/newsfirstlive-kannada/media/media_files/2025/09/27/yuvraj_singh-2025-09-27-13-10-35.jpg)
ಯುವರಾಜ್ ಸಿಂಗ್.. ಟೀಮ್ ಇಂಡಿಯಾ ಯಶಸ್ಸಿಗಾಗಿ ಸರ್ವಸ್ವವೂ ಪಣಕ್ಕಿಟ್ಟ ಕ್ರಿಕೆಟರ್​. ಆದ್ರೆ, ಟೀಮ್ ಇಂಡಿಯಾದಿಂದ ಯುವಿ ದೂರವಾದರು. ಟೀಮ್ ಇಂಡಿಯಾ ಜೊತೆಗಿನ ಯಶಸ್ಸಿನ ಬಂಧ ಮಾತ್ರ ಬದಲಾಗಿಲ್ಲ. ಶುಭ್​ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾನ ನೀಡಿರುವ ಯುವಿ, ಈಗ ಮತ್ತೊಬ್ಬ ಮಿಸೈಲ್​​ನ ಟೀಮ್ ಇಂಡಿಯಾಗೆ ನೀಡೋಕೆ ರೆಡಿಯಾಗ್ತಿದ್ದಾರೆ.
ಯುವರಾಜ್ ಸಿಂಗ್.. ಸಿಕ್ಸರ್ ಕಿಂಗ್.. ದಿ ವಿಶ್ವಕಪ್ ಹೀರೋ.. ಈ ಲೆಜೆಂಡರಿ ಕ್ರಿಕೆಟರ್​ ಟೀಮ್ ಇಂಡಿಯಾದಿಂದ ದೂರ ಸರಿದು ವರ್ಷಗಳೇ ಉರುಳಿವೆ. ಹೀಗಾದ್ರೂ ಸಹ ಟೀಮ್ ಇಂಡಿಯಾದಲ್ಲಿ ಈತನ ಹೆಸರು ಈಗಲೂ ಸದ್ದು ಮಾಡ್ತಿದೆ.
ಟೀಮ್ ಇಂಡಿಯಾ ಪದ ಒಂದು ದಶಕಕಕ್ಕೂ ಹೆಚ್ಚು ಕಾಲ ಆಡಿರುವ ಯುವಿ, ಟೀಮ್ ಇಂಡಿಯಾಗಾಗಿ ಸ್ವರ್ವಸ್ವ ನೀಡಿದ್ದಾರೆ. ಪ್ರಾಣವನ್ನು ಪಣಕ್ಕಿಟ್ಟು ಟೀಮ್ ಇಂಡಿಯಾಗೆ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿದ್ದಾರೆ. ಈ ವಿಶ್ವಕಪ್​ ಗೆಲುವಿನ ಹೀರೋ ಯುವರಾಜ್, ಟೀಮ್ ಇಂಡಿಯಾದಿಂದ ದೂರವಾದರೂ, ಕೊಡುಗೆ ನೀಡ್ತಾನೆ ಇದ್ದಾರೆ. ಭವಿಷ್ಯದ ಭಾರತಕ್ಕೆ ಯಂಗ್​ ಮಿಸೈಲ್​ಗಳನ್ನ ರೆಡಿ ಮಾಡ್ತಿದ್ದಾರೆ.
ಶುಭ್​ಮನ್ ಗಿಲ್, ಅಭಿಷೇಕ್ ಶರ್ಮಾ ಈಗ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್ಸ್​ ಆಗಿದ್ದಾರೆ. ಇವರನ್ನ ಮ್ಯಾಚ್​​ ವಿನ್ನರ್​ಗಳಾಗಿ ತಯಾರು ಮಾಡಿದ್ದೇ ಯುವರಾಜ್ ಸಿಂಗ್​. ಯುವಿ ಗರಡಿಯಲ್ಲಿ ಪಳಗಿ ಬಂದಿರೋ ಇವರು, ಇವತ್ತು ಟೀಮ್ ಇಂಡಿಯಾ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸ್ತಿದ್ದಾರೆ.
ಹೊಸ ಕ್ರಿಕೆಟ್ ತಾರೆಗಳ ನೆಲೆಯಾದ ಯುವರಾಜ್ ಗರಡಿ.!
ಯುವರಾಜ್ ಸಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ಭಾರತದ ಹೊಸ ಕ್ರಿಕೆಟ್ ತಾರೆಗಳ ನೆಲೆಯಾಗಿದೆ. ಇದೇ ಗರಡಿಯಲ್ಲಿ ಪಳಗಿ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಅಭಿಷೇಕ್ ಶರ್ಮಾ, ಇವತ್ತು ವಿಶ್ವ ಕ್ರಿಕೆಟ್​ ಲೋಕದ ಹಾಟ್ ಟಾಪಿಕ್​ ಆಗಿದ್ದಾರೆ. ನಯಾ ಸಿಕ್ಸರ್ ಕಿಂಗ್ ಆಗಿ, ನಂಬರ್​​.1 ಟಿ20 ಬ್ಯಾಟ್ಸ್​ಮನ್ ಆಗಿ ವಿಶ್ವ ಕ್ರಿಕೆಟ್ ಲೋಕವನ್ನಾಳ್ವಿದ್ದಾರೆ. ಇದೇ ಹೊತ್ತಿಲ್ಲೇ ಯುವರಾಜ್ ಸಿಂಗ್ ಗರಡಿಗೆ ಮತ್ತೊಬ್ಬ ಯಂಗ್​ ಮಿಸೈಲ್ ಎಂಟ್ರಿಯಾಗಿದೆ. ಆ ಮಿಸೈಲ್ ಹೆಸರು ಪ್ರಿಯಾಂಶ್ ಆರ್ಯ.
ಪಂಜಾಬ್ ಕಿಂಗ್ಸ್​ ತಂಡದ ಓಪನರ್​, ಡೆಲ್ಲಿಯ ಪ್ರಿಯಾಂಶ್ ಆರ್ಯನೇ ಯುವರಾಜ್ ಸಿಂಗ್ ಹೊಸ ಸ್ಟೂಡೆಂಟ್​​. ಈ ಪ್ರಿಯಾಂಶ್ ಆರ್ಯಗೆ ಯುವರಾಜ್ ಸಿಂಗ್ ಟ್ರೈನಿಂಗ್ ನೀಡ್ತಿದ್ದಾರೆ.
ಪವರ್​​ ಸ್ಟ್ರೋಕ್ಸ್​ ಮೇಲೆ ಪ್ರಿಯಾಂಶ್​ ಆರ್ಯ ವರ್ಕೌಟ್​.!
ಸೀಸನ್​-18ರ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಸದ್ದು ಮಾಡಿದ್ದ ಹೆಸರು ಪ್ರಿಯಾಂಶ್ ಆರ್ಯ. ಅದ್ಬುತ ಬ್ಯಾಟಿಂಗ್​ನಿಂದ ಗಮನ ಸೆಳೆದಿದ್ದ ಈ ಪ್ರತಿಭೆ, ಫ್ಯೂಚರ್ ಸ್ಟಾರ್​ ಆಗಿ ಗುರುತಿಸಿಕೊಂಡಿದೆ. ಇದೀಗ ಈ ಫ್ಯೂಚರ್​ ಸ್ಟಾರ್ ಬ್ಯಾಟಿಂಗ್​ನಲ್ಲಿ ಮತ್ತಷ್ಟು ಇಂಪ್ರೋಮೆಂಟ್​ ಮಾಡಿಕೊಳ್ಳಲು ಯುವಿಯ ಗರಡಿ ಸೇರಿದ್ದಾರೆ. ಬ್ಯಾಟಿಂಗ್ ಕೌಶಲ್ಯಗಳ ವೃದ್ಧಿಗೆ ಟಿಪ್ಸ್ ನೀಡ್ತಿರುವ ಯುವರಾಜ್, ಪ್ರಿಯಾಂಶ್ ಆರ್ಯರ ಪವರ್ ಸ್ಟ್ರೋಕ್​ ವೃದ್ಧಿಗಾಗಿ ತರಬೇತಿ ನೀಡ್ತಿದ್ದಾರೆ.
ಇದನ್ನೂ ಓದಿ:ಕ್ಯಾಪ್ಟನ್ ಸೂರ್ಯ ಪರದಾಟ.. ಅಭಿಷೇಕ್, ತಿಲಕ್, ಸಂಜು ಬ್ಯಾಟಿಂಗ್​ ಪವರ್ ಹೇಗಿತ್ತು?
ನೆಹಾಲ್​ ವಡೇರಾ​, ಅಬ್ದುಲ್ ಸಮದ್ ಯುವಿ ಗರಡಿಯ ಪ್ರತಿಭೆಗಳು!
ಡೆಲ್ಲಿಯ ಪ್ರಿಯಾಂಶ್ ಆರ್ಯ ಮಾತ್ರವಲ್ಲ, ಪಂಜಾಬ್​ನ ಪ್ರಭುಸಿಮ್ರನ್ ಸಿಂಗ್ ಕೂಡ ಯುವಿ ಗರಡಿಯಲ್ಲಿ ಅಭ್ಯಾಸ ನಡೆಸ್ತಿದ್ದಾರೆ. ಐಪಿಎಲ್​​ನಲ್ಲಿ ಪಂಜಾಬ್ ಕಿಂಗ್ಸ್​ ತಂಡದ ವಿಕೆಟ್ ಕೀಪರ್ & ಬ್ಯಾಟ್ಸ್​ಮನ್ ಆಗಿರುವ ಪ್ರಭುಸಿಮ್ರಾನ್ ಸಿಂಗ್, ವಿಸ್ಪೋಟಕ ಬ್ಯಾಟಿಂಗ್​​ಗೆ ಹೆಸರುವಾಸಿ. ಪವರ್​ ಪ್ಲೇನಲ್ಲಿ ಪವರ್ ಫುಲ್ ಸ್ಟಾರ್ಟ್ ನೀಡುವ ಪ್ರಭಸಿಮ್ರಾನ್, ಪಟ್ಟು ಕಲಿತಿದ್ದು ಯುವರಾಜ್ ಮಾರ್ಗದರ್ಶನದಲ್ಲೇ, ನೆಹಾಲ್ ವಡೇರಾ, ಅಬ್ದುಲ್ ಸಮದ್ ಕೂಡ ಯುವರಾಜ್​ ಸಿಂಗ್​ ಶಿಷ್ಯರೇ.
ಹೊಸ ಟ್ಯಾಲೆಂಟ್ಸ್​ನ ಹುಟ್ಟು ಹಾಕ್ತಿದ್ದಾರೆ ಯುವರಾಜ್ ಸಿಂಗ್!
ಯುವರಾಜ್​​ಗೆ ಈಗ ಟೀಮ್ ಇಂಡಿಯಾ & ಬಿಸಿಸಿಐನಲ್ಲಿ ಸ್ಥಾನ ಇಲ್ಲ. ಆದ್ರೆ, ಟೀಮ್ ಇಂಡಿಯಾ ಯಶಸ್ಸಿಗೆ ಪರೋಕ್ಷವಾಗಿ ದುಡಿಯುತ್ತಿದ್ದಾರೆ. ಟೀಮ್ ಇಂಡಿಯಾಗೆ ಶುಭ್​ಮನ್ ಗಿಲ್, ಅಭಿಷೇಕ್ ಶರ್ಮರಂಥ ಟ್ಯಾಲೆಂಟೆಟ್​ ಕ್ರಿಕೆಟರ್​​ಗಳನ್ನು ನೀಡಿರುವ ಯುವರಾಜ್, ಪ್ರಿಯಾಂಶ್ ಆರ್ಯ, ಪ್ರಭುಸಿಮ್ರಾನ್​ರಂಥ ಭವಿಷ್ಯದ ತಾರೆಗಳನ್ನೂ ರೆಡಿ ಮಾಡ್ತಿದ್ದಾರೆ. ಯುವ ಆಟಗಾರರಿಗೆ ವಿಶ್ವ ದರ್ಜೆಯ ತರಬೇತಿ ನೀಡ್ತಿರುವ ಯುವರಾಜ್​, ಕೌಶಲ್ಯ ಮಾತ್ರವಲ್ಲದೆ, ಫಿಟ್‌ನೆಸ್, ಮೆಂಟಲ್ ಸ್ಟ್ರೆಂಥ್​ ಬಗ್ಗೆಯೂ ಮಾರ್ಗದರ್ಶನ ನೀಡ್ತಿದ್ದಾರೆ. ಆ ಮೂಲಕ ಹೊಸ ಪ್ರತಿಭೆಗಳನ್ನ ಟೀಮ್ ಇಂಡಿಯಾಗೆ ಕೊಡುಗೆಯಾಗಿ ನೀಡಲು ಶ್ರಮಿಸ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ