/newsfirstlive-kannada/media/media_files/2025/09/27/tilak_varma-1-2025-09-27-11-10-40.jpg)
ದುಬೈ ಅಂಗಳದಲ್ಲಿ ನಿನ್ನೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​​ಗಳು ಮತ್ತೊಮ್ಮೆ ದರ್ಬಾರ್​ ನಡೆಸಿದ್ರು. ಲಂಕನ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ ಇಂಡಿಯನ್​ ಬ್ಯಾಟರ್ಸ್​​ ಬೌಂಡರಿ-ಸಿಕ್ಸರ್​ ಸಿಡಿಸಿ ಅಬ್ಬರಿಸಿದರು. ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳ ಆರ್ಭಟಕ್ಕೆ ಲಂಕಾ ಪಡೆ ಕಂಗಾಲ್​ ಆಗಿ ಬಿಡ್ತು. ಕೊನೆಯ ಸೂಪರ್​ 4 ಕದನದಲ್ಲಿ ಟೀಮ್​ ಇಂಡಿಯಾ ಸೂಪರ್​ ಬ್ಯಾಟಿಂಗ್​ ಹೇಗಿತ್ತು?.
ಟಾಸ್​​​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾಗೆ ನಿರೀಕ್ಷಿತ ಓಪನಿಂಗ್​ ಸಿಗಲಿಲ್ಲ. ಮೊದಲ ಓವರ್​​ನ ಕೊನೆಯ ಎಸೆತವನ್ನ ಬೌಂಡರಿ ಬಾರಿಸಿ ಅಕೌಂಟ್​ ಓಪನ್​ ಮಾಡಿದ ಶುಭ್​ಮನ್​ ಗಿಲ್​ ಆಟ ಹೆಚ್ಚು ಹೊತ್ತು ನಡೀಲಿಲ್ಲ. ಜಸ್ಟ್​ 4 ರನ್​ಗಳಿಗೆ ಗಿಲ್​ ಆಟ ಅಂತ್ಯವಾಯ್ತು.
ಅಭಿಷೇಕ್​ ಅಬ್ಬರ.. ಪವರ್​​ ಪ್ಲೇನಲ್ಲೇ ಲಂಕಾಗೆ ಪಂಚ್​​.!
ಗಿಲ್​ ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದು ಟೀಮ್​ ಇಂಡಿಯಾಗೇನೂ ಹಿನ್ನಡೆಯಾಗಲಿಲ್ಲ. ಮತ್ತೊರ್ವ ಓಪನರ್​​ ಅಭಿಷೇಕ್​ ಶರ್ಮಾ ಆರ್ಭಟ ನಿನ್ನೆಯೂ ಮುಂದುವರೆಯಿತು. ತನ್ನದೇ ಸ್ಟೈಲ್​ನಲ್ಲಿ ಬ್ಯಾಟ್​ ಬೀಸಿದ ಅಭಿಷೇಕ್​ ಶರ್ಮಾ ಬೌಂಡರಿ, ಸಿಕ್ಸರ್​​ಗಳಲ್ಲೇ ರನ್​ಡೀಲ್​ ಮಾಡಿದರು.
ಜಸ್ಟ್​ 22 ಎಸೆತಕ್ಕೆ 50.. ಹ್ಯಾಟ್ರಿಕ್​ ಹಾಫ್​ ಸೆಂಚುರಿ.!
ಗಿಲ್​ ವಿಕೆಟ್​ ಕಳೆದುಕೊಂಡ ಹೊರತಾಗಿಯೂ ಟೀಮ್​ ಇಂಡಿಯಾಗೆ ಪವರ್​ಫುಲ್​ ಆರಂಭ ಸಿಗ್ತು. ಲಂಕಾ ಬೌಲರ್​ಗಳ ಮೇಲೆ ಸವಾರಿ ಮಾಡಿದ ಅಭಿಷೇಕ್​ ಶರ್ಮಾ ಜಸ್ಟ್​ 22 ಎಸೆತಗಳಲ್ಲಿ ಹಾಫ್​ ಸೆಂಚುರಿ ಪೂರೈಸಿದರು. ಪವರ್​​ ಪ್ಲೇ ಅಂತ್ಯಕ್ಕೆ 1 ವಿಕೆಟ್​ ನಷ್ಟಕ್ಕೆ ಟೀಮ್​ ಇಂಡಿಯಾ 71 ರನ್​ಗಳ ಬಿಗ್​ಸ್ಕೋರ್ ​ಗಳಿಸಿತು.
ಲಂಕಾ ಎದುರು ಪರದಾಡಿದ ಸೂರ್ಯಕುಮಾರ್​.!
ಒಂದೆಡೆ ಅಭಿಷೇಕ್​ ಶರ್ಮಾ ರನ್​ ಅಭಿಷೇಕ ಮಾಡಿದ್ರೆ, ನಾಯಕ ಸೂರ್ಯಕುಮಾರ್​ ಯಾದವ್​ ರನ್​ಗಳಿಕೆಗೆ ಪರದಾಡಿದ್ರು. ಕೇವಲ 1 ಬೌಂಡರಿ ಬಾರಿಸಿದ ಸೂರ್ಯ 13 ಎಸೆತಗಳಲ್ಲಿ 12 ರನ್​ಗಳಿಸಿ ಔಟಾದ್ರು.
ಸಂಜು ಸ್ಯಾಮ್ಸನ್​​- ತಿಲಕ್​ ವರ್ಮಾ ಸಾಲಿಡ್​ ಜೊತೆಯಾಟ.!
ಲಂಕಾ ಎದುರು ಕೂಡ ಅಭಿಷೇಕ್​ ಶರ್ಮಾ ಶತಕದ ಹಾದಿಯಲ್ಲಿ ಎಡವಿದ್ರು. 8 ಬೌಂಡರಿ, 2 ಸಿಕ್ಸರ್​ ಸಿಡಿಸಿ ಫ್ಯಾನ್ಸ್​ಗೆ ಎಂಟರ್​​​ಟೈನ್​ಮೆಂಟ್​ ನೀಡಿದ ಅಭಿಷೇಕ್​ 61 ರನ್ ​ಗಳಿಸಿದ್ದಾಗ ಔಟಾದ್ರು. ಆದ್ರೆ, ಟೀಮ್​ ಇಂಡಿಯಾದ ರನ್​ಗಳಿಕೆ ನಿಲ್ಲಲಿಲ್ಲ. ತಿಲಕ್​ ವರ್ಮಾ-ಸಂಜು ಸ್ಯಾಮ್ಸನ್​​ ಸಾಲಿಡ್​​ ಜೊತೆಯಾಟ ವಾಡಿದರು.
4ನೇ ವಿಕೆಟ್​ಗೆ ಸಂಜು​- ತಿಲಕ್​ 42 ಎಸೆತಗಳಲ್ಲಿ 66 ರನ್​ಗಳ ಜೊತೆಯಾಟವಾಡಿದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸಂಜು ಸ್ಯಾಮ್ಸನ್​​ 23 ಎಸೆತಗಳಲ್ಲಿ 39 ರನ್​ಗಳಿಸಿದರು. ಬಳಿಕ ಬ್ಯಾಟಿಂಗ್​ಗೆ ಬಂದ ಹಾರ್ದಿಕ್​ ಪಾಂಡ್ಯ 2 ರನ್​ಗಳಿಸಿ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ತಿಲಕ್​ ವರ್ಮಾ-ಅಕ್ಷರ್​​ ಪಟೇಲ್​ ವೇಗವಾಗಿ ರನ್​ಗಳಿಸಿದರು. ಮತ್ತೊಂದು ಉತ್ತಮ ಇನ್ನಿಂಗ್ಸ್​ ಕಟ್ಟಿದ ತಿಲಕ್​ 23 ಎಸೆತಗಳಲ್ಲಿ ಅಜೇಯ 49 ರನ್​ಗಳಿಸಿದರು.
ಅಕ್ಷರ್​ ಪಟೇಲ್​ ಅಜೇಯ 15 ರನ್ ​ಗಳಿಸಿದರು. ಅಂತಿಮವಾಗಿ 20 ಓವರ್​ಗಳ ಅಂತ್ಯಕ್ಕೆ ಟೀಮ್​ ಇಂಡಿಯಾ 5 ವಿಕೆಟ್​ ನಷ್ಟಕ್ಕೆ 202 ರನ್​ ಸ್ಕೋರ್​ ಕಲೆ ಹಾಕಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ