/newsfirstlive-kannada/media/media_files/2025/10/03/gilli_mallamma-2025-10-03-17-48-47.jpg)
ಬಿಗ್ ಬಾಸ್ ಸೀಸನ್​ 12 ಗ್ರ್ಯಾಂಡ್ ಓಪನಿಂಗ್ ಪಡೆದು ಇಲ್ಲಿಗೆ ಐದು ದಿನಗಳು ಆಗುತ್ತಿವೆ. ದೊಡ್ಮನೆಯಲ್ಲಿ ಒಂಟಿ ಹಾಗೂ ಜಂಟಿ ಎಂದು ಸ್ಪರ್ಧಿಗಳನ್ನು ವಿಭಾಗ ಮಾಡಲಾಗಿದೆ. ಇದರಿಂದ ಒಂದು ನಿಯಮ ಮೀರಿದರೂ ಶಿಕ್ಷೆ ಕೂಡ ಕಠಿಣವಾಗಿದೆ. ಇದರ ನಡುವೆ ಮನೆಯಲ್ಲಿ ಕಂಟೆಸ್ಟೆಂಟ್​ಗಳ ಮಧ್ಯೆ ಗಲಾಟೆಯೂ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದರ ನಡುವೆ ಈ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ.
ಸದ್ಯ ಈ ಸಂಬಂಧ ವಾಹಿನಿಯು ಪ್ರೋಮೋ ಒಂದನ್ನ ಬಿಡುಗಡೆ ಮಾಡಿದ್ದು ಇದರಲ್ಲಿ ಕಾಕ್ರೋಚ್ ಸುಧಿರನ್ನು ಜಾಹ್ನವಿ ಅವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ನಿರ್ಧಾರಕ್ಕೆ ಕಾಕ್ರೋಚ್ ಸುಧಿ ಬದ್ಧರಾಗಿರಲ್ಲ ಅಂತ ಆ್ಯಂಕರ್ ಜಾಹ್ನವಿ ಅವರು ಹೇಳಿದ್ದಾರೆ. ಈ ವೇಳೆ ಕಾಕ್ರೋಚ್ ಸೈಲೆಂಟ್​ ಆಗಿ ಕೈ ಕಟ್ಟಿ ನಿಂತಿರುವುದು ವಿಡಿಯೋದಲ್ಲಿದೆ. ಇನ್ನು ಒಬ್ಬೊಬ್ಬರು ಒಂದೊಂದು ಹೆಸರನ್ನು ನಾಮಿನೇಷನ್ ಪ್ರಕ್ರಿಯೆಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬಿಗ್​ ಬಾಸ್​ಗೆ ಬಿಗ್ ಶಾಕ್ ಕೊಟ್ಟ ಮಲ್ಲಮ್ಮ.. ಈ ಕಾರಣಕ್ಕೆ ಸರಿ ಇಲ್ಲ ಎಂದೇ ಬಿಟ್ಟರು!
ಕಾಮಿಡಿ ಕಲಾವಿದ ಚಂದ್ರಪ್ರಭ ಅವರು ಧನುಷ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರಿಗೆ ಅವರೇ ಹೀರೋ ಅಂತ ಅಂದುಕೊಂಡು ಬಿಟ್ಟಿದ್ದಾರೆ ಎಂದು ಚಂದ್ರಪ್ರಭ ಗುಡುಗಿದ್ದಾರೆ. ವಿಡಿಯೋದಲ್ಲಿ ಧನುಷ್ ಹಾಗೂ ಚಂದ್ರಪ್ರಭ ನಡುವೆ ಮಾತಿನ ಸಮರ ನಡೆದಿದ್ದು ಈ ವೇಳೆ ಬೆರಳೆಲ್ಲ ತೋರಿಸಿಕೊಂಡು ಮಾತನಾಡುವಾಗೇ ಇಲ್ಲ ಎಂದು ಧನುಷ್​ಗೆ ಚಂದ್ರಪ್ರಭ ಬಿಗ್ ವಾರ್ನಿಂಗ್ ಮಾಡಿದ್ದಾರೆ.
ಇಲ್ಲೊಂದು ಇನ್ನೊಂದು ತಮಾಷೆ ಎಂದರೆ ನಾಮಿನೇಷನ್ ಅಂದರೆ ಏನು ಅಂತ ಗೊತ್ತಿಲ್ಲದ ಮಲ್ಲಮ್ಮ ಅವರು ಗಿಲ್ಲಿ ನಟನ ಹೆಸರು ಹೇಳಿದ್ದು ಫುಲ್ ಕಾಮಿಡಿ ಆಗಿದೆ. ಏಕೆಂದರೆ ನಾಮಿನೇಷನ್ ಏನು ಅಂತ ಆ ಮೇಲೆ ಗಿಲ್ಲಿ ನಟನೇ ಮಲ್ಲಮ್ಮಗೆ ಹೇಳಿಕೊಟ್ಟಿದ್ದಾರೆ. ಮಲ್ಲಮ್ಮ, ಗಿಲ್ಲಿ ಅಂತ ಹೆಸರು ಹೇಳುತ್ತಿದ್ದಂತೆ, ಗಿಲ್ಲಿ ನಕ್ಕಿದ್ದಾನೆ. ಬಳಿಕ ನೀನು ನಾಮಿನೇಷನ್ ಮಾಡಿದೆ ಅಂದರೆ ನನ್ನನ್ನು ಇಲ್ಲಿಂದ ಮನೆಗೆ ಕಳಿಸುತ್ತಾರೆ ಎಂದು ಮಲ್ಲಮ್ಮಗೆ ಅರ್ಥೈಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ