6 ವರ್ಷದಲ್ಲಿ 3 ಮದ್ವೆ, ಲಕ್ಷಾಂತರ ವರದಕ್ಷಿಣೆ ಸ್ಕ್ಯಾಮ್: 4ನೇ ಮದ್ವೆಗೆ ತಯಾರಿ ನಡೆಸ್ತಿದ್ದ ‘ಗಂಡನ ಲೀಲೆ’ ಬಯಲಿಗೆಳೆದ ಪತ್ನಿಯರು..!

ಸಾಮಾನ್ಯವಾಗಿ ಮದುವೆ ವಂಚನೆ ಪ್ರಕರಣಗಳಲ್ಲಿ 'ವಧು ಓಡಿಹೋದಳು' ಅಥವಾ 'ಮದುವೆಗೆ ನಿರಾಕರಿಸಿದಳು' ಎಂಬ ಸುದ್ದಿಗಳನ್ನೇ ನಾವು ಹೆಚ್ಚು ಕೇಳಿರುತ್ತೇವೆ. ಆದರೆ, ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

author-image
Ganesh Kerekuli
Marriage Scam
Advertisment

ಸಾಮಾನ್ಯವಾಗಿ ಮದುವೆ ವಂಚನೆ ಪ್ರಕರಣಗಳಲ್ಲಿ ‘ವಧು ಓಡಿಹೋದಳು’ ಅಥವಾ ‘ಮದುವೆಗೆ ನಿರಾಕರಿಸಿದಳು’ ಎಂಬ ಸುದ್ದಿಗಳನ್ನೇ ನಾವು ಹೆಚ್ಚು ಕೇಳಿರುತ್ತೇವೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲೊಬ್ಬ ‘ಮಹಾಶಯ’ ಕೇವಲ 6 ವರ್ಷಗಳಲ್ಲಿ ಬರೋಬ್ಬರಿ 3 ಮದುವೆಯಾಗಿದ್ದು, ಇದೀಗ 4ನೇ ಮದುವೆಗೆ ಸಜ್ಜಾಗುತ್ತಿದ್ದಾನೆ!

ತಮ್ಮ ಗಂಡನ ಈ ಲೀಲೆಗಳನ್ನು ಬಯಲಿಗೆಳೆಯಲು ಆತನ ಮೂವರು ಪತ್ನಿಯರು ಒಂದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Marriage Scam (3)

ಯಾರು ಈ ಭೂಪ?

ಈ ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಕುಮಾರ್, ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯ ನಿವಾಸಿ. ಈತನ ತಂದೆ ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುನಿಲ್ ಕುಮಾರ್‌ಗೆ ಯಾವುದೇ ಸ್ಥಿರವಾದ ಉದ್ಯೋಗವಿಲ್ಲ. ಸುಳ್ಳು ಹೇಳಿ ಝಾನ್ಸಿ ಮತ್ತು ಲಲಿತ್‌ಪುರ ಭಾಗದ ಮೂವರು ಮಹಿಳೆಯರನ್ನು ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ವಿಶೇಷವೆಂದರೆ, ಒಬ್ಬರನ್ನು ಮದುವೆಯಾಗುವಾಗ ಹಿಂದಿನ ಮದುವೆಯ ವಿಷಯವನ್ನು ಮುಚ್ಚಿಡುತ್ತಿದ್ದ.

ಮೂವರು ಪತ್ನಿಯರ ಗೋಳು

ಆರೋಪಿ ಸುನಿಲ್ ಕುಮಾರ್, ಪ್ರತಿ ಮದುವೆಯ ಸಂದರ್ಭದಲ್ಲೂ ಲಕ್ಷಾಂತರ ರೂಪಾಯಿ ವರದಕ್ಷಿಣೆ ಮತ್ತು ಚಿನ್ನಾಭರಣಗಳನ್ನು ಪಡೆದಿದ್ದ. ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯರನ್ನು ಹಿಂಸಿಸಿ, ತವರು ಮನೆಗೆ ಅಟ್ಟುತ್ತಿದ್ದ. ಇದೀಗ ನೊಂದ ಮೂವರು ಪತ್ನಿಯರು ಒಟ್ಟಾಗಿ ಝಾನ್ಸಿ ಎಸ್‌ಎಸ್‌ಪಿ (SSP) ಕಚೇರಿಗೆ ಬಂದು ದೂರು ನೀಡಿದ್ದಾರೆ.

Marriage Scam (2)

ಮೊದಲ ಮದುವೆ (2019)

ಮೊದಲ ಪತ್ನಿ ನೀಡಿದ ದೂರಿನ ಪ್ರಕಾರ, 2019ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಆಕೆಯ ಕುಟುಂಬದವರು 5 ಲಕ್ಷ ನಗದು ಹಾಗೂ ಒಡವೆ ಸೇರಿ ಒಟ್ಟು 8 ಲಕ್ಷ ರೂ. ಖರ್ಚು ಮಾಡಿದ್ದರು. ಮದುವೆಯಾದ ಬಳಿಕ ಮತ್ತಷ್ಟು ವರದಕ್ಷಿಣೆ ತರುವಂತೆ ಪೀಡಿಸಲು ಶುರುಮಾಡಿದ ಸುನಿಲ್, ಆಕೆಯನ್ನು ತವರು ಮನೆಗೆ ಕಳುಹಿಸಿದ್ದಲ್ಲದೆ ಡಿವೋರ್ಸ್ ನೋಟಿಸ್ ನೀಡಿದ್ದ.

ಎರಡನೇ ಮದುವೆ (2021)

ಎರಡು ವರ್ಷಗಳ ನಂತರ, 2021ರಲ್ಲಿ ಸುನಿಲ್ ತಂದೆ ಆತನಿಗೆ ಮತ್ತೊಂದು ಮದುವೆ ಮಾಡಿಸಿದ್ದರು. ಎರಡನೇ ಪತ್ನಿಯ ಮನೆಯವರು ಕೂಡ ಸುಮಾರು 8 ಲಕ್ಷ ರೂ. ವರದಕ್ಷಿಣೆ ನೀಡಿದ್ದರು. ಆಕೆಗೆ ಸುನಿಲ್‌ನ ಮೊದಲ ಮದುವೆಯ ವಿಷಯ ತಿಳಿದಿರಲಿಲ್ಲ. ಕೆಲವೇ ತಿಂಗಳಲ್ಲಿ ಚಿನ್ನದ ಸರ ಮತ್ತು ಬುಲೆಟ್ ಬೈಕ್ (Bullet Bike) ಬೇಕೆಂದು ಹಲ್ಲೆ ಮಾಡಿ ಆಕೆಯನ್ನೂ ಮನೆಯಿಂದ ಹೊರಹಾಕಲಾಗಿತ್ತು.

ಇದನ್ನೂ ಓದಿ:ಕಪ್ ಗೆದ್ದ RCB ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ..?

Marriage Scam (1)

ಮೂರನೇ ಮದುವೆ (2023)

ಮೂರು ಮದುವೆಯಾದರೂ ಸುನಿಲ್ ಬುದ್ಧಿ ಕಲಿಯಲಿಲ್ಲ. 2023ರಲ್ಲಿ ಮೂರನೇ ಮದುವೆಯಾದ. ಇವರ ಬಳಿಯೂ 8 ಲಕ್ಷ ರೂ. ಹಾಗೂ ಒಡವೆಗಳನ್ನು ಕಿತ್ತುಕೊಂಡಿದ್ದ. ಈಕೆ ಗರ್ಭಿಣಿಯಾದಾಗ ದೈಹಿಕವಾಗಿ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದ. ಸದ್ಯ ಈಕೆಗೆ ಒಂದು ಹೆಣ್ಣು ಮಗುವಿದೆ.

ಪೊಲೀಸರ ಪ್ರತಿಕ್ರಿಯೆ

ತಮ್ಮ ಗಂಡನಿಂದ ಮೋಸ ಹೋದ ಮೂವರು ಪತ್ನಿಯರು ಒಂದಾಗಿ ಠಾಣೆಗೆ ಬಂದಿದ್ದು, "ನಮ್ಮ ಬಾಳು ಹಾಳು ಮಾಡಿದವನು ಈಗ 4ನೇ ಮದುವೆಗೆ ರೆಡಿಯಾಗುತ್ತಿದ್ದಾನೆ, ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿರುವ ಝಾನ್ಸಿಯ ಬಬಿನಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ಜೆ.ಪಿ. ಪಾಲ್ ಅವರು, ಮಹಿಳೆಯರ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೀಲ್ಸ್ ರಾಣಿಗೆ ಕಲಾಕಾರ ಕಮಲಾಕರ್ ರಾಜಾತಿಥ್ಯ; ಎರಡೆರಡು ಕಾರು, ಬುಲೆಟ್ ಬೈಕ್ ಗಿಫ್ಟ್..! Photos

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

marriage
Advertisment