/newsfirstlive-kannada/media/media_files/2025/09/20/up_kidnap_3-2025-09-20-08-56-26.jpg)
ಮೂರು ಮಕ್ಕಳ ತಾಯಿಯನ್ನ ವರಿಸಿಕೊಂಡಿದ್ದ ಯುವಕ, ಮಾಡಬಾರದ ಕೆಲಸ ಮಾಡಿ, ಪೊಲೀಸರ ಅತಿಥಿಯಾಗಿದ್ದಾನೆ. ತನ್ನನ್ನು ದೂರ ಮಾಡ್ತಿದ್ದಾಳೆಂದು ಅನುಮಾನಗೊಂಡ ಆತ, ಮನೆಗೆ ಬಂದ ಪ್ರಿಯತಮೆಯ ಮಗನನ್ನು ಗನ್​ ಪಾಯಿಂಟ್​ನಲ್ಲಿ ಒತ್ತೆ ಇಟ್ಟುಕೊಂಡು ಪ್ರೇಯಸಿಗಾಗಿ ಪಟ್ಟು ಹಿಡಿದಿದ್ದ. ಆದರೆ ಕೊನೆಗೆ ಆಗಿದ್ದೇನು?.
ಮನೆಯ ಹೊರಗೆ ಮಗುವಿನ ಸಂಬಂಧಿಕರ ಆಕ್ರಂದನ
ಉತ್ತರ ಪ್ರದೇಶದ ಕನೌಜ್​ನ ಕಾಶಿರಾಮ್ ಕಾಲೋನಿಯಲ್ಲಿ ಇಡೀ ದಿನ ಆತಂಕದ ವಾತಾವರಣ ಮನೆ ಮಾಡಿತ್ತು. ಯುವಕನೊಬ್ಬ ಗನ್​ ಪಾಯಿಂಟ್​ನಲ್ಲಿ ತನ್ನ ಪ್ರಿಯತಮೆಯ ಮಗನನ್ನು ಒತ್ತೆಯಾಗಿಟ್ಟುಕೊಂಡಿದ್ದ. ಕೊನೆಗೂ ಒತ್ತೆಯಾಳಾಗಿದ್ದ ಮಗುವನ್ನು ರಕ್ಷಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಏನಿದು ಪ್ರಕರಣ?.
- 2 ವರ್ಷಗಳ ಹಿಂದೆ ಮಹಿಳೆಯ ಪತಿ ಸಂಜಯ್​ ನಿಧನರಾಗಿದ್ದರು
- ಮೂವರು ಮಕ್ಕಳೊಂದಿಗೆ ಕಾಶಿರಾಮ್ ಕಾಲೋನಿಯಲ್ಲಿ ಮಹಿಳೆ ವಾಸ
- ಖಾಸಗಿ ಉದ್ಯೋಗ ಮಾಡ್ತಿದ್ದ ಮಹಿಳೆಗೆ ದೀಪು ಚಕ್​ ಎಂಬಾತನ ಪರಿಚಯ
- ಇಬ್ಬರೂ ಒಂದೇ ಕಡೆ ಕೆಲ್ಸ ಮಾಡ್ತಿದ್ದ ಕಾರಣ, ಸ್ನೇಹವಾಗಿ ಪ್ರೀತಿ ಬೆಳೆದಿತ್ತು
- ಕಳೆದ 4 ತಿಂಗಳ ಹಿಂದೆ ನ್ಯಾಯಾಲಯದಲ್ಲಿ ದೀಪು ಮತ್ತು ಮಹಿಳೆ ವಿವಾಹ
- ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇಬ್ಬರ ನಡುವೆ ಬಿರುಕು ಮೂಡಿತ್ತು
- ಮನೆ ಬಂದಾಗಲೆಲ್ಲ ಮಹಿಳೆ ದೂರ ಹೋಗ್ತಿದ್ದ ಕಾರಣ ದೀಪುಗೆ ಸಂಶಯ
- ಬೇರೆಯವರ ಜೊತೆ ವಾಸಿಸುತ್ತಿರಬಹುದೆಂದು ದೀಪುಗೆ ಅನುಮಾನ
ಕೈಯಲ್ಲಿ ಗನ್​ ಹಿಡಿದು ಮನೆಗೆ ಎಂಟ್ರಿಕೊಟ್ಟಿದ್ದ ದೀಪು
ಕೈಯಲ್ಲಿ ಗನ್​ ಹಿಡಿದು ದೀಪು ಮನೆಗೆ ಬಂದಿದ್ದಾನೆ. ಆಗ ಪ್ರಿಯತಮೆಯ ಮಗನ ಬಳಿ, ತಾಯಿಯ ಬಗ್ಗೆ ವಿಚಾರಿಸಿದ್ದಾನೆ. ಆದ್ರೆ ಬಾಲಕ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ಕೋಪಗೊಂಡ ದೀಪು, ಬಾಗಿಲು ಹಾಕಿಕೊಂಡು ಪ್ರಿಯತಮೆಯ ಮಗನನ್ನು ಒತ್ತೆ ಇರಿಸಿಕೊಂಡಿದ್ದಾನೆ. ಹಾಗೂ ಪ್ರಿಯಸಿಯನ್ನು ಸ್ಥಳಕ್ಕೆ ಕರೆಸಬೇಕು. ಇಲ್ಲದಿದ್ರೆ, ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ತಲೆಗೆ ಪಿಸ್ತೂಲ್​ ಇಟ್ಟುಕೊಂಡು ಹೈಡ್ರಾಮಾ ಮಾಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ದೀಪುನನ್ನು ಎಷ್ಟೇ ಮನವೊಲಿಸಿದ್ರು ಬಾಗಿಲು ತೆಗೆಯದೇ ಹೈಡ್ರಾಮಾ ಮಾಡಿದ್ದಾನೆ.
ಇದನ್ನೂ ಓದಿ:ಅಯ್ಯೋ ನಾನು ರೋಹಿತ್ ಶರ್ಮಾ ಆಗಿಬಿಟ್ಟೇ.. ಪ್ಲೇಯರ್​ ಹೆಸರು ನೆನಪಿಗೆ ಬರದೇ ಸೂರ್ಯಕುಮಾರ್..
ದೀಪು ಒತ್ತಡಕ್ಕೆ ಮಣಿದ ಪೊಲೀಸರು ಮಹಿಳೆಯನ್ನು ಸಂಪರ್ಕಿಸಲು ಯತ್ನಿದ್ದಾರೆ. ಆದ್ರೆ ಮಹಿಳೆಯ ಮೊಬೈಲ್​ ಸ್ವಿಚ್​ ಆಫ್​ ಬಂದಿದೆ. ಕೊನೆಗೆ ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಲು ಯತ್ನಿಸಿದಾಗ, ಪಾಗಲ್​ ಪ್ರೇಮಿ. ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಫೈರ್​ ಮಾಡಿದ್ದಾರೆ. ಸತತ 7 ಗಂಟೆಗಳ ಕಾರ್ಯಾಚರಣೆ ಬಳಿಕ ಒತ್ತೆಯಾಳಾಗಿದ್ದ ಬಾಲಕನನ್ನು ಪಾಗಲ್​ ಪ್ರೇಮಿ ಕೈಯಿಂದ ಸುರಕ್ಷಿತವಾಗಿ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಸಣ್ಣದೊಂದು ಅನುಮಾನ ಎಷ್ಟೆಲ್ಲ ಅನಾಹುತ.. ಅವಾಂತರಕ್ಕೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಸದ್ಯ ಗಾಯಗೊಂಡಿರುವ ಮಹಿಳೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಮಗು ಸುರಕ್ಷಿತವಾಗಿ ಬಂದಿದ್ದನ್ನು ಕಂಡು ತಾಯಿ ಕೂಡ ನಿಟ್ಟುಸಿರು ಬಿಟ್ಟಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ