/newsfirstlive-kannada/media/media_files/2025/09/12/indvspak-2025-09-12-22-49-34.jpg)
ಟೀಮ್ ಇಂಡಿಯಾ ಹಾಗೂ ಬದ್ಧವೈರಿ ಪಾಕಿಸ್ತಾನ ನಡುವೆ ಏಷ್ಯಾಕಪ್​ ಟೂರ್ನಿಯ ಫೈನಲ್ ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಎರಡು ತಂಡಗಳು ಫೈನಲ್​ಗಾಗಿ ಭಾರೀ ಕಸರತ್ತು ನಡೆಸಿದ್ದು ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ಫೆವರೀಟ್ ಟೀಮ್ ಎನಿಸಿದೆ. ಏಷ್ಯಾಕಪ್​ನಲ್ಲಿ ಸತತ ಆರು ಬಾರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ವಿಜಯದ ಓಟದಲ್ಲಿದೆ.
ಏಷ್ಯಾಕಪ್​ನ 41 ವರ್ಷಗಳ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ಇದೇ ಮೊದಲ ಬಾರಿಗೆ ಫೈನಲ್​​ನಲ್ಲಿ ಮುಖಾಮುಖಿ ಆಗುತ್ತಿವೆ. ಬಾಂಗ್ಲಾದೇಶದ ವಿರುದ್ಧ ನಡೆದ ಸೂಪರ್​-4 ಪಂದ್ಯದಲ್ಲಿ 11 ರನ್​ಗಳಿಂದ ಜಯ ಸಾಧಿಸುವ ಮೂಲಕ ಪಾಕಿಸ್ತಾನ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಕ್ರಿಕೆಟ್​ ಇತಿಹಾಸದಲ್ಲಿ ಬಹುರಾಷ್ಟ್ರೀಯ ಪಂದ್ಯಾವಳಿಯ (Multinational Tournament) ಫೈನಲ್​​ನಲ್ಲಿ ಈವರೆಗೂ ಎರಡು ತಂಡಗಳು 5 ಬಾರಿ ಅಷ್ಟೇ ಮುಖಾಮುಖಿ ಆಗಿವೆ.
ಈ ಟೂರ್ನಿಯಲ್ಲಿ ಗ್ರೂಪ್​ ಸ್ಟೇಜ್​ನಲ್ಲಿ ಟೀಮ್ ಇಂಡಿಯಾ ಮೂರಕ್ಕೆ ಮೂರು ಪಂದ್ಯಗಳಲ್ಲೂ ವಿಜಯ ಸಾಧಿಸಿದೆ. ಅದರಂತೆ ಸೂಪರ್​-4 ಪಂದ್ಯಗಳಲ್ಲಿ ಮೂರು ಮ್ಯಾಚ್​ಗಳಲ್ಲೂ ಗೆಲುವಿನ ನಾಗಲೋಟ ಬೀರಿದೆ. ಹಾಗೇ ಪಾಕಿಸ್ತಾನ ತಂಡ ಕೂಡ ಗ್ರೂಪ್​ ಸ್ಟೇಜ್​ನಲ್ಲಿ 2 ಪಂದ್ಯ ಮಾತ್ರ ಗೆದ್ದಿದ್ದು ಸೂಪರ್​-4 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸಿ ಫೈನಲ್​ಗೆ ಬಂದಿದೆ. ಭಾರತ ಜೊತೆಗಿನ ಎರಡು ಪಂದ್ಯದಲ್ಲೂ ಪಾಕ್​ ಮಕಾಡೆ ಮಲಗಿದ್ದು ಹ್ಯಾಟ್ರಿಕ್​ ಸೋಲಿನ ಭಯದಲ್ಲಿದೆ.
ಇನ್ನು ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಷ್ಯಾಕಪ್​ ಪೈನಲ್​ ಪಂದ್ಯ ಇಂದು ರಾತ್ರಿ 8 ಗಂಟೆಗೆ ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಒಂದೇ ಟೂರ್ನಿಯಲ್ಲಿ ಮೂರನೇ ಬಾರಿಗೆ ಎರಡು ತಂಡಗಳು ಕಾದಾಟಕ್ಕೆ ಇಳಿಯಲಿವೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್​​ನಲ್ಲಿ ನೇರ ಪ್ರಸಾರ ಇರಲಿದ್ದು ಈ ಹೈವೋಲ್ಟೇಜ್​ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕಾತುರದಿಂದ ಇದ್ದಾರೆ.
ಭಾರತ vs ಪಾಕ್ ಹೆಡ್​ ಟು ಹೆಡ್​​
ಸೆಪ್ಟೆಂಬರ್ 2022ರಲ್ಲಿ ಜಯಗಳಿಸಿದ ನಂತರ ಭಾರತ ಪಾಕಿಸ್ತಾನದ ವಿರುದ್ಧ ಸತತ ಐದು T20I ಗಳನ್ನು ಗೆದ್ದಿದೆ. ಹೆಡ್ ಟು ಹೆಡ್ ಸ್ಪರ್ಧೆಯಲ್ಲಿ ಭಾರತ ಮೇಲುಗೈ ಸಾಧಿಸಿದ್ದೇ ಹೆಚ್ಚು.
- ಒಟ್ಟು ಪಂದ್ಯಗಳು- 15
- ಭಾರತಕ್ಕೆ ಗೆಲುವು- 12
- ಪಾಕಿಸ್ತಾನ ಗೆಲುವು- 3
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ