Union Budget: ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯಿದೆ ಜಾರಿ

ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯವನ್ನ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ. ಬಜೆಟ್​ಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್​ಡೇಟ್ಸ್​ ಇಲ್ಲಿದೆ.

author-image
Ganesh Kerekuli
Updated On
New Update
union budget
Advertisment

ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯವನ್ನ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ. ಬಜೆಟ್​ಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್​ಡೇಟ್ಸ್​ ಇಲ್ಲಿದೆ.

  • Feb 01, 2026 13:07 IST

    ವಿಕಸಿತ ಭಾರತ 2047ಕ್ಕೆ ಬುನಾದಿ

    ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಅಮೆರಿಕದ ಹೆಚ್ಚಿನ ಸುಂಕದ (High US Tariffs) ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಯನ್ನು ಸದೃಢಗೊಳಿಸಲು ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಈ ಬಜೆಟ್ ಹೊಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಬಾರಿಯ ಬಜೆಟ್‌ನಲ್ಲಿ ಉತ್ಪಾದನಾ ವಲಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಾಮಾನ್ಯ ಜನರ ಜೀವನ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸಲಾಗಿದೆ.



  • Feb 01, 2026 13:07 IST

    ಯಾವುದೆಲ್ಲ ದುಬಾರಿ..?

    ಯಾವುದು ದುಬಾರಿ? 

    • ಮದ್ಯ: ಮದ್ಯದ ಮೇಲಿನ ಸುಂಕ ಹೆಚ್ಚಳದಿಂದಾಗಿ ಮದ್ಯ ಪ್ರಿಯರಿಗೆ ಬಿಸಿ ತಟ್ಟಲಿದೆ
    • ಖನಿಜಗಳು ಮತ್ತು ಸ್ಕ್ರ್ಯಾಪ್:ವಿವಿಧ ಖನಿಜಗಳು (Minerals) ಮತ್ತು ಸ್ಕ್ರ್ಯಾಪ್‌ಗಳ ಬೆಲೆ ಏರಿಕೆಯಾಗಲಿದೆ
    • ಸಿಗರೇಟ್
    • ಸಿಗರೇಟ್ ಮತ್ತು ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳು
    • ಆದಾಯ ತೆರಿಗೆಯನ್ನು ತಪ್ಪಾಗಿ ವರದಿ ಮಾಡುವುದು (Misreporting income tax)
    • ಚರ ಆಸ್ತಿಗಳನ್ನು ಬಹಿರಂಗಪಡಿಸದಿರುವುದು (Non-disclosure of movable assets)
    • ಷೇರು ಆಯ್ಕೆಗಳು ಮತ್ತು ಭವಿಷ್ಯದ ವ್ಯಾಪಾರ (Stock options and futures trading)



  • Feb 01, 2026 13:06 IST

    ಯಾವ ವಸ್ತುಗಳು ಕಮ್ಮಿ ಬೆಲೆಗೆ ಸಿಗುತ್ತವೆ..?

    ‘ವಿಕಸಿತ ಭಾರತ 2047’ ಗುರಿಯೊಂದಿಗೆ ಮಂಡಿಸಲಾದ ಈ ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಹಲವು ಆಶಾದಾಯಕ ಘೋಷಣೆಗಳನ್ನು ಮಾಡಲಾಗಿದ್ದು, ದಿನನಿತ್ಯದ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ. ತೆರಿಗೆ ಬದಲಾವಣೆಯಿಂದಾಗಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಬಜೆಟ್‌ನಲ್ಲಿ ಸುಂಕ ಕಡಿತದ ಹಿನ್ನೆಲೆಯಲ್ಲಿ ಈ ಕೆಳಗಿನ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:ಸಾಮಾನ್ಯ ಜನರಿಗೆ ರಿಲೀಫ್! ಬಟ್ಟೆ, ಮೊಬೈಲ್, ಔಷಧ ಅಗ್ಗ.. ಯಾವುದೆಲ್ಲ ದುಬಾರಿ..?

    ಯಾವುದು ಅಗ್ಗ? 

    • ಔಷಧಗಳುಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 17 ಪ್ರಮುಖ ಔಷಧಗಳು ಮತ್ತು ಸಕ್ಕರೆ ಕಾಯಿಲೆ (Diabetes) ಔಷಧಗಳು ಅಗ್ಗವಾಗಲಿವೆ.
    • ಲೆದರ್ ಮತ್ತು ಪಾದರಕ್ಷೆ:ಚರ್ಮದ ಶೂಗಳು ಹಾಗೂ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ
    • ಬಟ್ಟೆ: ಬಟ್ಟೆ ಮತ್ತು ಸಿದ್ಧ ಉಡುಪುಗಳ ರಫ್ತಿಗೆ ಉತ್ತೇಜನ ನೀಡಲಾಗಿದ್ದು, ಇವುಗಳ ಬೆಲೆ ಇಳಿಕೆಯಾಗಲಿದೆ
    • ಎಲೆಕ್ಟ್ರಾನಿಕ್ಸ್: ಮೈಕ್ರೋವೇವ್ ಓವನ್‌ಗಳು ಇನ್ಮುಂದೆ ಕಡಿಮೆ ಬೆಲೆಗೆ ಸಿಗಲಿವೆ
    • ವಾಹನ ಮತ್ತು ಇಂಧನ:ಎಲೆಕ್ಟ್ರಿಕ್ ವಾಹನಗಳ (EV) ಬ್ಯಾಟರಿಗಳು ಮತ್ತು ಬಯೋಗ್ಯಾಸ್ ಮಿಶ್ರಿತ ಸಿಎನ್‌ಜಿ (CNG) ಅಗ್ಗವಾಗಲಿದೆ
    • ಪ್ರವಾಸ ಮತ್ತು ವಿಮಾನ:ವಿದೇಶಿ ಪ್ರಯಾಣದ ವೆಚ್ಚ ತಗ್ಗಲಿದೆ ಹಾಗೂ ವಿಮಾನ ತಯಾರಿಕೆಗೆ ಸಂಬಂಧಿಸಿದ ಬಿಡಿಭಾಗಗಳ ಬೆಲೆ ಇಳಿಕೆಯಾಗಲಿದೆ
    • ಸೌರಶಕ್ತಿ:ಸೋಲಾರ್ ಪ್ಯಾನಲ್ ಮತ್ತು ಸೌರಶಕ್ತಿಗೆ ಸಂಬಂಧಿಸಿದ ಉಪಕರಣಗಳು ಅಗ್ಗವಾಗಲಿವೆ.
    • ಸೀಫುಡ್
    • ವಿದೇಶಿ ಟೂರ್ ಪ್ಯಾಕೇಜ್
    • ವಿದೇಶಿ ಶಿಕ್ಷಣ ಖರ್ಚುವೆಚ್ಚಗಳು
    • ಸ್ಮಾರ್ಟ್​ಫೋನ್ಸ್​
    • EV ಬ್ಯಾಟರಿಸ್
    • ಕ್ರೀಡಾ ಸಾಮಗ್ರಿಗಳು
    • ಲಿಥಿಯಂ ಬ್ಯಾಟರಿ ಘಟಕಗಳು
    • ಪರಮಾಣು ವಿದ್ಯುತ್ ಯೋಜನೆಗಳಿಗೆ ಆಮದು ಮಾಡಿಕೊಳ್ಳುವ ಸರಕುಗಳು



  • Feb 01, 2026 12:41 IST

    ಆದಾಯ ತೆರಿಗೆದಾರರಿಗೆ ಸಿಹಿಸುದ್ದಿ

    ಸಾಲ ಮತ್ತು ಜಿಡಿಪಿ ನಡುವಿನ ಅಂತರ ಕಡಿಮೆಯಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ನಾವು 26.7 ಲಕ್ಷ ಕೋಟಿ ರೂಪಾಯಿಗಳನ್ನು ತೆರಿಗೆಯಾಗಿ ಸ್ವೀಕರಿಸಿದ್ದೇವೆ. 34 ಲಕ್ಷ ಕೋಟಿ ರೂಪಾಯಿಗಳನ್ನು ಇತರ ಮೂಲಗಳಿಂದ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ. ವೆಚ್ಚ 49.6 ಲಕ್ಷ ಕೋಟಿ ರೂಪಾಯಿಗಳು. ಬಂಡವಾಳ ವೆಚ್ಚ 11 ಲಕ್ಷ ಕೋಟಿ ರೂಪಾಯಿಗಳು. 2026-27ರಲ್ಲಿ ಸಾಲ ಕೊರತೆ 36.5 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. 53.5 ಲಕ್ಷ ಕೋಟಿ ರೂಪಾಯಿಗಳ ವೆಚ್ಚವನ್ನು ಘೋಷಿಸಲಾಗಿದೆ. ಹಣಕಾಸಿನ ಕೊರತೆಯನ್ನು ಸರಿದೂಗಿಸಲು ನಾವು ಮಾರುಕಟ್ಟೆಯಿಂದ ಸಾಲ ಪಡೆಯುತ್ತೇವೆ.  ಈ ಕುರಿತ ಕಂಪ್ಲೀಟ್ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ.. ಆದಾಯ ತೆರಿಗೆದಾರರಿಗೆ ಸಿಹಿಸುದ್ದಿ



  • Feb 01, 2026 12:25 IST

    17 ಕ್ಯಾನ್ಸರ್ ಸಂಬಂಧಿತ ಔಷಧಿಗಳ ಮೇಲೆ ರಿಯಾಯಿತಿ

    ಕ್ಯಾನ್ಸರ್ ಸಂಬಂಧಿತ 17 ಔಷಧಿಗಳಿಗೆ ವಿನಾಯಿತಿ ನೀಡುವುದಾಗಿ ಹಣಕಾಸು ಸಚಿವರು ಘೋಷಿಸಿದರು ಮತ್ತು ಇತರ ಏಳು ಅಪರೂಪದ ಕಾಯಿಲೆಗಳ ಔಷಧಿಗಳನ್ನು ನಿರ್ದಿಷ್ಟ ವೈದ್ಯಕೀಯ ಉದ್ದೇಶಗಳಿಗಾಗಿ ಆಮದಿನಿಂದಲೂ ವಿನಾಯಿತಿ ನೀಡಲಾಗುವುದು ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ. 



  • Feb 01, 2026 12:21 IST

     ಬಜೆಟ್‌ನಲ್ಲಿ ಮಹಿಳೆಯರಿಗೆ ಗುಡ್​ನ್ಯೂಸ್​..!

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರ ಬಗ್ಗೆ ಒಂದು ಪ್ರಮುಖ ಘೋಷಣೆ ಮಾಡಿದರು. ತಮ್ಮ ಭಾಷಣದಲ್ಲಿ, ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು SHE (ಸ್ವಸಹಾಯ ಉದ್ಯಮಿ) ಮಾರ್ಟ್ಸ್ ಅನ್ನು ಸಮುದಾಯ ಸ್ವಾಮ್ಯದ ಚಿಲ್ಲರೆ ಅಂಗಡಿಗಳಾಗಿ ಸ್ಥಾಪಿಸಲಾಗುವುದು ಎಂದು ಹೇಳಿದರು.



  • Feb 01, 2026 12:16 IST

    ‘ಖೇಲೋ ಇಂಡಿಯಾ’ ಮಿಷನ್ ಘೋಷಣೆ

    ಕ್ರೀಡಾ ಕ್ಷೇತ್ರದಲ್ಲಿ ಬದಲಾವಣೆ ತರಲು ‘ಖೇಲೋ ಇಂಡಿಯಾ’ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ. 



  • Feb 01, 2026 12:14 IST

    ಭಾರತದಲ್ಲಿ ಡೇಟಾ ಸೆಂಟರ್‌ಗಳ ಸ್ಥಾಪನೆಗೆ ವಿನಾಯಿತಿ

    ವಿದೇಶಾಂಗ ಸಚಿವರು ತೆರಿಗೆ ರಜೆಯನ್ನು 2047 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ವಿದೇಶಿ ಕಂಪನಿಗಳು ಭಾರತದಲ್ಲಿ ಡೇಟಾ ಕೇಂದ್ರಗಳನ್ನು ನಿರ್ಮಿಸಿದರೆ ಇದರ ಲಾಭ ಪಡೆಯಬಹುದು  



  • Feb 01, 2026 12:01 IST

    ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ನಿಯಮ ಜಾರಿ

    ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ನಿಯಮ ಜಾರಿಗೆ ಬರುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.  ಸ್ವಾವಲಂಬಿ ಭಾರತಕ್ಕಾಗಿ 2,000 ಕೋಟಿ ರೂಪಾಯಿಗಳು. ಹೆಚ್ಚುವರಿಯಾಗಿ, ಆದಾಯ ತೆರಿಗೆ ನಮೂನೆಗಳನ್ನು ಸರಳೀಕರಿಸಲಾಗುವುದು. ಹೊಸ ಕಾನೂನು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ ಎಂದು ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ.  



  • Feb 01, 2026 11:59 IST

    ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ

    16ನೇ ಹಣಕಾಸು ಆಯೋಗವು ತನ್ನ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದೆ. ಅವರ ಸಲಹೆಯನ್ನು ಸ್ವೀಕರಿಸಲಾಗಿದೆ. 2026-27ರಲ್ಲಿ ನಾವು ರಾಜ್ಯಗಳಿಗೆ ₹1.4 ಲಕ್ಷ ಕೋಟಿ ಹಂಚಿಕೆ ಮಾಡುತ್ತಿದ್ದೇವೆ, ಇದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಹಣವೂ ಸೇರಿದೆ.



  • Feb 01, 2026 11:56 IST

    20,000 ಯುವಕರಿಗೆ ಪ್ರವಾಸೋದ್ಯಮ ಮಾರ್ಗದರ್ಶಕ ಉದ್ಯೋಗ

    ಖಗೋಳಶಾಸ್ತ್ರಕ್ಕೆ ಉತ್ತೇಜಿಸಲಾಗುವುದು. 20,000 ಯುವಕರಿಗೆ ಪ್ರವಾಸೋದ್ಯಮ ಮಾರ್ಗದರ್ಶಕರಾಗಿ ತರಬೇತಿ ನೀಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ.



  • Feb 01, 2026 11:48 IST

    ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ 

    ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.



  • Feb 01, 2026 11:43 IST

    7 ಹೈಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ದೆಹಲಿ-ವಾರಣಾಸಿ ಕಾರಿಡಾರ್ ಸೇರಿದಂತೆ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದರು. ವಾರಣಾಸಿ ಮತ್ತು ಪಾಟ್ನಾದಲ್ಲಿ ಹಡಗು ದುರಸ್ತಿ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು. ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಕಾರಿಡಾರ್‌ಗಳಲ್ಲಿಯೂ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು.   



  • Feb 01, 2026 11:40 IST

    ದೇಶದಲ್ಲಿ ಮೂರು ಹೊಸ ಏಮ್ಸ್, 7 ರೈಲು ಕಾರಿಡಾರ್‌ಗಳು -ಬಜೆಟ್‌ನಲ್ಲಿ ದೊಡ್ಡ ಘೋಷಣೆ

    ದೇಶದಲ್ಲಿ ಮೂರು ಹೊಸ ಏಮ್ಸ್, 7 ರೈಲು ಕಾರಿಡಾರ್‌ಗಳು -ಬಜೆಟ್‌ನಲ್ಲಿ ದೊಡ್ಡ ಘೋಷಣೆ



  • Feb 01, 2026 11:39 IST

    ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಮಾಸ್ಟರ್ ಪ್ಲಾನ್

    ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕಿಂಗ್ ಕುರಿತು ಸಮಿತಿಯನ್ನು ರಚಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಗ್ರಾಹಕರನ್ನು ರಕ್ಷಿಸಲು ನಾವು ಹೊಸ ಉನ್ನತ ಮಟ್ಟದಲ್ಲಿ ಕೆಲಸ ಮಾಡಲು ಬಯಸುತ್ತೇವೆ ಎಂದು ತಿಳಿಸಿದರು. 



  • Feb 01, 2026 11:38 IST

    ಮೂರು ರಾಜ್ಯಗಳಲ್ಲಿ ಗಣಿಗಾರಿಕೆ ಕಾರಿಡಾರ್

    ಒಡಿಶಾ, ಕೇರಳ ಮತ್ತು ಛತ್ತೀಸ್‌ಗಢದಲ್ಲಿ ಗಣಿಗಾರಿಕೆ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. 



  • Feb 01, 2026 11:37 IST

    ರಾಷ್ಟ್ರೀಯ ಫೈಬರ್ ಯೋಜನೆ

    ರೇಷ್ಮೆ, ಸೆಣಬು ಮತ್ತು ಉಣ್ಣೆಗಾಗಿ ರಾಷ್ಟ್ರೀಯ ನಾರು ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. 



  • Feb 01, 2026 11:27 IST

    22 ಹೊಸ ಜಲಮಾರ್ಗ ನಿರ್ಮಾಣ

    ದೇಶದಲ್ಲಿ 22 ಹೊಸ ಜಲಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ.  



  • Feb 01, 2026 11:26 IST

    ಕ್ಯಾನ್ಸರ್, ಮಧುಮೇಹ ಔಷಧಿಗಳ ಬೆಲೆ ಅಗ್ಗ

    ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. 



  • Feb 01, 2026 11:24 IST

    ಅಪರೂಪದ ಭೂಮಿಯ ಖನಿಜಗಳ ಕಾರಿಡಾರ್ ಘೋಷಣೆ

    ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಪರೂಪದ ಭೂಮಿಯ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. 



  • Feb 01, 2026 11:24 IST

    ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 10,000 ಕೋಟಿ ರೂ.ಗಳ ಘೋಷಣೆ

    ಅಭಿವೃದ್ಧಿಯ ಹಾದಿಯಲ್ಲಿ MSMEಗಳು ನಿರ್ಣಾಯಕ ಪಾಲುದಾರರು. ನಾವು ಅವರ ಬೆಳವಣಿಗೆಯನ್ನು ಸಾಧಿಸಲು ಬಯಸುತ್ತೇವೆ. ಉದ್ಯಮಿಗಳಿಗೆ ಪ್ರಯೋಜನವಾಗುವಂತೆ ನಾವು ಈ ಉದ್ದೇಶಕ್ಕಾಗಿ ₹10,000 ಕೋಟಿಗಳನ್ನು ನೀಡುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.



  • Feb 01, 2026 11:20 IST

    ಹಳ್ಳಿಗಳಿಗೆ ದೊಡ್ಡ ಘೋಷಣೆ

    ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ನೇಕಾರರು ಮತ್ತು ಗುಡಿ ಕೈಗಾರಿಕೆಗಳಿಗೆ ಪ್ರಯೋಜನ ನೀಡುತ್ತದೆ. ಬಡ ಗ್ರಾಮೀಣ ಯುವಕರಿಗೆ ಪ್ರಯೋಜನವಾಗುತ್ತದೆ. ಭಾರತವು ಕ್ರೀಡೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ. 



  • Feb 01, 2026 11:18 IST

    ಸೆಮಿಕಂಡಕ್ಟರ್ ಹಬ್​ಗೆ ಶಪಥ 

    ಭಾರತವನ್ನು ಸೆಮಿಕಂಡಕ್ಟರ್ ಹಬ್ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸೆಮಿಕಂಡಕ್ಟರ್ ಅಭಿವೃದ್ಧಿಗೆ 40,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. 



  • Feb 01, 2026 11:14 IST

    ಉತ್ಪಾದನಾ ವಲಯದ ಮೇಲೆ ಗಮನ- ಹಣಕಾಸು ಸಚಿವರು

    ನಾವು ಉತ್ಪಾದನಾ ವಲಯದ ಮೇಲೆ ಗಮನ ಹರಿಸುತ್ತಿದ್ದೇವೆ. ಹಳೆಯ ವಲಯವನ್ನು ಬಲಪಡಿಸುವುದು, ಎಂಎಸ್‌ಎಂಇಗಳನ್ನು ಬಲಪಡಿಸುವುದು. ಆರ್ಥಿಕ ವಲಯದ ಜೊತೆಗೆ ಭದ್ರತೆಯನ್ನು ಬಲಪಡಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ -ನಿರ್ಮಲಾ ಸೀತಾರಾಮನ್ 



  • Feb 01, 2026 11:13 IST

    ಬಯೋಫಾರ್ಮಾಗೆ 10,000 ಕೋಟಿ 

    ನಮ್ಮ ಗಮನ ಜೈವಿಕ ಔಷಧಗಳ ಮೇಲೆ ಇರುತ್ತದೆ. ನಾವು ₹10,000 ಕೋಟಿ ಹಂಚಿಕೆ ಮಾಡುತ್ತಿದ್ದೇವೆ. ಮೂರು ಸಂಸ್ಥೆಗಳು ಸ್ಥಾಪನೆಯಾಗಲಿವೆ. ಪ್ರಸ್ತುತ, ನಮ್ಮಲ್ಲಿ ಏಳು ಸಂಸ್ಥೆಗಳಿದ್ದು, ಅವುಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು -ನಿರ್ಮಲಾ ಸೀತಾರಾಮನ್



  • Feb 01, 2026 11:08 IST

    ಬಜೆಟ್ ಮಂಡನೆ 2026 ಆರಂಭ

    ಈ ಬಾರಿ ಬಜೆಟ್ ಮಂಡನೆ 2026 ಆರಂಭ ಆಗಿದೆ. ಗುರು ರವಿದಾಸ್  ಹೆಸರಿನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡ್ತಿದ್ದಾರೆ. ಈ ಬಾರಿಯ ಬಜೆಟ್ ಮೊದಲ ಬಾರಿಗೆ ಕರ್ತವ್ಯ ಭವನದಲ್ಲಿ ರಚಿಸಲಾಗಿದೆ.



  • Feb 01, 2026 10:41 IST

    ಕೇಂದ್ರ ಸಚಿವ ಸಂಪುಟ ಬಜೆಟ್‌ಗೆ ಅನುಮೋದನೆ

    ಕೇಂದ್ರ ಸಚಿವ ಸಂಪುಟ ಬಜೆಟ್‌ಗೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯು ಬಜೆಟ್‌ಗೆ ಅನುಮೋದನೆ ಸಿಕ್ಕಿದೆ. ಈಗ, ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯಸಭೆಯಲ್ಲಿ ಮಂಡಿಸುತ್ತಾರೆ.



  • Feb 01, 2026 10:40 IST

    ಕೇಂದ್ರ ಸಚಿವ ಸಂಪುಟ ಬಜೆಟ್‌ಗೆ ಅನುಮೋದನೆ ನೀಡಿದೆ

    ಕೇಂದ್ರ ಸಚಿವ ಸಂಪುಟ ಬಜೆಟ್‌ಗೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯು ಬಜೆಟ್‌ಗೆ ಅನುಮೋದನೆ ಸಿಕ್ಕಿದೆ. ಈಗ, ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯಸಭೆಯಲ್ಲಿ ಮಂಡಿಸುತ್ತಾರೆ.



  • Feb 01, 2026 10:38 IST

    ಕೇಂದ್ರ ಬಜೆಟ್ ಭಾಷಣದಲ್ಲಿ ಪಾರ್ಟ್ A, ಪಾರ್ಟಿ B ವಿಭಾಗ..!

    ಕೇಂದ್ರ ಬಜೆಟ್ ಭಾಷಣದಲ್ಲಿ ಪಾರ್ಟ್ ಎ ಹಾಗೂ ಪಾರ್ಟಿ ಬಿ ಎಂದು ಎರಡು ವಿಭಾಗ. 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪಾರ್ಟ್ ಬಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಾರ್ಟ್ ಎ ಭಾಗದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ, ಯೋಜನೆಗಳು, ಅನುದಾನಗಳು, ನೀತಿ ಸೇರಿದಂತೆ ಹಲವು ಘೋಷಣೆಗಳು ಇರುತ್ತದೆ. 

    ಪಾರ್ಟ್ ಬಿ ಬಜೆಟ್ ಪ್ರತಿಯಲ್ಲಿ ತೆರಿಗೆ ಪ್ರಸ್ತಾವನೆ ಸೇರಿದಂತೆ ಕೆಲ ಘೋಷಣೆಗಳಿಗೆ ಸೀಮಿತವಾಗಿರುತ್ತದೆ. ಈ ಬಾರಿ ನಿರ್ಮಾಲಾ ಸೀತಾರಾಮನ್ ಪಾರ್ಟಿ ಬಿ ಮೇಲೆ ಒತ್ತು ನೀಡುವ ಸಾದ್ಯತೆ ಇದೆ. ಪಾರ್ಟ್ ಬಿಯಲ್ಲಿ ಅಂಕಿ ಅಂಶಗಳು ಘೋಷಣೆಗಳ ಬದಲು ಭವಿಷ್ಯದ ನೀತಿ, ಯೋಜನೆ, ತೆರಿಗೆ ಸರಳೀಕರಣ,  ತೆರಿಗೆ ಪದ್ಧತಿ ಸುಧಾರಣೆ, ರಫ್ತು ಸೇರಿದಂತೆ ಪ್ರಮುಖ ಮಾಹಿತಿಗಳು ಇರಲಿದೆ. ದೇಶದ ಮುಂದಿರುವ ಆರ್ಥಿಕ ಸವಾಲು, ಮುಂದಿನ 25 ವರ್ಷಗಳ ಆರ್ಥಿಕ ದೃಷ್ಟಿಕೋನ ಹಾಗೂ ಯೋಜನೆ, ಆರ್ಥಿಕ ಶಿಸ್ತು, ಸಮತೋಲನ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಪಾರ್ಟ್ ಬಿ ಗಮನಹರಿಸಲಿದೆ. 



  • Feb 01, 2026 10:20 IST

    ದೇಶದಲ್ಲಿ RS 1,93,384 ಕೋಟಿ GST ಸಂಗ್ರಹ

    2026ರ ಜನವರಿಯಲ್ಲಿ ದೇಶದಲ್ಲಿ 1,93,384 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. 2025ರ ಜನವರಿಗೆ ಹೋಲಿಸಿದರೆ ಶೇ.6.2 ರಷ್ಟು ಹೆಚ್ಚಳವಾಗಿದೆ. ಇಂದು ಕೇಂದ್ರದ ಹಣಕಾಸು ಇಲಾಖೆಯಿಂದ ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆ ಆಗಿದೆ. 



  • Feb 01, 2026 10:00 IST

    ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ಬಜೆಟ್ ಮಂಡನೆ

    ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆಯಲ್ಲಿ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಬಂದಿದ್ದಾರೆ. ಈ ವರ್ಷ ತಮಿಳುನಾಡು ಅಸೆೆಂಬ್ಲಿ ಚುನಾವಣೆ ಇದೆ. ಹೀಗಾಗಿ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಬಜೆಟ್ ಮಂಡಿಸಲು ಆಗಮಿಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷದ ಬಿಹಾರದ ಮಧುಬನಿ ಆರ್ಟ್ಸ್ ಸೀರೆ ಧರಿಸಿ ಬಜೆಟ್ ಮಂಡಿಸಿದ್ದರು. 2024ರಲ್ಲಿ ಆಂಧ್ರದ ಮಂಗಲಗಿರಿ ಹ್ಯಾಂಡ್ ಲೂಮ್ ಸೀರೆ ಧರಿಸಿದ್ದರು. 



  • Feb 01, 2026 09:44 IST

    ‘ಬಜೆಟ್’​ ಎಂಬ ಪದ ಹುಟ್ಟಿಕೊಂಡ ಕತೆ ಗೊತ್ತಾ?

    ಬಜೆಟ್ ಎಂಬ ಪದದ ಮೂಲ ಫ್ರೆಂಚ್. ‘ಬೌಗೆಟ್​​’ನಿಂದ ಬಜೆಟ್​​ ಆಯ್ತು ಎಂಬುದು ಪ್ರತೀತಿ. ಬೌಗೆಟ್ ಅಂದರೆ ಸಣ್ಣ ಚರ್ಮದ ಚೀಲ ಎಂದು ಅರ್ಥ. ಪ್ರಾಚೀನ ಕಾಲದಲ್ಲಿ ಜನ ಚರ್ಮದ ಚೀಲದಲ್ಲಿ ದಾಖಲೆ, ಹಣ ಇಟ್ಟುಕೊಳ್ಳುತ್ತಿದ್ದರು. ಹೀಗಾಗಿ ಇದು ಬಹಳ ಉಪಯುಕ್ತ ಎಂದು ಪರಿಗಣಿಸಲಾಗಿತ್ತು. ಬ್ರಿಟನ್ ಸರ್ಕಾರದ ಅವಧಿಯಲ್ಲಿ ದೇಶದ ಲೆಕ್ಕಪತ್ರ ಮಂಡಿಸುವಾಗ ಆಗಿನ ಹಣಕಾಸು ಸಚಿವರು ತಮ್ಮ ಎಲ್ಲಾ ದಾಖಲೆ ಪತ್ರಗಳನ್ನ ಸಂಸತ್​​ಗೆ ಸಣ್ಣ ಚರ್ಮದ ಚೀಲದಲ್ಲಿಯೇ ತರುತ್ತಿದ್ದರು. ಈ ಚೀಲವನ್ನು ಬೌಗೆಟ್ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಜನ ಸರ್ಕಾರದ ಲೆಕ್ಕಪತ್ರ ವಿಚಾರಕ್ಕೆ ಸಣ್ಣ ಚರ್ಮದ ಚೀಲ ಅಂದರೆ ಬೌಗೆಟ್​ ಎಂದು ಕರೆಯುತ್ತಿದ್ದರು. ಬಜೆಟ್ ಪದ ಹೀಗೆ ಹುಟ್ಟಿಕೊಂಡಿತು. ಈ ಕುರಿತ ಕಂಪ್ಲೀಟ್ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ.. ದೇಶದಲ್ಲಿ ಮೊದಲ ಬಜೆಟ್ ಮಂಡಿಸಿದ್ದು ಯಾವಾಗ? ‘ಬಜೆಟ್’​ ಎಂಬ ಪದ ಹುಟ್ಟಿಕೊಂಡ ಕತೆ ಗೊತ್ತಾ?



  • Feb 01, 2026 09:43 IST

    ಶ್ರೀಸಾಮಾನ್ಯರ ನಿರೀಕ್ಷೆಗಳು ಏನೇನು..?

    ನಿರೀಕ್ಷೆಗಳು ಏನೇನು..? 

    1. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 12 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸಬಹುದು. 
    2. ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಇಳಿಕೆ ಮಾಡಬಹುದು.
    3. ವಿವಾಹಿತ ದಂಪತಿಗಳಿಗೆ ಜಂಟಿ ತೆರಿಗೆ ವ್ಯವಸ್ಥೆ ಜಾರಿಗೊಳಿಸಬಹುದು. ಇದರಿಂದ ದಂಪತಿಗಳಿಗೆ ವಾರ್ಷಿಕ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗಲಿದೆ.
    4. ವಾರ್ಷಿಕ 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಬಹುದು.
    5. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ.5 ಕ್ಕೆ ಇಳಿಕೆ, ಎಲ್‌ಟಿಸಿಜಿ ಶೇ.0 ಕ್ಕೆ ಇಳಿಕೆ
    6. ಮ್ಯೂಚ್ಯುಯಲ್ ಫಂಡ್ ಗಳನ್ನು 5-7 ವರ್ಷದವರೆಗೆ ಹೊಂದಿದ್ದರೇ, ಯಾವುದೇ ತೆರಿಗೆ ಇಲ್ಲ
    7. ಎಚ್‌ಆರ್‌ಎ ಮಿತಿಯನ್ನು ಏರಿಕೆ ಮಾಡಬಹುದು.
    8. ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬಹುದು.
    9. ಈ ಭಾರಿಯ ಬಂಡವಾಳ ವೆಚ್ಚವನ್ನು ಶೇ.10 ರಷ್ಟು ಹೆಚ್ಚಳ ಮಾಡಿ 12 ಲಕ್ಷ ಕೋಟಿ ರೂ.ಗೆ ಏರಿಸಬಹುದು. ಇದರಿಂದ ಹೆದ್ದಾರಿ, ಬಂದರು, ರೈಲ್ವೇ ಸೇರಿ ಮೂಲಸೌಕರ್ಯ ನಿರ್ಮಾಣ
    10. ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.2 ಕ್ಕೆ ತಗ್ಗಿಸುವ ಗುರಿ ಹಾಕಿಕೊಳ್ಳಬಹುದು
    11. ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಎಲ್‌ಟಿಸಿಜಿ, ಎಸ್‌ಟಿಸಿಜಿ ಇಳಿಕೆ.
    12. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ ಸ್ಕೀಮ್ ಯೋಜನೆಯನ್ನು ಮತ್ತಷ್ಟು ಕ್ಷೇತ್ರಕ್ಕೆ, ಮತ್ತಷ್ಟು ವರ್ಷ ವಿಸ್ತರಿಸಬಹುದು.
    13. ಎಂಎಸ್‌ಎಂಇ ಸಾಲ ಸೌಲಭ್ಯವನ್ನು ಹೆಚ್ಚಳ ಮಾಡಬಹುದು
    14. ಹೆಲ್ತ್ ಕೇರ್ ವಲಯದಲ್ಲಿ ಇನ್ಸೂರೆನ್ಸ್ ಸರಳೀಕರಣ ಸೇರಿ ಕೆಲ ಸೌಲಭ್ಯ, ಸುಧಾರಣೆ ಘೋಷಣೆ ನಿರೀಕ್ಷೆ
    15. ಸದ್ಯ ಬೆಳ್ಳಿ ಮೇಲೆ ಶೇ.7.5 ರಷ್ಟು ಕಸ್ಟಮ್ಸ್ ಡ್ಯೂಟಿ ಮತ್ತು ಶೇ.3 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇವೆರಡನ್ನೂ ಕಡಿಮೆ ಮಾಡಿದ್ರೆ ದೇಶದಲ್ಲಿ ಬೆಳ್ಳಿ ಬೆಲೆ ಅಗ್ಗವಾಗಲಿದೆ.
    16. ಇದೇ ರೀತಿ ಚಿನ್ನದ ಮೇಲಿನ ಕಸ್ಟಮ್ಸ್ ಡ್ಯೂಟಿ ಕಡಿಮೆ ಮಾಡಿದ್ರೆ ಚಿನ್ನದ ಬೆಲೆಯೂ ಅಗ್ಗ!
    17. ದೇಶದಲ್ಲಿ ಹೆದ್ದಾರಿ, ಏರ್ ಪೋರ್ಟ್ ಸಂಪರ್ಕ ಉತ್ತಮಪಡಿಸಲು ಹೆಚ್ಚಿನ ಹಣ ಹಂಚಿಕೆ ನಿರೀಕ್ಷೆ
    18. ಜನರ ಮನೆ ಕನಸು ನನಸಾಗಿಸಲು ಅಫರ್ಡಬಲ್ ಹೌಸಿಂಗ್‌ಗೆ ಹೆಚ್ಚಿನ ಒತ್ತು ನಿರೀಕ್ಷೆ.
    19. ಅಫರ್ಡಬಲ್ ಹೌಸಿಂಗ್ ವೆಚ್ಚವನ್ನು 45 ಲಕ್ಷದಿಂದ 60 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆ
    20. ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ
    21. ಅಪರೇಷನ್ ಸಿಂಧೂರ್ ಹಿನ್ನಲೆಯಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚಿನ ಹಣ ಹಂಚಿಕೆ, ಸೇನೆಯ ಅಪ್ ಗ್ರೇಡ್‌ಗೆ ಆದ್ಯತೆೆ, ಹೊಸ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ಹಣ ನೀಡಿಕೆ
    22. ವಂದೇಭಾರತ್ ರೈಲುಗಳಿಗೆ ಹೆಚ್ಚಿನ ಹಣ ಹಂಚಿಕೆ, ರೈಲ್ವೇ ಸುರಕ್ಷತೆ, ರೈಲ್ವೇ ಆಧುನೀಕರಣಕ್ಕೆ ಒತ್ತು ನಿರೀಕ್ಷೆ
    23. ಕೃಷಿ ಸಮ್ಮಾನ್ ನಿಧಿಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ ನೀಡುವುದನ್ನು 2 ಸಾವಿರದಿಂದ 3 ಸಾವಿರಕ್ಕೆ ಏರಿಕೆ ನಿರೀಕ್ಷೆ
    24. ವಿಬಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರಗಳು ಶೇ.40 ರಷ್ಟು ಹಣ ನೀಡಬೇಕಿರುವುದರಿಂದ ಕೇಂದ್ರದಿಂದ ಕಡಿಮೆ ವೆಚ್ಚ
    25. ಎಐ, ಕೌಶಲ್ಯಾಭಿವೃದ್ದಿ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು
    26.  ಭಾರತದ ಬ್ಯಾಂಕ್ ಗಳನ್ನು ಜಾಗತಿಕ ಬ್ಯಾಂಕ್ ಗಳಾಗಿ  ರೂಪಿಸಲು ಪ್ಲ್ಯಾನ್ ಘೋಷಣೆಯ ನೀರೀಕ್ಷೆ



  • Feb 01, 2026 09:42 IST

    ಕರ್ನಾಟಕದ ನಿರೀಕ್ಷೆಗಳು

    ಕರ್ನಾಟಕದ ನಿರೀಕ್ಷೆಗಳು

    • 2023ರ ಬಜೆಟ್ ನಲ್ಲಿ ಘೋಷಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ 5,400 ಕೋಟಿ ರೂ. ಹಣ ನೀಡುವ ನಿರೀಕ್ಷೆ
    • ಕರ್ನಾಟಕದಲ್ಲಿ ಹಾಲಿ ಜಾರಿಯಲ್ಲಿರುವ 9 ರೈಲ್ವೇ ಯೋಜನೆಗಳಿಗೆ ಹೆಚ್ಚಿನ ಹಣ ಹಂಚಿಕೆ
    • ಬೆಂಗಳೂರು ಮೆಟ್ರೋ, ಸಬ್ ಆರ್ಬನ್ ರೈಲು ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ನಿರೀಕ್ಷೆ
    • ಕರ್ನಾಟಕದಲ್ಲಿರುವ ಕೇಂದ್ರೀಯ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್ಸಿ,  ಐಐಐಟಿ ಗೆ ಹೆಚ್ಚಿನ ಹಣ ಹಂಚಿಕೆ 
    • ಉತ್ತರ ಕರ್ನಾಟಕ ಭಾಗಕ್ಕೆ ಏಮ್ಸ್ ಆಸ್ಪತ್ರೆ ಮಂಜೂರು ನಿರೀಕ್ಷೆ



  • Feb 01, 2026 09:41 IST

    ವಿವಾಹಿತ ದಂಪತಿಗೆ ಜಂಟಿ ತೆರಿಗೆ ಪದ್ದತಿ?

    ಈ ಏರಿಕೆ ಆಧಾರದಲ್ಲಿ, ಆದಾಯ ತೆರಿಗೆ ಕಟ್ಟುವವರಿಗೆ ಈಗಿರುವ 12.75 ಲಕ್ಷ ರೂಪಾಯಿಗೆ ಬದಲಿಗೆ 13 ಲಕ್ಷ ರೂಪಾಯಿವರೆಗೂ ತೆರಿಗೆ ಇರೋದಿಲ್ಲ. ಜೊತೆಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್​ ಮೇಲಿರುವ ತೆರಿಗೆಯನ್ನ ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಕೂಡ ಇದೆ. ಇದಲ್ಲದೆ ಮುಖ್ಯವಾಗಿ ಈ ಬಾರಿ ವಿವಾಹಿತ ದಂಪತಿಗೆ ಜಂಟಿ ತೆರಿಗೆ ಪದ್ದತಿಯನ್ನ ಜಾರಿಗೆ ತರ್ತಾರೆ ಅಂತ ಹೇಳಲಾಗ್ತಿದೆ.

    ಇದು ಕೂಡ ಬಜೆಟ್​​ನಲ್ಲಿ ಮಂಡನೆಯಾದ್ರೆ, ದಂಪತಿಗೆ ಒಟ್ಟಾರೆಯಾಗಿ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗುತ್ತೆ. ಹಾಗೇ ಮ್ಯೂಚುವಲ್ ಫಂಡ್​ಗಳ ಮೇಲೇ ಹೂಡಿಕೆ ಮಾಡಿ, 5 ರಿಂದ 7 ವರ್ಷಗಳ ವರೆಗೆ ಅವುಗಳನ್ನ ಹೊಂದಿದ್ರೆ, ಅದ್ರ ಮೇಲೂ ತೆರಿಗೆಯನ್ನ ರದ್ದು ಮಾಡಬಹುದು. ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನೂ 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.



  • Feb 01, 2026 09:41 IST

    ಜನರ ನಿರೀಕ್ಷೆಗಳು ಏನೇನು..?

    ರೇಲ್ವೆ, ಮೂಲ ಸೌಕರ್ಯ, ನಗರಾಭಿವೃದ್ಧಿ, ಉತ್ಪಾದನೆ, ರಕ್ಷಣಾ ವಲಯ, ಎಲೆಕ್ಟ್ರಾನಿಕ್ಸ್, ಎಂಎಸ್​ಎಂಇ, ಎಐ ಹಾಗೂ ಮರುಬಳಕೆಯ ಎನರ್ಜಿ ಸೆಕ್ಟರ್​ಗಳ ಮೇಲೆ ಗಮನ ಹರಿಸಲಾಗಿದೆ. ಇನ್ನು ಸಾಮಾನ್ಯ ಜನರ ನಿರೀಕ್ಷೆ ಇರೋದು ಇನ್​ಕಂ ಟ್ಯಾಕ್ಸ್ ಮೇಲೆ. ಈಗಾಗಲೇ ಇನ್​ಕಂ ಟ್ಯಾಕ್ಸ್​​ನಲ್ಲಿ ಸಾಕಷ್ಟು ಸುಧಾರಣೆಗಳನ್ನ ತರಲಾಗಿದೆ. ಆದ್ರೂ ಹೊಸ ರೆಜೀಮ್​ನಲ್ಲಿ ಈಗಿರುವ ಸ್ಟಾಂಡರ್ಡ್ ಡಿಡಕ್ಷನ್​ನ 75 ಸಾವಿರ ರೂಪಾಯಿಯನ್ನ 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುತ್ತೆ ಅನ್ನೋ ನಿರೀಕ್ಷೆ ಇದೆ. 



  • Feb 01, 2026 09:40 IST

    ನಿರ್ಮಲಾ ಸೀತಾರಾಮನ್ ಬರೋಬ್ಬರಿ 9ನೇ ಬಾರಿಗೆ ಬಜೆಟ್ ಮಂಡನೆ

    ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ತಮ್ಮ ಐತಿಹಾಸಿಕ 9ನೇ ಬಜೆಟ್​ನ ಮಂಡಿಸಲಿದ್ದಾರೆ. ಈ ಮೂಲಕ ಅತೀ ಹೆಚ್ಚು ಬಾರಿ ಅಂದ್ರೆ 10 ಬಾರಿ ಬಜೆಟ್ ಮಂಡಿಸಿರುವ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವ್ರ ದಾಖಲೆಗಿಂತ ಕೇವಲ ಒಂದು ಹೆಜ್ಜೆ ಮಾತ್ರ ಹಿಂದಿರ್ತಾರೆ. ಜೊತೆಗೆ 2024ರ ಮಧ್ಯಂತರ ಬಜೆಟ್​ ಕೂಡ ಸೇರಿದಂತೆ 2019ರಿಂದ ಬಜೆಟ್ ಮಂಡನೆ ಮಾಡ್ತಿರುವ ನಿರ್ಮಲಾ, ಸತತವಾಗಿ ಅತೀ ಹೆಚ್ಚಿನ ಸಂಖ್ಯೆಯ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆಯಲಿದ್ದಾರೆ.



  • Feb 01, 2026 09:40 IST

    ಮೋದಿ ಲೆಕ್ಕದ ಮೇಲೆ ಹೆಚ್ಚಿದ ಕುತೂಹಲ

    ಈ ಬಾರಿ ಬಜೆಟ್​ನಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಕೇಂದ್ರ ಬಜೆಟ್​ ಮಂಡನೆಗೂ ಮುನ್ನ 16ನೇ ಹಣಕಾಸು ಆಯೋಗದ ವರದಿಯನ್ನ ಸದನದ ಮುಂದೆ ಮಂಡಿಸಲಾಗುತ್ತಿದೆ. ಇದರಲ್ಲಿ ರಾಜ್ಯಗಳ ಪಾಲು ಏನು ಎನ್ನುವುದು ತಿಳಿದುಬರಲಿದೆ. ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲು ಕಡಿಮೆ ದೊರೆಯುತ್ತಿದೆ ಎಂದು ಆರೋಪ ಪದೇ ಪದೇ ಕೇಳಿಬರುತ್ತಿದೆ. ಹಾಗಾಗಿ ಈ ಹಣಕಾಸು ಆಯೋಗದ ವರದಿಲ್ಲಿ ಏನಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.



Nirmala Sitharaman union budget budget 2026 union budget 2026 expectations
Advertisment