/newsfirstlive-kannada/media/post_attachments/wp-content/uploads/2025/07/Thalapathy_Vijay_New.jpg)
ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಇಂದು ಟಿವಿಕೆ ವಿಜಯ್ ರಾಲಿ ವೇಳೆ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮಿಳು ಸಿನಿಮಾ ನಟ ವಿಜಯ್ , ತಮ್ಮದೇ ಆದ ಟಿವಿಕೆ ಪಕ್ಷ ಸ್ಥಾಪಿಸಿದ್ದಾರೆ.. ಇದರ ರಾಲಿಗೆ ಇಂದು ಆರು ಗಂಟೆ ತಡವಾಗಿ ಆಗಮಿಸಿದ್ದರು..ಆದರೆ 30 ಸಾವಿರಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇದರಿಂದ ಜನರನ್ನು ನಿಯಂತ್ರಣ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ನಟ ವಿಜಯ ನೋಡಲು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ..