ಪ್ರೀತಿಗಾಗಿ ರಸ್ತೆ ಮಧ್ಯೆ ಕೂತ ಸಂತ್ರಸ್ತೆ.. ಮದ್ವೆ ಆಗ್ತೀನಿ ಎಂದು ವಂಚಿಸಿದ ಪ್ರೇಮಿ..!

ಮದ್ವೆ ಆಗೋದಾಗಿ ಭರವಸೆ ನೀಡಿ ವಂಚಿಸಿದ ಯುವಕನ ಮನೆ ಮುಂದೆ ಯುವತಿಯೊಬ್ಬಳು ಧರಣಿ ನಡೆಸಿದ್ದಾಳೆ. ತನಗೆ ಆಗಿರುವ ಅನ್ಯಾಯವನ್ನು ಬಹಿರಂಗಪಡಿಸಿ ಕಣ್ಣೀರು ಇಟ್ಟಿದ್ದಾಳೆ. ಅಸಲಿಗೆ ಆಗಿದ್ದೇನು?

author-image
Ganesh Kerekuli
Andhra
Advertisment

ಮದ್ವೆ ಆಗೋದಾಗಿ ಭರವಸೆ ನೀಡಿ ವಂಚಿಸಿದ ಯುವಕನ ಮನೆ ಮುಂದೆ ಯುವತಿಯೊಬ್ಬಳು ಧರಣಿ ನಡೆಸಿದ್ದಾಳೆ. ತನಗೆ ಆಗಿರುವ ಅನ್ಯಾಯವನ್ನು ಬಹಿರಂಗಪಡಿಸಿ ಕಣ್ಣೀರು ಇಟ್ಟಿದ್ದಾಳೆ. 

ಆಂಧ್ರದ ಎನ್‌ಟಿಆರ್ ಜಿಲ್ಲೆಯ ಕಾಕಾನಿ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಎಲೂರು ಜಿಲ್ಲೆಯ (Eluru district) ಕೈಕಲೂರಿನ ಯುವತಿಯೊಬ್ಬಳು 13 ವರ್ಷಗಳ ಹಿಂದೆ ಜಗ್ಗಯ್ಯಪೇಟೆಯ ಬಾಲು ಸತ್ಯದೇವ್ ಎಂಬ ಯುವಕನ ಭೇಟಿಯಾಗಿದ್ದಳು. ಶಾಲಾ ದಿನಗಳಲ್ಲಿ ಪ್ರಾರಂಭವಾದ ಈ ಪರಿಚಯ ಕಳೆದ ಆರು ವರ್ಷಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು. 

ಇದನ್ನೂ ಓದಿ:ವಿಜಯ್ ಹಜಾರೆ ಟೂರ್ನಿಯಲ್ಲಿ ಶತಕಗಳ ಗತವೈಭವ.. ಒಂದೇ ದಿನ 8 ಸೆಂಚುರಿಗಳು..!

ಪ್ರೀತಿಸಿದ ಸತ್ಯದೇವ್, ಈಗ ಬದಲಾಗಿದ್ದಾನೆ. ನನ್ನ ಮದ್ವೆ ಆಗ್ತೀನಿ ಎಂದು ಮೋಸ ಮಾಡಿದ್ದಾನೆ. ಇಷ್ಟು ದಿನ ಆಕೆಯ ಮನೆಯವರು ಬೆಂಬಲ ನೀಡಿದ್ದರು. ಇದೀಗ ಅವರೂ ಕೂಡ ನನ್ನ ದೂರು ಮಾಡಲು ಪ್ರಯತ್ನಿಸ್ತಿದ್ದಾರೆ ಎಂದು ಕಣ್ಣೀರು ಇಟ್ಟಿದ್ದಾರೆ. 

ಗೆಳೆಯ ನನ್ನನ್ನು ದೂರ ಮಾಡಲು ಪ್ರಯತ್ನಿಸ್ತಿದ್ದಾನೆ. ಅವನಿಗೆ ಬೇರೆ ಹುಡುಗಿಯೊಂದಿಗೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾನು ಅವನ ಪ್ರೀತಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಈಗ ಆತನ ಬಿಟ್ಟಿರು ಅಂದರೆ ಹೇಗೆ? ನನಗೆ ನ್ಯಾಯ ಬೇಕು ಅಂತಾ ಆಗ್ರಹಿಸಿದ್ದಾಳೆ. ಯುವತಿಯ ಕಣ್ಣೀರು, ಕೋಲಾಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

marriage
Advertisment