/newsfirstlive-kannada/media/media_files/2025/08/25/up_woman-3-2025-08-25-07-35-32.jpg)
ಲಕ್ನೋ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಹೆಂಡತಿಗೆ ಬೆಂಕಿ ಹಚ್ಚಿ ಜೀವ ತೆಗೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಪಿನ್ ಸಹೋದರರು ಭಾರೀ ಮೊತ್ತದಲ್ಲೇ ವರದಕ್ಷಿಣೆ ಪಡೆದಿರುವುದು ತಿಳಿದು ಬಂದಿದೆ.
ಆರೋಪಿ ವಿಪಿನ್ ತನ್ನ ಪತ್ನಿ ನಿಕ್ಕಿಗೆ ಬೆಂಕಿ ಹಚ್ಚಿ ಪ್ರಾಣ ತೆಗೆದಿದ್ದಾರೆ. ಇದಕ್ಕೆ ರೋಹಿತ್ (ಮಾವ), ದಯಾ (ಅತ್ತೆ) ಮತ್ತು ಸತ್ವೀರ್ (ಸೋದರ ಮಾವ) ಸಾಥ್ ನೀಡಿದ್ದರು. ಸದ್ಯ ಪೊಲೀಸರು ವಿಪಿನ್ ಅನ್ನು ಅರೆಸ್ಟ್ ಮಾಡಿದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ. ಇನ್ನು ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರಿಂದ ಹುಡುಕಾಟ ನಡೆದಿದೆ.
ವರದಕ್ಷಿಣೆಯಾಗಿ ಏನೇನು ಕೊಟ್ಟಿದ್ದೇವು ಎನ್ನುವುದರ ಬಗ್ಗೆ ನಿಕ್ಕಿಯ ಸಹೋದರಿ ಕಾಂಚಾಣ ಮಾತನಾಡಿ, ನಾವಿಬ್ಬರು ನಿಕ್ಕಿ, ರೋಹಿತ್ನನ್ನ 2016ರಲ್ಲಿ ಮದುವೆ ಆದೇವು. ಮದುವೆಯಲ್ಲಿ ವರದಕ್ಷಿಣೆಯಾಗಿ ಟಾಪ್ ಮಾಡೆಲ್ ಎಸ್ಯುವಿ ಕಾರು, ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್, ದೊಡ್ಡ ಮೊತ್ತದ ನಗದು ಹಾಗೂ ಚಿನ್ನಾಭರಣಗಳು ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ನೀಡಲಾಗಿತ್ತು. ಇಷ್ಟೇ ಅಲ್ಲದೇ ನಮ್ಮ ತವರಿನಿಂದ ಸಾಕಷ್ಟು ಗಿಫ್ಟ್ಗಳನ್ನು ಹಬ್ಬಕ್ಕೆ, ಸಮಾರಂಭಗಳಿಗೆ ಕಳುಹಿಸುತ್ತಿದ್ದರು ಎಂದು ಹೇಳಿದ್ದಾರೆ.
ಇಷ್ಟೆಲ್ಲಾ ಕೊಟ್ಟರೂ ಇನ್ನು ಬೇಕು ಎಂದು ಕೇಳುತ್ತಿದ್ದರು. ನಮ್ಮ ಮನೆಯಿಂದ ಬಟ್ಟೆಗಳನ್ನು ಕೊಟ್ಟರೇ ಕೇವಲ 2 ರೂಪಾಯಿದು ಎಂದು ಹೀಯಾಳಿಸುತ್ತಿದ್ದರು. ಅವರ ಆಸೆಗೆ ಮಿತಿನೇ ಇರಲಿಲ್ಲ. ಈಗ ಬರೋಬ್ಬರಿ 36 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದರು. ಹೇಗಾದರೂ ಮಾಡಿ ಹಣ ತರಿಸಿ ಎಂದು ಇಬ್ಬರಿಗೂ ಹೊಡೆಯುತ್ತಿದ್ದರು. ಇದರ ಬದಲಿಗೆ ಕಾರು ನೀಡಲಾಗಿತ್ತು. ಆದರೂ ಅವರಲ್ಲಿ ಸಂತಸನೇ ಇರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿಯವ್ರು ಎಲ್ಲ ಟೀಕೆ ಮಾಡ್ತಾರೆ, ಪಾಕಿಸ್ತಾನಕ್ಕೆ ಕೇಕ್ ತಿನ್ನಲು ಯಾಕೆ ಹೋಗಿದ್ರಿ?; ಸಂತೋಷ್ ಲಾಡ್
ವಿಪಿನ್ ಹಾಗೂ ರೋಹಿತ್ ರಾತ್ರಿ ಜಾಸ್ತಿ ಸಮಯ ಆದರೂ ಮನೆಗೆ ಬರುತ್ತಿರಲಿಲ್ಲ. ಈ ಬಗ್ಗೆ ನಾವು ಕೇಳುವಂತಿರಲಿಲ್ಲ. ಅವರಿಗೆ ಬೇರೆ ಮಹಿಳೆಯರ ಜೊತೆ ಸಂಬಂಧ ಇದ್ದವು. ಈ ಬಗ್ಗೆ ಒಮ್ಮೆ ನಾನು ಕೇಳಿದ್ದಕ್ಕೆ ಮನೆಯಲ್ಲಿ ಹಾಕಿ ಚೆನ್ನಾಗಿ ಹೊಡೆದಿದ್ದರು. ನಾನುಮ ತಂಗಿ ಎಷ್ಟೋ ರಾತ್ರಿ ಕಣ್ಣೀರಲ್ಲೇ ಮಲಗಿದ್ದೇವೆ. ನನ್ನ ತಂಗಿ ಈಗ ಜೀವಂತವಾಗಿಲ್ಲ. ನನಗಿಂತ 2-3 ವರ್ಷ ಚಿಕ್ಕವಳು ಆಗಿದ್ದರೂ ನಮ್ಮನ್ನು ನೋಡಿ ಎಲ್ಲರೂ ಅವಳಿ ಮಕ್ಕಳು ಎನ್ನುತ್ತಿದ್ದರು ಎಂದು ಕಾಂಚಾಣ ಕಣ್ಣೀರು ಹಾಕಿದ್ದಾಳೆ.
ನಿಕ್ಕಿ ಮೇಕಪ್ ಸ್ಟುಡಿಯೋ ನಡೆಸುತ್ತಿದ್ದರು. ಆದರೆ ಇದು ಅತ್ತೆ ಇಷ್ಟ ಇರಲಿಲ್ಲ. ಆದರೆ ಇಲ್ಲಿ ಬಂದಂತಹ ಎಲ್ಲ ಹಣವನ್ನು ದೌರ್ಜನ್ಯದಿಂದ ಅವರೇ ತೆಗೆದುಕೊಳ್ಳುತ್ತಿದ್ದರು. ನಾನು ವಿಡಿಯೋ ಮಾಡದಿದ್ದರೇ ನಮಗೆ ನ್ಯಾಯ ಸಿಗುತ್ತಿರಲಿಲ್ಲ. ಅವಳಿಗೆ ಬೆಂಕಿ ಹಚ್ಚಿದಾಗ ನಾನು ನೀರು ಹಾಕಿದೆ, ಆದ್ರೆ ಉಳಿಸಿಕೊಳ್ಳಲು ಆಗಲಿಲ್ಲ. ಈ ವೇಳೆ ಮೂರ್ಛೆ ಹೋಗಿ ನಾನು ಬಿದ್ದಿದ್ದೇ ಎಂದು ದುಃಖಿಸುತ್ತ ಕಾಂಚಾಣ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ