಿಧಿ ಸ್ಟಾಲಿನ್​.. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸ್ಟಾಲಿನ್ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ದುರಂತದ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ಅರುಣಾ ಜಗದೀಶನ್ ನೇತೃತ್ವದ ಏಕಸದಸ್ಯ ತನಿಖಾ ಆಯೋಗ ರಚಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿಗಳು ಕರೂರ್ ಜಿಲ್ಲಾ ಉಸ್ತುವಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಸೂಚನೆ ನೀಡಿದ್ದು, ರಾಜ್ಯ ಆರೋಗ್ಯ ಸಚಿವ ಎಂ ಸುಬ್ರಮಣಿಯನ್ ಅವರು ಕೂಡಲೇ ಕರೂರ್‌ಗೆ ಧಾವಿಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಒಟ್ಟಾರೆ.. ರಾಜಕೀಯ ಱಲಿ 38 ಜನರ ಪ್ರಾಣ ತೆಗೆದಿದ್ದು, ನಿಜಕ್ಕೂ ದುರಂತ.. ಈ ಹಿಂದೆ ನಡೆದ ಱಲಿಯಲ್ಲೇ ಭಾರೀ ಜನಸ್ತೋಮ ಸೇರಿತ್ತು. ಆದ್ರೂ ಸರಿಯಾದ ಮುಂಜಾಗ್ರ ಕ್ರಮವಹಿಸದೇ ಇರೋದು.. ಈ ದುರಂತಕ್ಕೆ ಕಾರಣ ಎನ್ನಲಾಗ್ತಿದೆ.
ಇದನ್ನೂ ಓದಿ:ಚಾಕೋಲೆಟ್​ಗಿಂತ ಬಿಸ್ಕತ್ತು​ಗಳು ನಮ್ಮ ಆರೋಗ್ಯಕ್ಕೆ ತುಂಬಾ ಡೇಂಜರ್.. ಹುಷಾರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ