Advertisment

UPSC ಫಲಿತಾಂಶ: ಕರ್ನಾಟಕದ 20 ಅಭ್ಯರ್ಥಿಗಳು ತೇರ್ಗಡೆ; ಕಿರಣ್ ಕಮಾಟೆ ರಾಜ್ಯಕ್ಕೆ ಟಾಪರ್..!

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 958 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಕರ್ನಾಟಕದಿಂದ 25 ಮಂದಿ ಕನ್ನಡಿಗರು ಸಾಧನೆ ಮಾಡಿದ್ದು, ಈ ಪೈಕಿ ಬೆಂಗಳೂರಿನ INDIA 4 IAS ಅಕಾಡೆಮಿಯ 20 ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

author-image
Ganesh Kerekuli
upsc result (2)
Advertisment

ನವದೆಹಲಿ/ಬೆಂಗಳೂರು: ಬಹುನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2025-26ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ (Civil Services Examination) ಅಂತಿಮ ಫಲಿತಾಂಶ ಇಂದು ಪ್ರಕಟವಾಗಿದೆ. ದೇಶದಾದ್ಯಂತ ಕಠಿಣ ಪರೀಕ್ಷೆ ಎದುರಿಸಿ ಒಟ್ಟು 958 ಅಭ್ಯರ್ಥಿಗಳು ಐಎಎಸ್ (IAS), ಐಪಿಎಸ್ (IPS), ಐಎಫ್ಎಸ್ (IFS) ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಅಂತಿಮವಾಗಿ ಆಯ್ಕೆಯಾಗಿದ್ದಾರೆ.

Advertisment

ಕರ್ನಾಟಕದ ಸಾಧನೆ: ರಾಜ್ಯಕ್ಕೆ ಕಿರಣ್ ಕಮಾಟೆ ಟಾಪರ್

ಈ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಾಜ್ಯದಿಂದ ಒಟ್ಟು 25 ಮಂದಿ ಅಭ್ಯರ್ಥಿಗಳು ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ ಕಿರಣ್ ಕಮಾಟೆ (Kiran Kamate) ಅವರು ಕರ್ನಾಟಕ ರಾಜ್ಯಕ್ಕೆ ಮೊದಲ ಱಂಕ್  ಪಡೆಯುವ ಮೂಲಕ ಕರುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

‘ಇಂಡಿಯಾ ಫಾರ್ ಐಎಎಸ್’ ಅಕಾಡೆಮಿಯ ಐತಿಹಾಸಿಕ ಸಾಧನೆ

ಕರ್ನಾಟಕದ ಪಾಲಿಗೆ ಈ ಬಾರಿಯ ಫಲಿತಾಂಶದಲ್ಲಿ ಅತಿ ದೊಡ್ಡ ಹೈಲೈಟ್ ಎಂದರೆ ಅದು ಬೆಂಗಳೂರಿನ ಕೋಚಿಂಗ್ ಸಂಸ್ಥೆಯೊಂದರ ಸಾಧನೆ. ರಾಜ್ಯದಿಂದ ಯುಪಿಎಸ್‌ಸಿ ಪಾಸ್ ಮಾಡಿದ 25 ಅಭ್ಯರ್ಥಿಗಳ ಪೈಕಿ ಬರೋಬ್ಬರಿ 20 ಮಂದಿ ವಿದ್ಯಾರ್ಥಿಗಳು ಬೆಂಗಳೂರಿನ ವಿಜಯನಗರದಲ್ಲಿರುವ 'ಇಂಡಿಯಾ ಫಾರ್ ಐಎಎಸ್' (INDIA 4 IAS) ಕೋಚಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದವರಾಗಿದ್ದಾರೆ.
ರಾಜ್ಯದಿಂದ ಆಯ್ಕೆಯಾದವರಲ್ಲಿ ಶೇ. 80ರಷ್ಟು ಅಭ್ಯರ್ಥಿಗಳು ಒಂದೇ ಸಂಸ್ಥೆಯಿಂದ ಬಂದಿರುವುದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಲ್ಲಿ ಈ ಅಕಾಡೆಮಿಯ ಗುಣಮಟ್ಟವನ್ನು ಸಾಬೀತುಪಡಿಸಿದೆ. ಪರಿಣಿತರ ಮಾರ್ಗದರ್ಶನ, ನಿಖರವಾದ ಅಧ್ಯಯನ ಸಾಮಗ್ರಿ ಹಾಗೂ ವಿದ್ಯಾರ್ಥಿಗಳ ಸತತ ಶ್ರಮದಿಂದಾಗಿ INDIA 4 IAS ಸಂಸ್ಥೆಯು ಐಎಎಸ್/ಐಪಿಎಸ್ ಆಕಾಂಕ್ಷಿಗಳಿಗೆ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.

ದೇಶಕ್ಕೆ ಅನುಜ್ ಅಗ್ನಿಹೋತ್ರಿ ಫಸ್ಟ್

ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅನುಜ್ ಅಗ್ನಿಹೋತ್ರಿ (Anuj Agnihotri) ಅವರು ಪ್ರಥಮ ರ‍್ಯಾಂಕ್ (AIR 1) ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ತಮ್ಮ ಕಠಿಣ ಪರಿಶ್ರಮ ಹಾಗೂ ಛಲದಿಂದ ಅವರು ಐಎಎಸ್ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Advertisment

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಎಲ್ಲಾ ಸಾಧಕರಿಗೆ ನಾಡಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ ಸಂಪೂರ್ಣ ಫಲಿತಾಂಶವನ್ನು ವೀಕ್ಷಿಸಬಹುದು.

ಇದನ್ನೂ ಓದಿ:UPSC CSE 2025 ಅಂತಿಮ ಫಲಿತಾಂಶ ಪ್ರಕಟ: ಅನುಜ್ ಅಗ್ನಿಹೋತ್ರಿ ದೇಶಕ್ಕೆ ಟಾಪರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Anuj Agnihotri Civil Services Examination UPSC
Advertisment
Advertisment
Advertisment