Advertisment

ಬಿಗ್​ಬಾಸ್​ ಸೀಸನ್ 12 ಇವತ್ತಿನಿಂದ ಆರಂಭ.. ಹೊಸ ಥೀಮ್​ನಡಿ ಅತಿದೊಡ್ಡ ರಿಯಾಲಿಟಿ ಶೋ..!

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ 12 ಇವತ್ತು ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇದರ ಮಧ್ಯೆ ನಿನ್ನೆ ನಡೆದ ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ಮೂವರ ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗಿದೆ.

author-image
Ganesh Kerekuli
kiccha sudeep bigg boss
Advertisment

‘ಓ ಭ್ರಮೆ..’ ಅನ್ನೋ ಟೈಟಲ್​ನಿಂದಾನೇ ಸದ್ದು ಮಾಡ್ತಿರೋ ಈ ಬಾರಿಯ ಬಿಗ್ ಬಾಸ್​ ಸೀಸನ್ 12 ಜನರ ಕ್ಯೂರಿಯಾಸಿಟಿಯನ್ನ ಹೆಚ್ಚು ಮಾಡಿದೆ.  ಪ್ರತಿ ಬಾರಿಯೂ ಹೊಸ ಹೊಸ ಥೀಮ್​ನಡಿ ನಡೆಯೋ ಈ ರಿಯಾಲಿಟಿ ಶೋ, ಈ ಬಾರಿ ಇಂಟ್ರೆಸ್ಟಿಂಗ್ ಥೀಮ್​ನಡಿ ನಡೆಯುತ್ತಿದೆ. 

Advertisment

ನಿನ್ನೆ ಬಿಗ್​ ಬಾಸ್ ಪ್ರೋಮೊಯೊಂದು ರಿಲೀಸ್ ಆಗಿದ್ದು, ಅದ್ರಲ್ಲಿ ಕಿಚ್ಚ ಸುದೀಪ್, ಬಿಗ್ ಬಾಸ್ ಮನೆಯನ್ನ ರಿವೀಲ್ ಮಾಡಿದ್ದಾರೆ. ಅಚ್ಚರಿ ಏನಂದ್ರೆ ಮೈಸೂರು ಅರಮನೆ ಥೀಮ್​ನಲ್ಲಿ ಇಡೀ ಬಿಗ್​ಬಾಸ್ ಮನೆ​ಯನ್ನ ಡಿಸೈನ್ ಮಾಡ್ಲಾಗಿದೆ. ಅಷ್ಟೇ ಅಲ್ಲ, ಸುಂದರ ಮನೆ ನಿರ್ಮಾಣ ಹಿಂದಿನ ಮೇಕಿಂಗ್ ವಿಡಿಯೋವನ್ನೂ ಕಲರ್ಸ್ ವಾಹಿನಿ ರಿಲೀಸ್ ಮಾಡಿದೆ.  

ಇದನ್ನೂ ಓದಿ:ಬಿಗ್ ಬಾಸ್ ಷೋ ಸೆಟ್‌ ಡೀಸೈನ್ ರಿವೀಲ್ : ಅರಮನೆಯ ಥೀಮ್ ನಲ್ಲಿ ಸೆಟ್ ನಿರ್ಮಾಣ

Bigg Boss

ಈ ಬಾರಿಯ ದೊಡ್ಮನೆ ಆಟ ಸಿಕ್ಕಾಪಟ್ಟೆ ಡಿಫರೆಂಟ್ ಆಗರಲಿದೆ ಅಂತ ಈ ಪ್ರೋಮೋಗಳನ್ನ ನೋಡಿದ್ರೇನೆ ಗೊತ್ತಾಗುತ್ತೆ. ಇಂದು ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡದಲ್ಲಿ ಬಿಗ್​ಬಾಸ್​ ಗ್ರ್ಯಾಂಡ್ ಓಪನಿಂಗ್ ಇದೆ.  ದೊಡ್ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

Advertisment

ಇದನ್ನೂ ಓದಿ:ಬಿಗ್ ಬಾಸ್ ಹೌಸ್ ಮೇಕಿಂಗ್ ವಿಡಿಯೋ ಬಿಡುಗಡೆ.. ಬಿಗ್ ಬಾಸ್ ಹೌಸ್ ಹೇಗಿದೆ? ನೋಡಿ.

big boss set reveal

ಕಳೆದ 11 ಸೀಸನ್‌ಗಳಿಂದಲೂ ರಂಜಿಸುತ್ತ ಬಂದಿರುವ ಬಿಗ್‌ ಬಾಸ್, ಈ ಬಾರಿ Expect the Unexpected ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದೆ. ಇಂದು ಸಂಜೆ 6 ಗಂಟೆಗೆ ಬಿಗ್‌ ಬಾಸ್‌ ಸೀಸನ್‌ 12ರ ಗ್ರ್ಯಾಂಡ್‌ ಓಪನಿಂಗ್‌ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಶನಿವಾರ, ಭಾನುವಾರ ಕಿಚ್ಚನ ಪಂಚಾಯ್ತಿಯನ್ನು ಕಣ್ತುಂಬಿಕೊಳ್ಳಬಹುದು. 

ಇದನ್ನೂ ಓದಿ:ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಹೆಸರು ಇಂದು ಸಂಜೆಯೇ ಘೋಷಣೆ.. ಯಾರಾರು ಬಿಗ್ ಬಾಸ್ ಗೆ ಹೋಗ್ತಾರೆ ಗೊತ್ತಾ?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Bigg Boss Kannada 12
Advertisment
Advertisment
Advertisment