/newsfirstlive-kannada/media/media_files/2025/12/05/putin-plane-2-2025-12-05-08-01-36.jpg)
ವಿಶೇಷ ವಿಮಾನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬಂದಿದ್ದಾರೆ. ದೆಹಲಿಗೆ 2 ದಿನಗಳ ಭೇಟಿಗೆ ಬಂದಿರುವ ಪುಟಿನ್​ಗೆ ಆಪ್ತ ಸ್ನೇಹಿತ ಮೋದಿ ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.
ಪುಟಿನ್ ಭಾರತಕ್ಕೆ ಬಂದಿಳಿದ ಪುಟಿನ್ ವಿಮಾನದ ಬಗ್ಗೆ ಚರ್ಚೆ ನಡೆದಿದೆ. ಪುಟಿನ್ ಆಗಮಿಸಿದ್ದ ವಿಶೇಷ ವಿಮಾನದ ಮೇಲೆ "Россия" ಪದಗಳು ದಪ್ಪ ಕೆಂಪು ಅಕ್ಷರಗಳಲ್ಲಿದೆ. ಈ ಹಿಂದೆ ಟ್ರಂಪ್ ಭೇಟಿ ಮಾಡಲು ಅಲಸ್ಕಾಗೆ ಪ್ರಯಾಣಿಸಿದಾಗಲೂ, ಇದೇ ಪದಗಳು ಪುಟಿನ್ ವಿಮಾನದ ಮೇಲೆ ಬರೆಯಲಾಗಿತ್ತು. Россия ಎಂಬ ಪದದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆದಿದೆ. ಹಲವರು ಪುಟಿನ್ ವಿಮಾನದ ಮೇಲಿನ ಪದದ ಅರ್ಥ ಹುಡುಕುತ್ತಿದ್ದಾರೆ. ಪುಟಿನ್ ಅವರ ವಿಮಾನದ ಮೇಲಿನ "Россия" ಪದದ ನಿಜವಾದ ಅರ್ಥವೇನು? ಇಲ್ಲಿದೆ ವಿವರ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
/filters:format(webp)/newsfirstlive-kannada/media/media_files/2025/12/05/putin-plane-1-2025-12-05-08-04-00.jpg)
ವ್ಲಾಡಿಮಿರ್ ಪುಟಿನ್ ಈ ಹಿಂದೆ ಅಲಸ್ಕಾಗೆ ತೆರಳಿದ್ದಾಗಲೂ ಅವರ ವಿಮಾನದ ಮೇಲೆ ಬರೆದ Россия ಪದಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಅವರು ಅಲಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್​ ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಉಕ್ರೇನ್​ ಯುದ್ಧ ಕೊನೆಗೊಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಟ್ರಂಪ್ ಭೇಟಿಗೆ ಅಲಾಸ್ಕಾಗೆ ತೆರಳಿದ್ದ ಪುಟಿನ್​, ಅದೇ ವಿಮಾನದಲ್ಲಿಯೇ ಭಾರತಕ್ಕೆ ಬಂದಿದ್ದಾರೆ. ಇದು ರಷ್ಯಾ ಅಧ್ಯಕ್ಷರ ನೌಕಾಪಡೆಯ ವಿಶೇಷ ವಿಮಾನ. "Россия" ಅಂದರೆ ’ರಷ್ಯಾ’ ಎಂದರ್ಥ. ಈ ಅಕ್ಷರಗಳನ್ನು ಸಿರಿಲಿಕ್ ವರ್ಣಮಾಲೆಯಿಂದ ಪಡೆಯಲಾಗಿದೆ.
ಅರಮನೆಯಂತಿದೆ ವಿಮಾನ..
ಪುಟಿನ್ ಪ್ರಯಾಣಕ್ಕೆ 390 ಮಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ವಿಮಾನವಿದೆ. ಈ ವಿಮಾನ ಎಲ್ಲಾ ರೀತಿಯ ವಾಯು, ಭೂ ದಾಳಿಯಿಂದ ಬರುವ ಬೆದರಿಕೆಗಳನ್ನ ತಡೆದುಕೊಳ್ಳುವ ಶಕ್ತಿ ಹೊಂದಿದೆ. ಪ್ರಯಾಣದ ವೇಳೆ ಯಾವುದೇ ಬೆದರಿಕೆ ಎದುರಿಸಲು ಪುಟಿನ್ ವಿಮಾನವನ್ನು ರಷ್ಯಾದ ಯುದ್ಧ ವಿಮಾನಗಳು ಸುತ್ತುವರೆದಿರುತ್ತವೆ. ಈ ಐಷಾರಾಮಿ ವಿಮಾನದಲ್ಲಿ ಮತ್ತೊಂದು ವಿಶೇಷವಿದೆ. ಪುಟಿನ್ ವಿಮಾನದಲ್ಲಿನ ಚಿನ್ನದ ಲೇಪಿತ ಶೌಚಾಲಯದ ಆಸನ ಹೊಂದಿದೆ.
ಇದನ್ನೂ ಓದಿ: ಪುಟಿನ್‌ಗೆ ಭಗವದ್ಗೀತೆ ಕೊಟ್ಟು ಪ್ರಧಾನಿ ಮೋದಿ ಹೇಳಿದ್ದೇನು..?
/filters:format(webp)/newsfirstlive-kannada/media/media_files/2025/12/05/putin-plane-2025-12-05-08-04-14.jpg)
ಒಂದು ವರದಿಯ ಪ್ರಕಾರ ಪುಟಿನ್ ವಿಮಾನದ ಒಳಭಾಗ ಅರಮನೆಯಂತೆ ಇದೆ. ಇದು ಚರ್ಮದ ಪೀಠೋಪಕರಣಗಳನ್ನ ಹೊಂದಿದೆ. ಗೋಡಂಬಿ ಮರದ ತೆಳುವಾದ ಶೀಟ್ ಇದೆ. ಚಿನ್ನದ ಕೆತ್ತನೆಗಳನ್ನ ಸಹ ಹೊಂದಿದೆ. ಇದರಲ್ಲಿ ಖಾಸಗಿ ಕಚೇರಿಗಳು, ಸಮ್ಮೇಳನ ಕೊಠಡಿಗಳನ್ನ ಒಳಗೊಂಡಿದೆ. ಈ ವಿಮಾನದಲ್ಲಿ ವಿಶ್ರಾಂತಿ ಕೊಠಡಿಗಳು, ಮಿನಿ ಜಿಮ್, ಊಟದ ಹಾಲ್, ಬಾರ್, ಶವರ್, ವೈದ್ಯಕೀಯ ಕೊಠಡಿ ಸಹ ಒಳಗೊಂಡಿದೆ.
ಪುಟಿನ್ ರಷ್ಯಾದ ಇತರ ನಾಯಕರಿಗಿಂತ ಅತಿ ಹೆಚ್ಚು ಬಾರಿ ವಿಮಾನ ಪ್ರಯಾಣ ಮಾಡಿದ್ದಾರೆ. ಪುಟಿನ್ ಅವರ ಐಶಾರಾಮಿ ವಿಮಾನ ನಿರ್ಮಿಸಿದ್ದು ವೊರೊನಿಶ್​ ಏರ್​ಕ್ರಾಫ್ಟ್ ಪ್ರೊಡಕ್ಷನ್ ಅಸೋಸಿಯೇಷನ್ ನಿರ್ಮಿಸಿದೆ. ಈ ವಿಮಾನದ ಗರಿಷ್ಟ ವೇಗ ಗಂಟೆಗೆ 900 ಕಿಮೀ. ಇದರ ಇಂಧನ ಸಾಮರ್ಥ್ಯ 1.50 ಲಕ್ಷ ಲೀಟರ್. ಇದು ನಿರಂತರವಾಗಿ 13.500 ಕಿಮೀಗಳಷ್ಟು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.
ವಿಶೇಷ ವರದಿ: ವಿಶ್ವನಾಥ್ ಜಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us