/newsfirstlive-kannada/media/media_files/2026/02/06/kamalakar-bhat-case-2-2026-02-06-11-17-57.jpg)
ಶಿವಮೊಗ್ಗ: ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಗಳಿಬ್ಬರ ನಡುವಿನ ನಂಟಿನ ಬಗ್ಗೆ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಪ್ರಮುಖ ಆರೋಪಿ ಕಮಲಾಕರ್ ಭಟ್, ಸಹ ಆರೋಪಿ ಸುಚಿತ್ರಾಳಿಗೆ (ರೀಲ್ಸ್ ಆಂಟಿ) ಕಲ್ಪಿಸಿಕೊಟ್ಟಿದ್ದ ಐಷಾರಾಮಿ ಜೀವನದ ಬಗ್ಗೆ ಅಚ್ಚರಿಯ ಸಂಗತಿಗಳು ಬಯಲಿಗೆ ಬಂದಿವೆ.
ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವಿನ ಆರ್ಥಿಕ ವ್ಯವಹಾರ ಹಾಗೂ ಐಷಾರಾಮಿ ಮೋಜಿನ ಬದುಕಿನ ವಿವರಗಳು ಇಲ್ಲಿವೆ
/filters:format(webp)/newsfirstlive-kannada/media/media_files/2026/02/06/kamalakar-bhat-case-6-2026-02-06-11-18-42.jpg)
ರೀಲ್ಸ್ ಆಂಟಿಗೆ ಮೋಜಿನ ಬದುಕು
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಹೊಂದಿದ್ದ ಸುಚಿತ್ರಾಗೆ, ಕಮಲಾಕರ್ ಭಟ್ ಮೋಜಿನ ಬದುಕು ಕಟ್ಟಿಕೊಟ್ಟಿದ್ದ. ಆಕೆಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸುವ ಮೂಲಕ ಆಕೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ಕಪ್ ಗೆದ್ದ RCB ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ..?
/filters:format(webp)/newsfirstlive-kannada/media/media_files/2026/02/06/kamalakar-bhat-case-3-2026-02-06-11-19-00.jpg)
ಎರಡೆರಡು ಕಾರು, ರಾಯಲ್ ಎನ್‌ಫೀಲ್ಡ್ ಬೈಕ್ ಗಿಫ್ಟ್!
ಕಮಲಾಕರ್ ಭಟ್ ಸುಚಿತ್ರಾ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಿದ್ದ ಎಂದರೆ, ಆಕೆಗೆ ಬರೋಬ್ಬರಿ ಎರಡು ಐಷಾರಾಮಿ ಕಾರುಗಳನ್ನು ನೀಡಿದ್ದ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹೊಸ 'ಟಾಟಾ ಪಂಚ್' (Tata Punch) ಕಾರನ್ನು ಸುಚಿತ್ರಾಗೆ ಕೊಡಿಸಿದ್ದ. ಕಾರುಗಳು ಮಾತ್ರವಲ್ಲದೇ, ದುಬಾರಿ ಬೆಲೆಯ ರಾಯಲ್ ಎನ್‌ಫೀಲ್ಡ್ (Royal Enfield) ಬೈಕ್ ಅನ್ನು ಸಹ ಆಕೆಗೆ ನೀಡಿದ್ದ ಎಂದು ತಿಳಿದುಬಂದಿದೆ.
/filters:format(webp)/newsfirstlive-kannada/media/media_files/2026/02/06/kamalakar-bhat-case-5-2026-02-06-11-19-24.jpg)
ಕಾರಿನಲ್ಲೇ ರೀಲ್ಸ್ ದರ್ಬಾರ್
ಭಟ್ ಕೊಡಿಸಿದ್ದ ಕಾರುಗಳಲ್ಲಿ ಕುಳಿತು ಸುಚಿತ್ರಾ ರೀಲ್ಸ್ ಮಾಡುತ್ತಿದ್ದಳು. ಕಾರಿನ ಡ್ರೈವಿಂಗ್ ಸೀಟ್ ಅಥವಾ ಹಿಂಬದಿ ಸೀಟ್‌ನಲ್ಲಿ ಕುಳಿತು ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಳು. ಭಟ್ ನೀಡಿದ ಹಣ ಮತ್ತು ವಾಹನಗಳ ಬಲದಿಂದ ಆಕೆ ಐಷಾರಾಮಿ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ. ಒಟ್ಟಿನಲ್ಲಿ, ಮೋಜಿನ ಬದುಕು ಮತ್ತು ಹಣದ ಆಸೆಗೆ ಬಿದ್ದ ಸುಚಿತ್ರಾ, ಕಮಲಾಕರ್ ಭಟ್ ಜೊತೆ ಸೇರಿ ತನ್ನ ಪತಿಯ ಅಣ್ಣನನ್ನೇ ಬಲಿಪಡೆದ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ:ಆರ್​​ಸಿಬಿಗೆ ಮತ್ತೊಂದು ಕಿರೀಟ.. ವಿನ್ನಿಂಗ್ ಕ್ಷಣ ಹೇಗಿತ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us