/newsfirstlive-kannada/media/media_files/2025/12/24/virat-kohli-rohit-sharma-2025-12-24-16-13-28.jpg)
ಇವತ್ತಿನಿಂದ ಆರಂಭವಾಗಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳ ಗತವೈಭವ ಮೇಳೈಯಿಸಿದೆ. ಒಂದರ ಹಿಂದೆ ಒಂದು ಶತಕಗಳು ದಾಖಲಾಗುತ್ತಿದ್ದು, ದಂತಕತೆಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ಭರ್ಜರಿ ಶತಕ ಬಾರಿಸಿದ್ದಾರೆ. ಒಟ್ಟು ಇಲ್ಲಿಯವರೆಗೆ 8 ಶತಕಗಳು ದಾಖಲಾಗಿವೆ.
ರೋಹಿತ್ ಶರ್ಮಾ 155 ರನ್ಸ್​..!
ಸಿಕ್ಕಿಂ ಎದುರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್, ಬರೋಬ್ಬರಿ 17 ವರ್ಷಗಳ ಬಳಿಕ ದೇಸಿಯ ಟೂರ್ನಿಯಲ್ಲಿ ಶತಕ ಬಾರಿಸಿದರು. 94 ಬಾಲ್​ಗಳನ್ನು ಎದುರಿಸಿದ ರೋಹಿತ್ 9 ಸಿಕ್ಸರ್, 18 ಬೌಂಡರಿಯೊಂದಿಗೆ 155 ರನ್​ಗಳಿಸಿದರು. ಆ ಮೂಲಕ ಮಹಾರಾಷ್ಟ್ರ ತಂಡವನ್ನು ಸಿಕ್ಕಿ ವಿರುದ್ಧ 8 ವಿಕೆಟ್​ಗಳಿಂದ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಹ್ಲಿ ಕೂಡ ವಿರಾಟ್ ರೂಪ
ಆಂಧ್ರ ಪ್ರದೇಶದ ವಿರುದ್ಧ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ಪರ ಬ್ಯಾಟ್ ಬೀಸಿರುವ ವಿರಾಟ್, 118 ರನ್​ಗಳಿಸಿ ಮುನ್ನುಗ್ಗುತ್ತಿದ್ದಾರೆ. ಕೊಹ್ಲಿ ಇಲ್ಲಿಯವರೆಗೆ 94 ಬಾಲ್​ಗಳನ್ನ ಎದುರಿಸಿದ್ದು, 3 ಸಿಕ್ಸರ್, 12 ಬೌಂಡರಿ ಬಾರಿಸಿದ್ದಾರೆ. ಆಂಧ್ರ ವಿರುದ್ಧ ಡೆಲ್ಲಿಗೆ ಗೆಲ್ಲಲು ಕೇಲವೇ ಕೆಲವು ರನ್​ಗಳು ಬೇಕಿದೆ.
ಇದನ್ನೂ ಓದಿ:ದಚ್ಚು-ಕಿಚ್ಚನ ವಿವಾದಕ್ಕೆ ರಕ್ಷಿತಾ ಕಾಮೆಂಟ್.. ಏನಂದ್ರು..?
ರಿಕ್ಕಿ ಭುಯಿ
ಆಂಧ್ರ ತಂಡದ ಆಟಗಾರ ರಿಕ್ಕಿ ಭುಯಿ ಡೆಲ್ಲಿ ವಿರುದ್ಧ ಭರ್ಜರಿ ಶತಕ ಬಾರಿಸಿದರು. 105 ಬಾಲ್​ನಲ್ಲಿ 122 ರನ್​ಗಳಿಸಿದರು. ಅವರು 7 ಸಿಕ್ಸರ್, 11 ಬೌಂಡರಿ ಬಾರಿಸಿದರು.
ಪಡಿಕ್ಕಲ್ ಶತಕ
ಕರ್ನಾಟಕ ತಂಡವು ಇವತ್ತು ಜಾರ್ಖಂಡ್​ ಎದುರಿಸುತ್ತಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ದೇವದತ್ ಪಡಿಕ್ಕಲ್ ಅವರು 104 ರನ್​ಗಳಿಸಿ ಆಡುತ್ತಿದ್ದಾರೆ. ಕರ್ನಾಟಕ ಗೆಲ್ಲಲು ಇನ್ನು 173 ರನ್​ಗಳ ಅಗತ್ಯ ಇದೆ.
ಇಶಾನ್ ಕಿಶನ್ ಶತಕ
ಜಾರ್ಖಂಡ್ ಪರ ಬ್ಯಾಟ್ ಬೀಸಿರುವ ಟೀಂ ಇಂಡಿಯಾ ಸ್ಟಾರ್ ಇಶಾನ್ ಕಿಶನ್ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿ ದಾಖಲೆ ಬರೆದರು. 14 ಸಿಕ್ಸರ್​ಗಳನ್ನು ಸಿಡಿಸಿದ ಕಿಶಾನ್, 39 ಬಾಲ್​ನಲ್ಲಿ 125 ರನ್​ಗಳಿಸಿದರು. ಇಶಾನ್ ಕಿಶನ್ 320ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದರು.
ಶತಕ ವೈಭವ್ ಸೂರ್ಯವಂಶಿ
ಇನ್ನೊಂದು ಪಂದ್ಯದಲ್ಲಿ ಅರುಣಾಚಲ ಪ್ರದೇಶ ಹಾಗೂ ಬಿಹಾರ್ ನಡುವೆ ಪೈಪೋಟಿ ನಡೆಯಿತು. ಈ ವೇಳೆ ಬಿಹಾರ ಪರ ಬ್ಯಾಟ್ ಬೀಸಿದ ವೈಭವ ಸೂರ್ಯವಂಶಿ, 84 ಬಾಲ್​ನಲ್ಲಿ 190 ರನ್​ಗಳಿಸಿದರು. 16 ಬೌಂಡರಿ ಹಾಗೂ 15 ಸಿಕ್ಸರ್​ಗಳನ್ನು ಸಿಡಿಸಿದರು. ಅದೇ ರೀತಿ ಬಿಹಾರ್ ತಂಡದ ಮತ್ತೊಬ್ಬ ಸ್ಟಾರ್, ಆಯುಷ್ ಕೂಡ 56 ಬಾಲ್​ನಲ್ಲಿ 116 ರನ್​ಗಳ ಕಾಣಿಕೆ ನೀಡಿದರು. ಇನ್ನು ಬಿಹಾರ್ ಕ್ಯಾಪ್ಟನ್ ಗಣಿ, 128 ರನ್​ಗಳಿ ನಾಟೌಟ್ ಆಗಿ ಉಳಿದರು. ಈ ಪಂದ್ಯದಲ್ಲಿ ಬಿಹಾರ್ 397 ರನ್​ಗಳ ಭರ್ಜರಿ ಗೆಲುವು ಕಂಡಿದೆ. ಮೊದಲು ಬ್ಯಾಟ್ ಮಾಡಿದ್ದ ಬಿಹಾರ್, 50 ಓವರ್​ನಲ್ಲಿ 574 ರನ್​ಗಳಿಸಿತ್ತು.
ಇದನ್ನೂ ಓದಿ: ಅಶ್ಲೀಲ ಕಾಮೆಂಟ್.. ಸಾಕ್ಷಿಗಳ ಸಮೇತ ಪೊಲೀಸರಿಗೆ ದೂರು ಕೊಟ್ಟ ದರ್ಶನ್ ಪತ್ನಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us