ಆರ್​​ಸಿಬಿಗೆ ಮತ್ತೊಂದು ಕಿರೀಟ.. ವಿನ್ನಿಂಗ್ ಕ್ಷಣ ಹೇಗಿತ್ತು..?

ಬಿಗ್​ ಸ್ಕೋರ್​ ಕಲೆ ಹಾಕಿದ್ದ ಆತ್ಮವಿಶ್ವಾಸದಲ್ಲಿ ಬೌಲಿಂಗ್​ಗಿಳಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಶಾಕ್​ ಕಾದಿತ್ತು. ಸ್ಮೃತಿ ಮಂದಾನ, ಜಾರ್ಜಿಯಾ ವೋಲ್​ ಅಟ್ಯಾಕಿಂಗ್​ ಆಟದ ಮುಂದೆ ಡೆಲ್ಲಿ ತಂಡ ಥಂಡಾ ಹೊಡೆಯಿತು. ವಡೋದಾರದಲ್ಲಿ ಬೌಂಡರಿ ಸುರಿಮಳೆ ಸುರಿಸಿದ ರೆಡ್​ ಆರ್ಮಿ, 2ನೇ ಟ್ರೋಫಿಗೆ ಮುತ್ತಿಕ್ಕಿತು.

author-image
Ganesh Kerekuli
rcb (19)
Advertisment

ಬಿಗ್​ ಸ್ಕೋರ್​ ಕಲೆ ಹಾಕಿದ್ದ ಆತ್ಮವಿಶ್ವಾಸದಲ್ಲಿ ಬೌಲಿಂಗ್​ಗಿಳಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಶಾಕ್​ ಕಾದಿತ್ತು. ಸ್ಮೃತಿ ಮಂದಾನ, ಜಾರ್ಜಿಯಾ ವೋಲ್​ ಅಟ್ಯಾಕಿಂಗ್​ ಆಟದ ಮುಂದೆ ಡೆಲ್ಲಿ ತಂಡ ಥಂಡಾ ಹೊಡೆಯಿತು. ವಡೋದಾರದಲ್ಲಿ ಬೌಂಡರಿ ಸುರಿಮಳೆ ಸುರಿಸಿದ ರೆಡ್​ ಆರ್ಮಿ, 2ನೇ ಟ್ರೋಫಿಗೆ ಮುತ್ತಿಕ್ಕಿತು. 

204 ರನ್​ಗಳ ಚೇಸಿಂಗ್​ಗಿಳಿದ ರಾಯಲ್​ ಚಾಲೆಂಜರ್ಸ್​ ತಂಡ ಆರಂಭದಲ್ಲೆ ಆಘಾತ ಎದುರಿಸಿತು. ಮೊದಲ ಓವರ್​​ನಲ್ಲೇ 2 ಬೌಂಡರಿ ಬಾರಿಸಿದ ಗ್ರೇಸ್​ ಹ್ಯಾರೀಸ್​ 2ನೇ ಓವರ್​ನಲ್ಲೇ ಮೊದಲ ಎಸೆತದಲ್ಲೇ ಔಟಾದ್ರು. ಗ್ರೇಸ್​​ ಹ್ಯಾರೀಸ್​ ಔಟಾಗಿದ್ದು ಆರ್​​​ಸಿಬಿ ತಂಡಕ್ಕೆ ಯಾವುದೇ ಕ್ಷಣದಲ್ಲೂ ಹಿನ್ನಡೆಯಾಗಲೇ ಇಲ್ಲ. 2ನೇ ವಿಕೆಟ್​ಗೆ ಜೊತೆಯಾದ ಸ್ಮೃತಿ ಮಂದಾನ, ಜಾರ್ಜಿಯಾ ವೋಲ್​​ ಡೆಲ್ಲಿ ಬೌಲರ್​​ಗಳ ಮೇಲೆ ಸವಾರಿ ಮಾಡಿದ್ರು. ಆರ್​​​ಸಿಬಿ ಆಟಗಾರ್ತಿಯರ ಅಬ್ಬರಕ್ಕೆ ಡೆಲ್ಲಿ ಪಡೆ ಬೆಚ್ಚಿ ಬಿತ್ತು. 

ಇದನ್ನೂ ಓದಿ: RCB ಟೀಂ ಎಫರ್ಟ್​ಗೆ ಸಂದ ಜಯ.. ಸತತ 4ನೇ ಬಾರಿ ಫೈನಲ್​​ನಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್​..!

rcb (1)

ಕ್ರಿಸ್​ಗೆ ಬರ್ತಿದ್ದಂತೆ ಅಬ್ಬರಿಸಲು ಶುರುವಿಟ್ಟುಕೊಂಡ ಜಾರ್ಜಿಯಾ ವೋಲ್​ ಬೌಂಡರಿಗಳ ಸುರಿಮಳೆ ಸುರಿಸಿದ್ರು. ಜಾರ್ಜಿಯಾ ವೋಲ್​ ಅಟ್ಯಾಕಿಂಗ್​ ಆಟಕ್ಕೆ ಡೆಲ್ಲಿ ಬೌಲರ್​ಗಳು ಬೆಚ್ಚಿ ಬಿದ್ರು. ಜಾರ್ಜಿಯಾ ವೋಲ್​ ಜೊತೆಗೆ ನಾಯಕಿ ಸ್ಮೃತಿ ಮಂದಾನ ಕೂಡ ವಡೋದರಾದಲ್ಲಿ ಆರ್ಭಟಿಸಿದ್ರು. ಬಿಗ್​ ಶಾಟ್​​ಗಳನ್ನ ಬಾರಿಸಿ ಸ್ಮೃತಿ ಶೈನ್​ ಆದ್ರೆ, ಸ್ಟ್ಯಾಂಡ್​ನಲ್ಲಿದ್ದ ಫ್ಯಾನ್ಸ್​​ ಹುಚ್ಚೆದ್ದು ಕುಣಿದ್ರು. 

ಜಾರ್ಜಿಯಾ ವೋಲ್​- ಸ್ಮೃತಿ ಮಂದಾನ ಕಾಂಪಿಟೇಶನ್​ನಲ್ಲಿ ಹಾಫ್​ ಸೆಂಚುರಿ ಸಿಡಿಸಿದ್ರು. ವೋಲ್​ 37 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ರೆ, ಮಂದಾನ ಜಸ್ಟ್​ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಅರ್ಧಶತಕ ಪೂರೈಸಿದ ಬಳಿಕ ಇಬ್ಬರ ಆರ್ಭಟ ಮತ್ತಷ್ಟು ಜೋರಾಯ್ತು. ಡೆಲ್ಲಿ ಬೌಲರ್​ಗಳನ್ನ ಮನಬಂದಂತೆ ದಂಡಿಸಿದ್ರು. 84 ಎಸೆತಕ್ಕೆ 150 ರನ್​ಗಳ ಜೊತೆಯಾಟವಾಡಿದ್ರು. 

54 ಎಸೆತಗಳಲ್ಲಿ 14 ಬೌಂಡರಿ ಸಹಿತ 79 ರನ್​ಗಳಿಸಿ ಜಾರ್ಜಿಯಾ ವೋಲ್​ ಔಟಾದ್ರು. ರಿಚಾ ಘೋಷ್​ ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ರು. ರಿಚಾ ಬೆನ್ನಲ್ಲೇ ಸ್ಮೃತಿ ಮಂದಾನ ಕೂಡ ಔಟಾದ್ರು. 12 ಬೌಂಡರಿ, 3 ಸಿಕ್ಸರ್​​ ಸಿಡಿಸಿ ಮಿಂಚಿದ ಸ್ಮೃತಿ ಮಂದಾನ 41 ಎಸೆತಗಳಲ್ಲಿ 87 ರನ್​ಗಳಿಗೆ ಆಟ ಮುಗಿಸಿದ್ರು.  ಮಂದಾನ ನಿರ್ಗಮನದೊಂದಿಗೆ ಪಂದ್ಯದಲ್ಲಿ ಡೆಲ್ಲಿ ತಂಡ ಕಮ್​ಬ್ಯಾಕ್​ ಮಾಡಿತ್ತು. ಆದ್ರೆ, ರಾಧಾ ಯಾದವ್​ ಕ್ಯಾಚ್​ ಡ್ರಾಪ್​ ಮಾಡಿದ ಮಿನ್ನು ಮಣಿ ಮ್ಯಾಚ್​ ಡ್ರಾಪ್​ ಮಾಡಿದ್ರು. ಅಂತಿಮ ಓವರ್​​ನ 3 ಮತ್ತು 4ನೇ ಎಸೆತವನ್ನ ಬೌಂಡರಿ ಬಾರಿಸಿದ ರಾಧಾ ಯಾದವ್​​​ ಆರ್​​ಸಿಬಿ ತಂಡವನ್ನ ಗೆಲುವಿನ ದಡ ಸೇರಿಸಿತು. 

ಇದನ್ನೂ ಓದಿ: ಮಳಿಗೆ ಮಾಲೀಕನಿಂದ ಕಮಲಾಕರ್ ಭಟ್​ ಬಗ್ಗೆ ಮತ್ತಷ್ಟು ಮಾಹಿತಿ; ಸುಚಿತ್ರಾ ಎಂಟ್ರಿ, ಸಂಬಂಧದ ಬಗ್ಗೆ ಹೇಳಿದ್ದೇನು?

6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ಆರ್​​​ಸಿಬಿ ತಂಡ ಮಹಿಳಾ ಪ್ರೀಮಿಯರ್​​ ಲೀಗ್​ನಲ್ಲಿ 2ನೇ ಟ್ರೋಫಿಗೆ ಮುತ್ತಿಕ್ಕಿತು. ಆರ್​​ಸಿಬಿ ಗೆಲುವಿನ ದಡ ಸೇರ್ತಿದ್ದಂತೆ ಡಗೌಟ್​ನಲ್ಲಿದ್ದ ಆಟಗಾರ್ತಿಯರು ಮೈದಾನಕ್ಕೆ ಓಡಿ ಬಂದು ಸಂಭ್ರಮಿಸಿದ್ರು. ಸ್ಟ್ಯಾಂಡ್​​​ನಲ್ಲಿ ಫ್ಯಾನ್ಸ್​ ಕೂಡ ಫುಲ್​ ಖುಷ್​ ಆದ್ರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WPL 2026 RCB
Advertisment