Union Budget -2026: ಕರ್ನಾಟಕದ ಐದು ದೊಡ್ಡ ನಿರೀಕ್ಷೆಗಳು..!

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ತಮ್ಮ ಐತಿಹಾಸಿಕ 9ನೇ ಬಜೆಟ್​ನ ಮಂಡಿಸಲಿದ್ದಾರೆ. ಈ ಮೂಲಕ ಅತೀ ಹೆಚ್ಚು ಬಾರಿ ಅಂದ್ರೆ 10 ಬಾರಿ ಬಜೆಟ್ ಮಂಡಿಸಿರುವ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವ್ರ ದಾಖಲೆಗಿಂತ ಕೇವಲ ಒಂದು ಹೆಜ್ಜೆ ಮಾತ್ರ ಹಿಂದಿರ್ತಾರೆ.

author-image
Ganesh Kerekuli
Union Budget 2026
Advertisment

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ತಮ್ಮ ಐತಿಹಾಸಿಕ 9ನೇ ಬಜೆಟ್​ನ ಮಂಡಿಸಲಿದ್ದಾರೆ. ಈ ಮೂಲಕ ಅತೀ ಹೆಚ್ಚು ಬಾರಿ ಅಂದ್ರೆ 10 ಬಾರಿ ಬಜೆಟ್ ಮಂಡಿಸಿರುವ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವ್ರ ದಾಖಲೆಗಿಂತ ಕೇವಲ ಒಂದು ಹೆಜ್ಜೆ ಮಾತ್ರ ಹಿಂದಿರ್ತಾರೆ.

ಜೊತೆಗೆ 2024ರ ಮಧ್ಯಂತರ ಬಜೆಟ್​ ಕೂಡ ಸೇರಿದಂತೆ 2019ರಿಂದ ಬಜೆಟ್ ಮಂಡನೆ ಮಾಡ್ತಿರುವ ನಿರ್ಮಲಾ, ಸತತವಾಗಿ ಅತೀ ಹೆಚ್ಚಿನ ಸಂಖ್ಯೆಯ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆಯಲಿದ್ದಾರೆ. ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳು ಹೆಚ್ಚಾಗಿದೆ. 

ಕರ್ನಾಟಕದ ನಿರೀಕ್ಷೆಗಳು

  • 2023ರ ಬಜೆಟ್ ನಲ್ಲಿ ಘೋಷಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ 5,400 ಕೋಟಿ ರೂ. ಹಣ ನೀಡುವ ನಿರೀಕ್ಷೆ
  • ಕರ್ನಾಟಕದಲ್ಲಿ ಹಾಲಿ ಜಾರಿಯಲ್ಲಿರುವ 9 ರೈಲ್ವೇ ಯೋಜನೆಗಳಿಗೆ ಹೆಚ್ಚಿನ ಹಣ ಹಂಚಿಕೆ
  • ಬೆಂಗಳೂರು ಮೆಟ್ರೋ, ಸಬ್ ಆರ್ಬನ್ ರೈಲು ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ನಿರೀಕ್ಷೆ
  • ಕರ್ನಾಟಕದಲ್ಲಿರುವ ಕೇಂದ್ರೀಯ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್ಸಿ,  ಐಐಐಟಿ ಗೆ ಹೆಚ್ಚಿನ ಹಣ ಹಂಚಿಕೆ 
  • ಉತ್ತರ ಕರ್ನಾಟಕ ಭಾಗಕ್ಕೆ ಏಮ್ಸ್ ಆಸ್ಪತ್ರೆ ಮಂಜೂರು ನಿರೀಕ್ಷೆ

ರೇಲ್ವೆ, ಮೂಲ ಸೌಕರ್ಯ, ನಗರಾಭಿವೃದ್ಧಿ, ಉತ್ಪಾದನೆ, ರಕ್ಷಣಾ ವಲಯ, ಎಲೆಕ್ಟ್ರಾನಿಕ್ಸ್, ಎಂಎಸ್​ಎಂಇ, ಎಐ ಹಾಗೂ ಮರುಬಳಕೆಯ ಎನರ್ಜಿ ಸೆಕ್ಟರ್​ಗಳ ಮೇಲೆ ಗಮನ ಹರಿಸಲಾಗಿದೆ. ಇನ್ನು ಸಾಮಾನ್ಯ ಜನರ ನಿರೀಕ್ಷೆ ಇರೋದು ಇನ್​ಕಂ ಟ್ಯಾಕ್ಸ್ ಮೇಲೆ. ಈಗಾಗಲೇ ಇನ್​ಕಂ ಟ್ಯಾಕ್ಸ್​​ನಲ್ಲಿ ಸಾಕಷ್ಟು ಸುಧಾರಣೆಗಳನ್ನ ತರಲಾಗಿದೆ. ಆದ್ರೂ ಹೊಸ ರೆಜೀಮ್​ನಲ್ಲಿ ಈಗಿರುವ ಸ್ಟಾಂಡರ್ಡ್ ಡಿಡಕ್ಷನ್​ನ 75 ಸಾವಿರ ರೂಪಾಯಿಯನ್ನ 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುತ್ತೆ ಅನ್ನೋ ನಿರೀಕ್ಷೆ ಇದೆ.

ಇದನ್ನೂ ಓದಿ: Union Budget: ಇವತ್ತು ಕೇಂದ್ರದ ಬಜೆಟ್ ಮಂಡನೆ.. ಜನ ಸಾಮಾನ್ಯರ ನಿರೀಕ್ಷೆಗಳೇನು..?

ಈ ಏರಿಕೆ ಆದಲ್ಲಿ, ಆದಾಯ ತೆರಿಗೆ ಕಟ್ಟುವವರಿಗೆ ಈಗಿರುವ 12.75 ಲಕ್ಷ ರೂಪಾಯಿಗೆ ಬದಲಿಗೆ 13 ಲಕ್ಷ ರೂಪಾಯಿವರೆಗೂ ತೆರಿಗೆ ಇರೋದಿಲ್ಲ. ಜೊತೆಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್​ ಮೇಲಿರುವ ತೆರಿಗೆಯನ್ನ ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಕೂಡ ಇದೆ. ಇದಲ್ಲದೆ ಮುಖ್ಯವಾಗಿ ಈ ಬಾರಿ ವಿವಾಹಿತ ದಂಪತಿಗೆ ಜಂಟಿ ತೆರಿಗೆ ಪದ್ದತಿಯನ್ನ ಜಾರಿಗೆ ತರ್ತಾರೆ ಅಂತ ಹೇಳಲಾಗ್ತಿದೆ. ಇದು ಕೂಡ ಬಜೆಟ್​​ನಲ್ಲಿ ಮಂಡನೆಯಾದ್ರೆ, ದಂಪತಿಗೆ ಒಟ್ಟಾರೆಯಾಗಿ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗುತ್ತೆ. ಹಾಗೇ ಮ್ಯೂಚುವಲ್ ಫಂಡ್​ಗಳ ಮೇಲೇ ಹೂಡಿಕೆ ಮಾಡಿ, 5 ರಿಂದ 7 ವರ್ಷಗಳ ವರೆಗೆ ಅವುಗಳನ್ನ ಹೊಂದಿದ್ರೆ, ಅದ್ರ ಮೇಲೂ ತೆರಿಗೆಯನ್ನ ರದ್ದು ಮಾಡಬಹುದು. ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನೂ 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ:ಸದ್ದಿಲ್ಲದೇ ಎಂಗೇಜ್ ಆದ ಸಂಜನಾ.. ಹುಡುಗ ಯಾರು ಗೊತ್ತೇ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nirmala Sitharaman union budget budget 2026 union budget 2026 expectations
Advertisment