ಗಿಲ್ಲಿ ಒಬ್ಬರೇ ಅಲ್ಲ, ಅವರ ಅಮ್ಮ ಕೂಡ ಫುಲ್ ಟ್ರೆಂಡ್.. ಯಾಕೆ ಗೊತ್ತಾ..?

ಗಿಲ್ಲಿ ಹವಾ ಹೇಗಿದೆ ಅನ್ನೋದು ಸಾಕಷ್ಟು ವಿಡಿಯೋಗಳು ಲಭ್ಯವಿದೆ. ಮೊನ್ನೆ ಮೊನ್ನೆ ನಡೆದ ಕನಕೋತ್ಸವದಲ್ಲಿ ಗಿಲ್ಲಿ ಪಾಪ್ಯುಲಾರಿಟಿ ಹೇಗಿದೆ ಅನ್ನೋದಕ್ಕೆ ಸಾಕ್ಷ್ಯ ಸಿಕ್ಕಿತ್ತು. ಏನ್ ಹವಾ ಅಂತೀರಾ ಅದು ಅಬ್ಬಬ್ಬಾ!

author-image
Ganesh Kerekuli
gilli nata (39)
Advertisment

ಗಿಲ್ಲಿ ಕೇವಲ ಬಿಗ್‌ಬಾಸ್‌ ಕಪ್ ವಿನ್ ಆಗಿದ್ದಾನೆ ಅನ್ನೋದು ನಿಜಕ್ಕೂ ಸುಳ್ಳು. ಈ ಹಿಂದೆ ಬಿಗ್‌ಬಾಸ್ ಕಪ್ ಮಾತ್ರ ಗೆದ್ದವರಿಗೂ, ಗಿಲ್ಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಅದು ವೋಟಿಂಗ್‌ ಮೂಲಕವೂ ಪ್ರೂವ್ ಆಗಿದೆ. ಹೊರಗೆ ಜನ ಸಾಗರದಿಂದಲೂ ಸಾಬೀತಾಗಿದೆ. ಹಾಗಾಗಿಯೇ ಏನೋ ಗಿಲ್ಲಿ ಹವಾ ಇವತ್ತು ನಿಂತಿಲ್ಲ. ದಿನೇ ದಿನೇ ಜ್ವರದ ರೀತಿ ಜಾಸ್ತಿ ಆಗ್ತಾನೇ ಇದೆ.

ಗಿಲ್ಲಿ ಹವಾ ಹೇಗಿದೆ ಅನ್ನೋದು ಸಾಕಷ್ಟು ವಿಡಿಯೋಗಳು ಲಭ್ಯವಿದೆ. ಮೊನ್ನೆ ಮೊನ್ನೆ ನಡೆದ ಕನಕೋತ್ಸವದಲ್ಲಿ ಗಿಲ್ಲಿ ಪಾಪ್ಯುಲಾರಿಟಿ ಹೇಗಿದೆ ಅನ್ನೋದಕ್ಕೆ ಸಾಕ್ಷ್ಯ ಸಿಕ್ಕಿತ್ತು. ಏನ್ ಹವಾ ಅಂತೀರಾ ಅದು ಅಬ್ಬಬ್ಬಾ!

ಗಿಲ್ಲಿ ಸ್ಟೈಲ್‌ನಲ್ಲಿಯೇ ಹೇಳೋದಾದ್ರೆ ಏನ್ರೀ ಏನ್ರೀ ಜನ ಅನ್ನೋ ರೀತಿ ಇತ್ತು. ಗಿಲ್ಲಿ ಬರ್ತಿದ್ರೇ. ಪೊಲೀಸರ ಸರ್ಪಗಾವಲು ಹಾಕ್ಕೊಂಡಿದ್ದರು. ಯಾರು ಹತ್ರ ಸುಳಿಯಲು ಬಿಡಲಿಲ್ಲ. ಅಷ್ಟೇ ಯಾಕೆ ಸ್ಟೇಜ್ ಮೇಲೆ ಕೆಲ ಅಭಿಮಾನಿಗಳು ಏಕಾಏಕಿ ಬಂದು ಬಿಟ್ಟರು. ಅಲ್ಲಿದ್ದ ಆಯೋಜಕರಿಗೆ ದೊಡ್ಡ ತಲೆ ನೋವಾಯ್ತು.

gilli nata (40)

ಇದೊಂದೇ ಅಲ್ಲ, ಗಿಲ್ಲಿ ಇವತ್ತಿಗೂ ಹೊರಗೆ ಬರೋಕೆ ಆಗ್ತಿಲ್ಲ. ಇನ್ನೂ ಅಜ್ಞಾನವಾಸಿಯಾಗಿಯೇ ಇದ್ದಾನೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರೆಸ್ಟ್ ಮಾಡ್ತಿದ್ದಾನೆ. ಹೊರಗೆ ಬಂದ್ರೆ ಜನ ಮುತ್ತಿಗೆ ಹಾಕುವಷ್ಟು ಪಾಪ್ಯುಲಾರಿಟಿ ಗಿಲ್ಲಿಗೆ ಬಂದಿದೆ ಅಂದ್ರೆ ನಿಜಕ್ಕೂ ತಪ್ಪೇ ಆಗೋದಿಲ್ಲ.
ಕೇವಲ ಗಿಲ್ಲಿ ಮಾತ್ರವಲ್ಲ, ಅವರ ಮನೆಯವರು ಕೂಡ ಪಾಪ್ಯುಲರ್ ಆಗಿದ್ದಾರೆ. ಅದಕ್ಕೊಂದು ಎಕ್ಸಾಂಪಲ್ ಇದೊಂದು ಬ್ಯೂಟಿಫುಲ್ ಆರ್ಟ್‌. ಗಿಲ್ಲಿ ಮತ್ತು ಈತನ ತಾಯಿಯ ಪೇಟಿಂಗ್‌ ಈಗ ಸಖಥ್ ಟ್ರೆಂಡ್ ಆಗ್ತಿದೆ. ಬ್ಯಾಕ್‌ಗ್ರೌಂಡ್‌ನಲ್ಲಿ ಜೋಗಿ ಹಾಡು ಬೇರೇ. ಜನರು ಇಷ್ಟಪಡೋಕೆ ಇದಕ್ಕಿಂತ ಬೇರೇನು ಬೇಕು ಹೇಳಿ..

ಗಿಲ್ಲಿಗೇ ಕೇವಲ ಬಿಗ್‌ಬಾಸ್ ಕಪ್ ಗೆದ್ದಿದ್ರೆ, ಒಂದು ವಾರವೋ ಒಂದು ತಿಂಗಳೋ ಹವಾ ಇರ್ತಿತ್ತು. ಆದ್ರೆ, ಗಿಲ್ಲಿ ಗೆದ್ದಿರೋದು ಕೇವಲ ಕಪ್ ಅಲ್ಲ, ಕೋಟ್ಯಂತರ ಕನ್ನಡಿಗರ ಹೃದಯ. ಹಾಗಾಗಿ, ಗಿಲ್ಲಿ ಪಾಪ್ಯುಲಾರಿಟಿ ಕಡಿಮೆಯಾಗೋ ಚಾನ್ಸಸ್‌ ಕಡಿಮೆಯೇ.

ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ ಚಾಲನೆ ನೀಡಿದ ಅಮಿತ್ ಶಾ : 2 ವರ್ಷಗಳಲ್ಲಿ ದೇಶಾದ್ಯಂತ ಸೇವೆ ವಿಸ್ತರಣೆ- ಓಲಾ, ಉಬರ್‌ಗೆ ಫೈಟ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg boss Gilli Nata
Advertisment