Advertisment

ನೋಡುತ.. ನೋಡುತ ಚಿನ್ನಾಭರಣ ಕದ್ದ ದಪಂತಿ.. ಆ ಬ್ಯೂಟಿಫುಲ್ ನೆಕ್ಲೇಸ್ ಬೆಲೆ ಎಷ್ಟು..?

ಮಹಿಳೆ ತನ್ನ ತೊಡೆಯ ಮೇಲೆ ಒಂದು ನೆಕ್ಲೇಸ್​ ಅನ್ನು ಇಟ್ಟುಕೊಳ್ಳುತ್ತಾಳೆ. ಬಳಿಕ ನೋಡುವಂತೆ ಇನ್ನೊಂದು ನೆಕ್ಲೇಸ್​ ಅನ್ನು ನೋಡಿ ಅದನ್ನು ತೊಡೆಯ ಮೇಲೆ ಇಟ್ಟುಕೊಂಡು, ಬಳಿಕ ಎರಡರಲ್ಲಿ ಒಂದು ಮಾತ್ರ ಮೇಲೆ ಇಡುವುದು ಸಿಸಿಟಿಯಲ್ಲಿ ಸೆರೆಯಾಗಿದೆ.

author-image
Bhimappa
UP_GOLD_1
Advertisment

ಲಕ್ನೋ: ಜ್ಯುವೆಲ್ಲರಿ ಶಾಪ್​ವೊಂದರಲ್ಲಿ ಚಿನ್ನಾಭರಣ ಖರೀದಿ ಮಾಡುವರಂತೆ ಪೋಸ್​ ಕೊಟ್ಟ ದಂಪತಿ, ಭಾರೀ ಮೌಲ್ಯದ ನೆಕ್ಲೇಸ್​ ಕಳ್ಳತನ ಮಾಡಿ, ಎಸ್ಕೇಪ್ ಆಗಿದ್ದಾರೆ. ಉತ್ತರ ಪ್ರದೇಶದ ಬುಲಂದ್​ಶಹರ್​ ನಗರದ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ.

Advertisment

ಬುಲಂದ್​ಶಹರ್​ ನಗರದ ಜ್ಯುವೆಲ್ಲರಿ ಶಾಪ್​ಗೆ ಗ್ರಾಹಕರ ರೀತಿ ಬಂದ ಗಂಡ, ಹೆಂಡತಿ ಮೊದಲು ಚಿನ್ನಾಭರಣಗಳನ್ನು ನೋಡಿದ್ದಾರೆ. ಭಾರೀ ಮೌಲ್ಯದ ನೆಕ್ಲೇಸ್​ಗಳನ್ನು ಹೆಚ್ಚು ಹೊತ್ತು ನೋಡುತ್ತಿದ್ದರು. ಈ ವೇಳೆ ಮಹಿಳೆ ತನ್ನ ತೊಡೆಯ ಮೇಲೆ ಒಂದು ನೆಕ್ಲೇಸ್​ ಅನ್ನು ಇಟ್ಟುಕೊಳ್ಳುತ್ತಾಳೆ. ಬಳಿಕ ನೋಡುವಂತೆ ಇನ್ನೊಂದು ನೆಕ್ಲೇಸ್​ ಅನ್ನು ನೋಡಿ ಅದನ್ನು ತೊಡೆಯ ಮೇಲೆ ಇಟ್ಟುಕೊಂಡು, ಬಳಿಕ ಎರಡರಲ್ಲಿ ಒಂದು ಮಾತ್ರ ಮೇಲೆ ಇಡುವುದು ಸಿಸಿಟಿಯಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ: BBK12; ನಾಮಿನೇಷನ್ ಅಂದರೇ ಏನು.. ಗಿಲ್ಲಿ ನಟನಿಗೆ ಬಿಗ್ ಶಾಕ್ ಕೊಟ್ಟ ಮಲ್ಲಮ್ಮ!

UP_GOLD

ಇನ್ನೊಂದನ್ನ ತನ್ನ ಕೊಂಕಳಲ್ಲಿ ಸೀರೆ ಮರೆ ಮಾಡಿ ಇಟ್ಟುಕೊಂಡಿದ್ದಾಳೆ. ಇದು ಅಂಗಡಿಯ ಮಾಲೀಕನ ಗಮನಕ್ಕೆ ಬಂದಿಲ್ಲ. ನೆಕ್ಲೇಸ್ ಕದ್ದಿದ್ದೇ ತಡ ಇವು ಯಾವು ಚೆನ್ನಾಗಿಲ್ಲ ಎಂದು ನೆಪ ಹೇಳಿ ಕೊಂಕಳಲ್ಲಿ ಇಟ್ಟುಕೊಂಡಿದ್ದ ನೆಕ್ಲೇಸ್​ ಜೊತೆ ಅಲ್ಲಿಂದ ಗಂಡನ ಜೊತೆ ಎಸ್ಕೇಪ್ ಆಗಿದ್ದಾಳೆ. ಅಂಗಡಿ ಮುಚ್ಚುವ ವೇಳೆ ಎಲ್ಲ ಚಿನ್ನಾಭರಣಗಳನ್ನು ಕ್ರಾಸ್ ಚೆಕ್ ಮಾಡುವಾಗ ನೆಕ್ಲೇಸ್ ಕಾಣೆ ಆಗಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ದಂಪತಿ ಕಳ್ಳಾಟ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. 

Advertisment

ಇನ್ನು ಈ ಸಂಬಂಧ ಅಂಗಡಿ ಮಾಲೀಕ 6 ಲಕ್ಷ ರೂಪಾಯಿ ಮೌಲ್ಯದ ನೆಕ್ಲೇಸ್​ ಅನ್ನು ದಂಪತಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ಫುಟೇಜ್ ಅನ್ನು ಪೊಲೀಸರಿಗೆ ನೀಡಲಾಗಿದ್ದು ದಂಪತಿನ ಹುಡುಕಾಟ ನಡೆಸಲಾಗುತ್ತಿದೆ.   
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

golden kalash stolen Red Fort gold rate Gold Uttar Pradesh
Advertisment
Advertisment
Advertisment