/newsfirstlive-kannada/media/media_files/2026/02/06/rcb-16-2026-02-06-08-47-06.jpg)
ಇಂಡಿಯನ್ ಪ್ರೀಮಿಯರ್‌ಲೀಗ್‌ನಲ್ಲಿ 17 ವರ್ಷಗಳ ಕಾಲ ಟ್ರೋಫಿಗಾಗಿ ಸೆಣಸಾಡಿದ್ದ ಆರ್‌ಸಿಬಿ ಪುರುಷರ ತಂಡ ಕಳೆದ ವರ್ಷ ತನ್ನ 18ನೇ ಆವೃತ್ತಿಯಲ್ಲಿ ಟ್ರೋಫಿಗೆ ಮುತ್ತಿಟ್ಟಿತ್ತು. ಅದರ ಹಿಂದಿನ ವರ್ಷವೇ ಆರ್‌ಸಿಬಿ ಮಹಿಳಾ ತಂಡ ತನ್ನ 2ನೇ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಮಾದರಿಯಾಗಿತ್ತು.
ಇದೀಗ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿರುವ ಬೆಂಗಳೂರು ಮಹಿಳಾ ತಂಡ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನೋ ಮಾತನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಈ ಮೂಲಕ ಆರ್‌ಸಿಬಿ ಫ್ರಾಂಚೈಸಿ ಸತತ ಮೂರು ವರ್ಷ ಟ್ರೋಫಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ. ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್‌ನಲ್ಲಿ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸತತ 4ನೇ ಬಾರಿಯೂ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಇದನ್ನೂ ಓದಿ: WPL 2026: ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಆರ್‌ಸಿಬಿ..! ಕಪ್ ನಮ್ದೇ..
/filters:format(webp)/newsfirstlive-kannada/media/media_files/2026/02/05/rcb-1-2026-02-05-23-33-35.jpg)
ವಡೋದರಾ ಕೊಟಂಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್​ ಪಂದ್ಯದಲ್ಲಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್ ತಂಡದ ಸಾಧನೆಯನ್ನ ಸರಿಗಟ್ಟಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 203 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಆರ್‌ಸಿಬಿ 19.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 204 ರನ್ ಗಳಿಸಿ ಜಯಗಳಿಸಿತು. ಈ ಇಡೀ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸ್ಮೃತಿ ಮಂಧಾನ ಪಡೆ ಲೀಗ್ ಹಂತದಲ್ಲಿ 5 ಪಂದ್ಯಗಳನ್ನ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಡೆಲ್ಲಿ ತಂಡ ಏಳು ಬೀಳುಗಳೊಂದಿಗೆ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನ ಮಣಿಸಿ ಸತತ ನಾಲ್ಕನೇ ಬಾರಿಗೆ ಫೈನಲ್​ಗೇರಿತ್ತು. ಆದಾಗ್ಯೂ ಫೈನಲ್​ನಲ್ಲಿ ಮತ್ತೊಮ್ಮೆ ಮುಗ್ಗರಿಸಿ ಟ್ರೋಫಿಯಿಂದ ವಂಚಿತವಾಯಿತು.
ಇದನ್ನೂ ಓದಿ:ಗಿಲ್ಲಿ ಒಬ್ಬರೇ ಅಲ್ಲ, ಅವರ ಅಮ್ಮ ಕೂಡ ಫುಲ್ ಟ್ರೆಂಡ್.. ಯಾಕೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us