/newsfirstlive-kannada/media/media_files/2025/12/24/vijayalakshmi-1-2025-12-24-15-17-15.jpg)
ಬೆಂಗಳೂರು: ಸ್ಯಾಂಡಲ್​ವುಡನ್​​ನ ಫ್ಯಾನ್ಸ್ ವಾರ್ ಇನ್ನೊಂದು ಹಂತಕ್ಕೆ ಹೋಗಿದೆ. ಅಶ್ಲೀಲ ಕಾಮೆಂಟ್ ವಿಚಾರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅಶ್ಲೀಲ ಕಾಮೆಂಟ್ ಮಾಡಿದ 15 ಇನ್​ಸ್ಟಾ ID, 150ಕ್ಕೂ ಹೆಚ್ಚು ಕಾಮೆಂಟ್​ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ದೂರು ನೀಡಿದ್ದಾರೆ. ಫ್ಯಾನ್ಸ್ ವಾರ್ ಬೆನ್ನಲ್ಲೇ ಸುದೀಪ್ ಫ್ಯಾನ್ಸ್​ ಹೆಸರಲ್ಲಿ ವಿಜಯಲಕ್ಷ್ಮೀಯವರಿಗೆ ಅಶ್ಲೀಲ ಪದಗಳನ್ನ ಉಪಯೋಗಿಸಿ ಅಶ್ಲೀಲವಾಗಿ ಕಾಮೆಂಟ್ ಬರುತ್ತಿತ್ತು. ಈ ಹಿನ್ನಲೆ, ವಿಜಯಲಕ್ಷ್ಮೀ 15 ಇನ್​ಸ್ಟಾ ID, 150ಕ್ಕೂ ಹೆಚ್ಚು ಕಾಮೆಂಟ್​ ವಿರುದ್ಧ CCB ಜಂಟಿ ಆಯುಕ್ತ ಅಜಯ್ ಹಿಲೋರಿಗೆ ದೂರು ನೀಡಿದ್ದಾರೆ.
ಸಾಕ್ಷಿಗಳ ಜೊತೆ ಠಾಣೆ ಬಾಗಿಲು ಬಡಿದಿರುವ ವಿಜಯಲಕ್ಷ್ಮೀ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ ಕೂಡ ಹೀಗೆಯೇ ಮಾಡಿದ್ದರು. ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ದೂರು ನೀಡಿದ್ದರು. ಪರಿಣಾಮ ಕೆಲ ಕಿಡಿಗೇಡಿಗಳು ಜೈಲಿಗೆ ಹೋಗಿ ಬಂದಿದ್ದಾರೆ. ಈ ವಿಚಾರ ತಿಳಿದು ಕೆಲವರು ಮೊಂಡಾಟ ಪ್ರದರ್ಶನ ಮಾಡಿದ್ದಾರೆ. ಇವರ ವಿರುದ್ಧವೂ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ.
ಇದನ್ನೂ ಓದಿ: 45 Movie Review: ನಾಳೆ ತೆರೆಗೆ ಬರಲು ಸಿದ್ಧವಾಗಿರುವ 45 ಚಿತ್ರಕ್ಕೆ ನಾಯಕರು ಎಷ್ಟು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us