ಮಳಿಗೆ ಮಾಲೀಕನಿಂದ ಕಮಲಾಕರ್ ಭಟ್​ ಬಗ್ಗೆ ಮತ್ತಷ್ಟು ಮಾಹಿತಿ; ಸುಚಿತ್ರಾ ಎಂಟ್ರಿ, ಸಂಬಂಧದ ಬಗ್ಗೆ ಹೇಳಿದ್ದೇನು?

ಇಲ್ಲಿಂದ ಹೋದವರು ಯಾರೂ ವಾಪಸ್ ಬಂದಿಲ್ಲ ಎಂದು ನಾಗೇಶ್ ವಿವರಿಸಿದ್ದಾರೆ. ಆರಂಭದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿತ್ತು, ಈಗಿನ ಘಟನೆಯಿಂದ ಎಲ್ಲವೂ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

author-image
Ganesh Kerekuli
rcb (17)
Advertisment

ಶಿವಮೊಗ್ಗ: ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಪ್ರಕರಣದ ಪ್ರಮುಖ ಆರೋಪಿ ಕಮಲಾಕರ್ ಭಟ್ ಅವರಿಗೆ ಮಳಿಗೆಯನ್ನು ಬಾಡಿಗೆಗೆ ನೀಡಿದ್ದ ಮಾಲೀಕ ನಾಗೇಶ್ ಅವರು ಮಹತ್ವದ ಹೇಳಿಕೆ ನೀಡಿದ್ದು, ಭಟ್ ನಡವಳಿಕೆ ಹಾಗೂ ಹಿನ್ನೆಲೆಯ ಬಗ್ಗೆ ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಆರೋಪಿ ಕಮಲಾಕರ್ ಭಟ್ ಮತ್ತು ಸಹಚರರ ಬಗ್ಗೆ ಮಾಲೀಕ ನಾಗೇಶ್ ಅವರು ನೀಡಿದ ಹೇಳಿಕೆ ಪ್ರಕಾರ, ಕಮಲಾಕರ್ ಭಟ್ ಕಳೆದ 4 ವರ್ಷಗಳಿಂದ ನಮ್ಮ ಅಕ್ಕನ ಮನೆಯಲ್ಲಿ ಬಾಡಿಗೆಗೆ ಇದ್ದ. ಅಂದಿನಿಂದಲೂ ಅವರು ನಮಗೆ ಚಿರಪರಿಚಿತರು. ನಮ್ಮೊಂದಿಗೆ ಬಹಳ ಚೆನ್ನಾಗಿಯೇ ಮಾತನಾಡುತ್ತಿದ್ದರು. ಮುದುವಾಲದಲ್ಲಿ ಸುಮಾರು 15 ಎಕರೆ ಜಮೀನನ್ನು ಕೂಡ ಖರೀದಿಸಿದ್ದ ಭಟ್, ಅಲ್ಲಿ ಒಂದು ಗೋಶಾಲೆಯನ್ನು ಸಹ ನಿರ್ಮಿಸಿದ್ದರು. ಆದರೆ ಅಷ್ಟು ಒಳ್ಳೆಯ ವ್ಯಕ್ತಿ, ಈಗ ಏಕಾಏಕಿ ಹೀಗೆ ಬದಲಾಗಿದ್ದು ನಮಗೂ ಆಶ್ಚರ್ಯ ತಂದಿದೆ ಎಂದಿದ್ದಾರೆ. 

ಇದನ್ನೂ ಓದಿ:ಗಿಲ್ಲಿ ಒಬ್ಬರೇ ಅಲ್ಲ, ಅವರ ಅಮ್ಮ ಕೂಡ ಫುಲ್ ಟ್ರೆಂಡ್.. ಯಾಕೆ ಗೊತ್ತಾ..?

kamalakar guruji (4)

ಕಾಲ್ ಸೆಂಟರ್ ತೆರೆದಿದ್ದ ಆರೋಪಿ

ನಾಗೇಶ್ ಅವರ ಬಿಲ್ಡಿಂಗ್‌ನಲ್ಲಿ ಮಳಿಗೆಯನ್ನು ಬಾಡಿಗೆಗೆ ಪಡೆದಿದ್ದ ಕಮಲಾಕರ್ ಭಟ್, ಅಲ್ಲಿ ಕಾಲ್ ಸೆಂಟರ್ (Call Center) ಒಂದನ್ನು ನಡೆಸುತ್ತಿದ್ದರು. ಅಲ್ಲಿ ಸುಮಾರು 9 ಜನರಿಗೆ ಉದ್ಯೋಗವನ್ನೂ ನೀಡಿದ್ದರು. ಪ್ರತೀ ತಿಂಗಳು ಸರಿಯಾದ ಸಮಯಕ್ಕೆ ಬಾಡಿಗೆಯನ್ನು ಪಾವತಿಸುತ್ತಿದ್ದರು ಎಂದು ಮಾಲೀಕರು ತಿಳಿಸಿದ್ದಾರೆ.

ಸುಚಿತ್ರಾ ಎಂಟ್ರಿ ಮತ್ತು ಸಂಬಂಧದ ಬಗ್ಗೆ ಹೇಳಿದ್ದೇನು?

ಸುಮಾರು 5 ತಿಂಗಳ ಹಿಂದೆ ಸುಚಿತ್ರಾ ಅವರನ್ನು ಕರೆದುಕೊಂಡು ಬಂದಿದ್ದ ಭಟ್, ನಮ್ಮ ಅಣ್ಣನ ಮನೆಯನ್ನು ಬಾಡಿಗೆಗೆ ಪಡೆದು ಆಕೆಯನ್ನು ಅಲ್ಲಿರಿಸಿದ್ದರು. ಸುಚಿತ್ರಾ ನಮ್ಮ ಊರಿನ ಕಡೆಯವರೇ ಆಗಿದ್ದು, ತಮಗೆ ಸಂಬಂಧಿಯಾಗಬೇಕು ಎಂದು ಪರಿಚಯ ಮಾಡಿಕೊಟ್ಟಿದ್ದರು. ಅವರಿಬ್ಬರೂ ಒಟ್ಟಿಗೆ ಓಡಾಡುವುದನ್ನು ಹಾಗೂ ಬೈಕ್‌ನಲ್ಲಿ ಸಂಚರಿಸುವುದನ್ನು ನಾವು ಹಲವು ಬಾರಿ ನೋಡಿದ್ದೇವೆ ಎಂದು ನಾಗೇಶ್ ತಿಳಿಸಿದರು. 

ಇನ್ನು ಪ್ರಕರಣದ ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿರುವ ಆಕಾಶ್ ಬಗ್ಗೆ ನಾಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆಕಾಶ್ ಕೇವಲ ಸಹಾಯ ಮಾಡಲು ಅವರ ಜೊತೆಗೆ ಹೋಗಿದ್ದನಷ್ಟೇ. ಆತನ ಬಗ್ಗೆ ಯೋಚಿಸಿದರೆ ನಮಗೆ ಅಳು ಬರುತ್ತದೆ. ಸುಮ್ಮನೆ ಜೊತೆಗೆ ಹೋಗಿದ್ದಕ್ಕೆ ಆತನನ್ನು 4ನೇ ಆರೋಪಿ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿಂದ ಹೋದವರು ಯಾರೂ ವಾಪಸ್ ಬಂದಿಲ್ಲ ಎಂದು ನಾಗೇಶ್ ವಿವರಿಸಿದ್ದಾರೆ. ಆರಂಭದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿತ್ತು, ಈಗಿನ ಘಟನೆಯಿಂದ ಎಲ್ಲವೂ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: RCB ಟೀಂ ಎಫರ್ಟ್​ಗೆ ಸಂದ ಜಯ.. ಸತತ 4ನೇ ಬಾರಿ ಫೈನಲ್​​ನಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

astrologer Kamalakar bhat
Advertisment