Advertisment

ಸುಖಾಸುಮ್ಮನೇ ಕೆಣಕಿದ ಪಾಕ್.. ಮತ್ತೆ ಮಣ್ಣು ಮುಕ್ಕಿಸಲು ಸೂರ್ಯ ಸೇನೆ ಮಾಸ್ಟರ್ ಪ್ಲಾನ್

ಏಷ್ಯಾಕಪ್​ ಟೂರ್ನಿಯಲ್ಲಿ ಮತ್ತೊಂದು ಹೈವೋಲ್ಟೆಜ್​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ದುಬೈ ರಣರಂಗದಲ್ಲಿ ಪಾಕ್​ ಪಡೆಯನ್ನ ಚಿಂದಿ ಉಡಾಯಿಸೋಕೆ ಮೆನ್​ ಇನ್​ ಬ್ಲೂ ಪಡೆ ತುದಿಗಾಲಲ್ಲಿ ನಿಂತಿದೆ. ಈ ಹಿಂದಿನ 2 ಭಾನುವಾರ ನಡೆದ ಎರಡೂ ಕದನದಲ್ಲಿ ಟೀಮ್​ ಇಂಡಿಯಾದ ಘರ್ಜನೆಗೆ ಪಾಕ್​ ಬೆಚ್ಚಿ ಬಿದ್ದಿದೆ.

author-image
Ganesh Kerekuli
india vs pakisthan (6)
Advertisment
  • ದುಬೈನಲ್ಲಿ ಪಾಕ್​ಗೆ ಕಾದಿದೆ ಮತ್ತೊಂದು ಮುಖಭಂಗ
  • ಚಾಂಪಿಯನ್​ ಪಟ್ಟವೇರಲು ಟೀಮ್​​ ಇಂಡಿಯಾ ರೆಡಿ
  • ಸೂಪರ್​​​-4 ಮುಖಾಮುಖಿಯಲ್ಲೂ ಪಾಕ್​ ಪಂಚರ್

ಏಷ್ಯಾಕಪ್​ ಟೂರ್ನಿಯಲ್ಲಿ ಮತ್ತೊಂದು ಹೈವೋಲ್ಟೆಜ್​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ದುಬೈ ರಣರಂಗದಲ್ಲಿ ಪಾಕ್​ ಪಡೆಯನ್ನ ಚಿಂದಿ ಉಡಾಯಿಸೋಕೆ ಮೆನ್​ ಇನ್​ ಬ್ಲೂ ಪಡೆ ತುದಿಗಾಲಲ್ಲಿ ನಿಂತಿದೆ. ಈ ಹಿಂದಿನ 2 ಭಾನುವಾರ ನಡೆದ ಎರಡೂ ಕದನದಲ್ಲಿ ಟೀಮ್​ ಇಂಡಿಯಾದ ಘರ್ಜನೆಗೆ ಪಾಕ್​ ಬೆಚ್ಚಿ ಬಿದ್ದ ಪರಿಯನ್ನ ಕ್ರಿಕೆಟ್​ ಜಗತ್ತು ನೋಡಿದೆ. ಇವತ್ತೂ ಅಷ್ಟೇ.. ಭಾರತದ ಆರ್ಭಟಕ್ಕೆ ಪಾಕ್​ ಪತರುಗುಟ್ಟಿ ಹೋಗಲಿದೆ. 

Advertisment

ಇದನ್ನೂ ಓದಿ:ಯುವರಾಜ್ ಸಿಂಗ್ ಗರಡಿಗೆ ಮತ್ತೊಬ್ಬ ಯಂಗ್ ಗನ್ ಎಂಟ್ರಿ​.. ಯಾರು ಈ ಹೊಸ ಸ್ಟೂಡೆಂಟ್?

IND vs PAK: ಭಾರತದ ಪ್ಲೇಯಿಂಗ್-11 ರಲ್ಲಿ ಭಾರೀ ಬದಲಾವಣೆ ಸಾಧ್ಯತೆ; ಬಿಗ್ ಹಿಟ್ಟರ್ ಸೂರ್ಯ ಮೇಲೆ ಕ್ಯಾಪ್ಟನ್ ಶರ್ಮಾ ಕಣ್ಣು..!

ಕ್ರಿಕೆಟ್​ ಲೋಕದ ಮತ್ತೊಂದು ಹೈವೋಲ್ಟೆಜ್​​ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ಸತತವಾಗಿ 3ನೇ ಭಾನುವಾರದಂದು ಬದ್ಧವೈರಿಗಳು ಆನ್​ಫೀಲ್ಡ್​ನಲ್ಲಿ ಮುಖಾಮುಖಿಯಾಗ್ತಿವೆ. ಆಫ್​ ದ ಫೀಲ್ಡ್​ನಲ್ಲಾದ ಘಟನೆಗಳು ಹಾಗೂ ಆನ್​ಫೀಲ್ಡ್​ ಬ್ಯಾಟಲ್​ಗಳು ಇಂದಿನ ಇಂಡೋ-ಪಾಕ್ ಕದನ ಫೀವರ್​ ಹೆಚ್ಚಿಸಿವೆ. ಬ್ಯಾಟಲ್​ಫೀಲ್ಡ್​ನಲ್ಲಿ ಪಾಕಿಗಳ ಸೊಕ್ಕಡಗಿಸಲು ಸೂರ್ಯನ ಸೈನ್ಯ ತುದಿಗಾಲಲ್ಲಿ ನಿಂತಿದೆ. 

ಚಾಂಪಿಯನ್​ ಪಟ್ಟವೇರಲು ಟೀಮ್​​ ಇಂಡಿಯಾ ರೆಡಿ

ಟೀಮ್​ ಇಂಡಿಯಾ ಬೆಂಕಿ ಬ್ಯಾಟಿಂಗ್​, ಬಿರುಗಾಳಿಯಂತಹ ಬೌಲಿಂಗ್​ ದಾಳಿ ನಡೆಸಿ ಅಜೇಯವಾಗಿ ಫೈನಲ್​ಗೆ ಕಾಲಿಟ್ಟಿದೆ. ಪಾಕಿಸ್ತಾನ ಪಡೆ ತಿಣುಕಾಡಿಕೊಂಡು ಫೈನಲ್​ ಬಂದಿದೆ. ಹೀಗಾಗಿ ಇಡೀ ಕ್ರಿಕೆಟ್​ ಜಗತ್ತು ಇದನ್ನ ಮತ್ತೊಂದು ಒನ್​ ಸೈಡ್​ ಗೇಮ್​ ಅಂತಲೇ ತೀರ್ಮಾನಿಸಿದೆ. ಟಿ20 ಲೋಕದ ಸುಲ್ತಾನ ಟೀಮ್​ ಇಂಡಿಯಾ ಚಾಂಪಿಯನ್​ ಪಟ್ಟವನ್ನೇರೋ ಕನ್​ಫರ್ಮ್​ ಅನ್ನೋ ತೀರ್ಮಾನ ಕ್ರಿಕೆಟ್​ ವಲಯದ್ದು. ಟೂರ್ನಿಯ ಮೊದಲ 2 ಮುಖಾಮುಖಿಗಳಲ್ಲಿ ಟೀಮ್​ ಇಂಡಿಯಾದ ಆರ್ಭಟಕ್ಕೆ ಪಾಕ್​ ಪಡೆ ಪತರುಗುಟ್ಟಿ ಹೋದ ರೀತಿಯೇ ಈ ತೀರ್ಮಾನಕ್ಕೆ ಬರೋಕೆ ಕಾರಣವಾಗಿದೆ. 

Advertisment

ಇದನ್ನೂ ಓದಿ:ಇಂದು ಭಾರತ- ಪಾಕ್​ ಹೈವೋಲ್ಟೇಜ್ ಫೈನಲ್​​ ಮ್ಯಾಚ್​.. ಬದ್ಧವೈರಿಗೆ ಹ್ಯಾಟ್ರಿಕ್ ಸೋಲು ಗ್ಯಾರಂಟಿನಾ?

IND vs ENG: ಸೂರ್ಯ, ಗಂಭೀರ್ ಈ ನಿರ್ಧಾರ ಟೀಂ ಇಂಡಿಯಾ ಸೋಲಿಗೆ ಶರಣಾಯ್ತು..!

ಲೀಗ್​ ಹಂತದ ಮುಖಾಮುಖಿಯಲ್ಲಿ ಟೀಮ್​ ಇಂಡಿಯಾದ ಘರ್ಜನೆಗೆ ಪಾಕಿಸ್ತಾನ ಪಡೆ ಥಂಡಾ ಹೊಡೆದಿತ್ತು. ಟಾಸ್​​ ಗೆದ್ದು ಅತಿಯಾದ ಆತ್ಮವಿಶ್ವಾಸದಲ್ಲಿ ಫಸ್ಟ್​ ಬ್ಯಾಟಿಂಗ್​ ಆಯ್ದುಕೊಂಡ ಪಾಕ್​ನ ಲೆಕ್ಕಾಚಾರವೆಲ್ಲಾ ಆನ್​ಫೀಲ್ಡ್​ನಲ್ಲಿ ಠುಸ್​​ ಪಟಾಕಿಯಾಯ್ತು. ಭಾರತ ಬೌಲಿಂಗ್​ ದಾಳಿಗೆ ತತ್ತರಿಸಿ ಹೋದ ಪಾಕ್​ ಪಾಡೆ ಜಸ್ಟ್​ 127 ರನ್​ಗಳಿಸುವಷ್ಟರಲ್ಲಿ ಸುಸ್ತಾಯ್ತು. ಈ ಟಾರ್ಗೆಟ್​​ ಅನ್ನ ಜಸ್ಟ್​ 3 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ ಸಲೀಸಾಗಿ ಚೇಸ್​ ಮಾಡ್ತು. 

ಟೀಮ್​ ಇಂಡಿಯಾ ಆರ್ಭಟಕ್ಕೆ ಪಾಕ್​ ಪಂಚರ್

ಲೀಗ್​ ಹಂತದ ಬಳಿಕ ಕಳೆದ ಭಾನುವಾರ ಸೂಪರ್​-4 ಹಣಾಹಣಿಯಲ್ಲಿ ಇಂಡೋ-ಪಾಕ್​ ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲೂ ಮೆನ್​ ಇನ್​ ಬ್ಲೂ ಘರ್ಜನೆಗೆ ಪಾಕ್​ ಪಡೆ ಪಂಚರ್ ಆಯ್ತು. ಮೊದಲು ಬ್ಯಾಟಿಂಗ್​ ನಡೆಸಿ 171 ರನ್​ಗಳ ಕಾಂಪಿಟೇಟಿವ್​ ಸ್ಕೋರ್​​ ಕಲೆ ಹಾಕ್ತು. ಈ ಟಾರ್ಗೆಟ್​ ಇಂಡಿಯನ್​ ಟೈಗರ್ಸ್​ ಯಾವ ಲೆಕ್ಕ ಹೇಳಿ. ಪಾಕ್​ ಬೌಲಿಂಗ್​ ದಾಳಿಯನ್ನ ಧೂಳಿಪಟ ಮಾಡಿದ ಟೀಮ್​ ಇಂಡಿಯಾ ಬ್ಯಾಟರ್ಸ್​​ 18.5 ಓವರ್​​ನಲ್ಲೇ ಟಾರ್ಗೆಟ್​​ ಚೇಸ್​​ ಮಾಡ್ತು. 

Advertisment

ಇದನ್ನೂ ಓದಿ:ವಿಜಯ್ ಱಲಿಯಲ್ಲಿ 39 ಮಂದಿ ಸಾವು, ಕಾಲ್ತುಳಿತಕ್ಕೆ ಕಾರಣ ಏನು ಗೊತ್ತಾ?

Team india (14)

ಸೂಪರ್​​4 ಪಂದ್ಯದಲ್ಲಿ ಪಾಕ್ ಆಟಗಾರರು ಸುಖಾಸುಮ್ಮನೆ ಟೀಮ್​ ಇಂಡಿಯಾ ಆಟಗಾರರನ್ನ ಕೆಣಕಿದ್ರು. ಕಾಲು ಕೆರೆದುಕೊಂಡು ಬಂದ ಹ್ಯಾರಿಸ್​​ ರೌಫ್​, ಶಾಹೀನ್​ ಅಫ್ರಿದಿಗೆ ಫೀಲ್ಡ್​ನಲ್ಲೇ ಟೀಮ್​ ಇಂಡಿಯಾ ಆಟಗಾರರು ಖಡಕ್​​​ ಆನ್ಸರ್​ ಕೊಟ್ರು. ಕೈ ಸನ್ನೆಯನ್ನ ಮಾಡಿ ಕುಚೆಷ್ಟೇ ಮಾಡಿದ್ದ ಹ್ಯಾರಿಸ್​ ರೌಫ್​ಗೆ ಆರ್ಷ್​​ದೀಪ್​​ ಸಿಂಗ್​ ಸರಿಯಾದ ತಿರುಗೇಟನ್ನೂ ಕೊಟ್ಟಿದ್ದಾರೆ. ಆದ್ರೂ ಕೋಪ ತಣ್ಣಗಾಗಲಿಲ್ಲ. ಇಂದಿನ ಪಂದ್ಯದಲ್ಲಿ ನರಕ ದರ್ಶನ ಮಾಡಿಸಿ ಹೀನಾಯವಾಗಿ ಸೋಲಿಸೋದೆ ಟೀಮ್​ ಇಂಡಿಯಾ ಗುರಿಯಾಗಿದೆ. 

ಯುದ್ಧಕ್ಕೆ ಸೂರ್ಯನ ಸೈನ್ಯ ರೆಡಿ

ಲೀಗ್​ ಹಾಗೂ ಸೂಪರ್​-4 ಮುಖಾಮುಖಿಯಲ್ಲಿ ಪಾಕ್​ ಪಡೆಯನ್ನ ಸೆದೆಬಡಿದಿರೋ ಟೀಮ್​ ಇಂಡಿಯಾ ಇದೀಗ 3ನೇ ಪಂದ್ಯದಲ್ಲೂ ಗೆಲುವನ್ನ ಎದುರು ನೋಡ್ತಿದೆ. ಇಂದು ನಡೆಯೋ ದುಬೈ ದಂಗಲ್​ಗೆ​ ವಿಶೇಷವಾಗಿ ಸಜ್ಜಾಗಿದೆ. ಸ್ಪೆಷಲ್​ ಗೇಮ್​ಪ್ಲಾನ್​, ಸ್ಟ್ರಾರ್ಟಜಿಯೊಂದಿಗೆ ಕಣಕ್ಕಿಳಿಯಲು ಸೂರ್ಯನ ಸೈನ್ಯ ರೆಡಿಯಾಗಿದೆ. ಕೋಚ್​​ ಗೌತಮ್​ ಗಂಭೀರ್​, ಕ್ಯಾಪ್ಟನ್​ ಸೂರ್ಯಕುಮಾರ್​​ ಯಾದವ್​ ಹೋಮ್​ವರ್ಕ್ ಮಾಡಿ ಸಜ್ಜಾಗಿದ್ದಾರೆ. ಅದೃಷ್ಟ ಕೈ ಹಿಡಿದು ಬಾಂಗ್ಲಾ ವಿರುದ್ಧದ ಪಂದ್ಯ ಗೆದ್ದು ಫೈನಲ್​ಗೆ ಬಂದಿರೋ ಪಾಕ್​, ಅತಿಯಾದ ಆತ್ಮವಿಶ್ವಾಸದಲ್ಲಿ ಮೆರೆದಾಡ್ತಿದೆ. ಹಾರಾಡ್ತಾ ಇರೋ ಪಾಕ್​​ನ ಉಡೀಸ್​ ಮಾಡಿ, ಸೋಲಿನ ದರ್ಶನ ಮಾಡಿಸೋದೆ ಟೀಮ್​ ಇಂಡಿಯಾ ಟಾರ್ಗೆಟ್​ ಆಗಿದೆ.

ಇದನ್ನೂ ಓದಿ:ಬಿಗ್​ಬಾಸ್​ ಸೀಸನ್ 12 ಇವತ್ತಿನಿಂದ ಆರಂಭ.. ಹೊಸ ಥೀಮ್​ನಡಿ ಅತಿದೊಡ್ಡ ರಿಯಾಲಿಟಿ ಶೋ..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2025 Asia cup final India vs Pakisthan final india vs pakistan asia cup
Advertisment
Advertisment
Advertisment