ದೇಶದಲ್ಲಿ ಮೊದಲ ಬಜೆಟ್ ಮಂಡಿಸಿದ್ದು ಯಾವಾಗ? ‘ಬಜೆಟ್’​ ಎಂಬ ಪದ ಹುಟ್ಟಿಕೊಂಡ ಕತೆ ಗೊತ್ತಾ?

ದೇಶದ 2026-27ನೇ ಸಾಲಿನ ಸಾಮಾನ್ಯ ಬಜೆಟ್​ ಅನ್ನು ಇಂದು ಮಂಡಿಸಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅಲ್ಲದೇ ಅತಿ ಹೆಚ್ಚಿನ ಅವಧಿಗೆ ಹಣಕಾಸು ಖಾತೆ ನಿರ್ವಹಿಸಿದ ಹೆಗ್ಗಳಿಕೆಗೂ ನಿರ್ಮಲಾ ಸೀತಾರಾಮನ್ ಭಾಜನರಾಗಲಿದ್ದಾರೆ.

author-image
Ganesh Kerekuli
Union Budget 2026 (1)
Advertisment

ದೇಶದ 2026-27ನೇ ಸಾಲಿನ ಸಾಮಾನ್ಯ ಬಜೆಟ್​ ಅನ್ನು ಇಂದು ಮಂಡಿಸಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅಲ್ಲದೇ ಅತಿ ಹೆಚ್ಚಿನ ಅವಧಿಗೆ ಹಣಕಾಸು ಖಾತೆ ನಿರ್ವಹಿಸಿದ ಹೆಗ್ಗಳಿಕೆಗೂ ನಿರ್ಮಲಾ ಸೀತಾರಾಮನ್ ಭಾಜನರಾಗಲಿದ್ದಾರೆ. ಅಲ್ಲದೇ ಭಾನುವಾರ ಬಜೆಟ್ ಮಂಡಿಸುವ ಮೂಲಕ ಸಂಪ್ರದಾಯ ಮುರಿಯಲಿದ್ದಾರೆ.

ಭಾರತದ ಮೊದಲ ಬಜೆಟ್​

ಸ್ವಾಂತ್ರ್ಯ ನಂತರ ದೇಶದಲ್ಲಿ 73 ಸಾಮಾನ್ಯ ಬಜೆಟ್​ಗಳು ಮತ್ತು 14 ಮಧ್ಯಂತರ ಬಜೆಟ್ ಮಂಡಿಸಲಾಗಿದೆ. ಅಲ್ಲದೆ 4 ವಿಶೇಷ ಅಥವಾ ಮಿನಿ ಬಜೆಟ್​ ಮಂಡನೆಯಾಗಿದೆ.

ಹಾಗೆ ಭಾರತದ ಮೊದಲ ಬಜೆಟ್​ ಮಂಡಿಸಿದ್ದು ಸ್ವಾತಂತ್ರ್ಯ ನಂತರ ಅಲ್ಲ. ಈ ಬಜೆಟ್ ಮೂಲ ಬ್ರಿಟಿಷ್ ಆಳ್ವಿಕೆಯ ಹಿಂದಿನದು. ಬ್ರಿಟಿಷ್ ಭಾರತದಲ್ಲಿ ಮೊದಲು ಬಜೆಟ್ ಮಂಡಿಸಿದ್ದು ಯಾರು? ಬಜೆಟ್ ಪದದ ಮೂಲ ತಿಳಿಯೋಣ.

ಇದನ್ನೂ ಓದಿ: Union Budget: ಇವತ್ತು ಕೇಂದ್ರದ ಬಜೆಟ್ ಮಂಡನೆ.. ಜನ ಸಾಮಾನ್ಯರ ನಿರೀಕ್ಷೆಗಳೇನು..?

Union Budget 2026 (2)

ಭಾರತದ ಮೊದಲ ಬಜೆಟ್ ಬ್ರಿಟಿಷ್ ಆಳ್ವಿಕೆಯಲ್ಲಿ ಮಂಡಿಸಲಾಗಿತ್ತು. 1860ರ ಏಪ್ರಿಲ್ 7ರಂದು ಬ್ರಿಟಿಷ್ ಸರ್ಕಾರದ ಹಣಕಾಸು ಸಚಿವ ಜೇಮ್ಸ್​ ವಿಲ್ಸನ್ ಮೊದಲ ಮಂಡಿಸಿದ್ದರು. ಜೇಮ್ಸ್​ ವಿಲ್ಸನ್ ಸ್ಕಾಟಿಷ್​ನ ಅರ್ಥಶಾಸ್ತ್ರಜ್ಞರಾಗಿದ್ರು. ಬ್ರಿಟಿಷ್ ಭಾರತದಲ್ಲಿ ಆರ್ಥಿಕ ವ್ಯವಸ್ಥೆ ಸುಗಮಗೊಳಿಸುವುದಕ್ಕಾಗಿ ಈ ಬಜೆಟ್ ಮಂಡಿಸಲಾಗಿತ್ತು. 

ಸ್ವಾತಂತ್ರ್ಯ ನಂತರದ ಮೊದಲ ಸಾಮಾನ್ಯ ಬಜೆಟ್​ 1947ರ ನ.26ರಂದು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ.ಷಣ್ಮುಖನ್ ಸಂಸತ್​ನಲ್ಲಿ ಮಂಡಿಸಿದ್ದರು. ಆ ಬಳಿಕ ಮೊದಲ ವಾರ್ಷಿಕ ಬಜೆಟ್​ 1948ರ ಫೆ.28ರಂದು ಮಂಡಿಸಲಾಗಿತ್ತು.

ಸ್ವಾತಂತ್ರ್ಯ ಬಳಿಕ ಬಜೆಟ್ ಮಂಡಿಸುವ ದಿನಾಂಕ, ಸಮಯವನ್ನ ನಿಗದಿಪಡಿಸಲಾಗಿತ್ತು. 1999ರರವರೆಗೆ ಫೆಬ್ರವರಿ ತಿಂಗಳ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಈ ಸಂಪ್ರದಾಯವು ಬ್ರಿಟಿಷರಿದ್ದಾಗಿನಿಂದಲೂ ಬಂದಿತ್ತು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಗಿನ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಬಜೆಟ್ ಸಮಯವನ್ನ ಸಂಜೆಯ ಬದಲು ಬೆಳಗ್ಗೆ 11 ಗಂಟೆಗೆ ಬದಲಾಯಿಸಿದ್ದರು. ಅಂದಿನಿಂದ ಬಜೆಟ್​​ ಅನ್ನು ಬೆಳಗ್ಗೆ ಮಂಡಿಸಲಾಗುತ್ತಿದೆ.

ಬಜೆಟ್​ ಭಾಷಣದ ಸಮಯವೂ ದಾಖಲೆಯ ವಿಷಯವಾಗಿದೆ. ಪದಗಳಲ್ಲಿ ಅತಿ ಉದ್ದದ ಬಜೆಟ್ ಭಾಷಣ ಮಂಡಿಸಿದ್ದು ಡಾ.ಮನಮೋಃನ್ ಸಿಂಗ್. 1991ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್  18,604 ಪದಗಳ ಬಜೆಟ್ ಮಂಡಿಸಿದ್ದರು. 

ಇದನ್ನೂ ಓದಿ: Union Budget -2026: ಕರ್ನಾಟಕದ ಐದು ದೊಡ್ಡ ನಿರೀಕ್ಷೆಗಳು..!

central budgeT Nirmala seetharaman

ಸಮಯದ ವಿಷಯದಲ್ಲಿ ಅತಿ ಉದ್ದದ ಬಜೆಟ್ ಮಂಡಿಸಿದ್ದು ನಿರ್ಮಲಾ ಸೀತಾರಾಮನ್. 2020-21ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2 ಗಂಟೆ 42 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದು ದಾಖಲೆ. ಅತಿ ಕಡಿಮೆ ಅವಧಿಯ ಬಜೆಟ್ ಮಂಡಿಸಿದ್ದು 1977ರಲ್ಲಿ. ಆಗಿನ ಹಣಕಾಸು ಸಚಿವ ಹೀರೂಭಾಯಿ ಮುಲ್ಜಿಭಾಯ್ ಪಟೇಲ್ ಕೇವಲ 800 ಪದಗಳಲ್ಲಿ ಬಜೆಟ್ ಮಂಡಿಸಿದ್ದರು.

ಬಜೆಟ್​ ಪದ ಬಂದಿದ್ದು ಹೇಗೆ?

ಬಜೆಟ್ ಎಂಬ ಪದದ ಮೂಲ ಫ್ರೆಂಚ್. ‘ಬೌಗೆಟ್​​’ನಿಂದ ಬಜೆಟ್​​ ಆಯ್ತು ಎಂಬುದು ಪ್ರತೀತಿ. ಬೌಗೆಟ್ ಅಂದರೆ ಸಣ್ಣ ಚರ್ಮದ ಚೀಲ ಎಂದು ಅರ್ಥ. ಪ್ರಾಚೀನ ಕಾಲದಲ್ಲಿ ಜನ ಚರ್ಮದ ಚೀಲದಲ್ಲಿ ದಾಖಲೆ, ಹಣ ಇಟ್ಟುಕೊಳ್ಳುತ್ತಿದ್ದರು. ಹೀಗಾಗಿ ಇದು ಬಹಳ ಉಪಯುಕ್ತ ಎಂದು ಪರಿಗಣಿಸಲಾಗಿತ್ತು. ಬ್ರಿಟನ್ ಸರ್ಕಾರದ ಅವಧಿಯಲ್ಲಿ ದೇಶದ ಲೆಕ್ಕಪತ್ರ ಮಂಡಿಸುವಾಗ ಆಗಿನ ಹಣಕಾಸು ಸಚಿವರು ತಮ್ಮ ಎಲ್ಲಾ ದಾಖಲೆ ಪತ್ರಗಳನ್ನ ಸಂಸತ್​​ಗೆ ಸಣ್ಣ ಚರ್ಮದ ಚೀಲದಲ್ಲಿಯೇ ತರುತ್ತಿದ್ದರು. ಈ ಚೀಲವನ್ನು ಬೌಗೆಟ್ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಜನ ಸರ್ಕಾರದ ಲೆಕ್ಕಪತ್ರ ವಿಚಾರಕ್ಕೆ ಸಣ್ಣ ಚರ್ಮದ ಚೀಲ ಅಂದರೆ ಬೌಗೆಟ್​ ಎಂದು ಕರೆಯುತ್ತಿದ್ದರು. ಬಜೆಟ್ ಪದ ಹೀಗೆ ಹುಟ್ಟಿಕೊಂಡಿತು.

ವಿಶೇಷ ವರದಿ:ವಿಶ್ವನಾಥ್ ಜಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

union budget budget 2026 union budget 2026 expectations
Advertisment