/newsfirstlive-kannada/media/media_files/2025/12/05/modi-and-putin-7-2025-12-05-07-34-14.jpg)
ರಷ್ಯಾ ಜೊತೆ ವ್ಯಾಪಾರಕ್ಕೆ ಅಮೆರಿಕ ನಿರ್ಬಂಧ ವಿಧಿಸಿರುವುದರ ನಡುವೆಯೂ ಪುಟಿನ್ ಭಾರತಕ್ಕೆ ಭೇಟಿ ನೀಡಿರೋದು ವಿಶ್ವ ಮಟ್ಟದಲ್ಲಿ ಮಹತ್ವ ಪಡೆದಿದೆ. ಅದ್ರಲ್ಲೂ ಅಮೆರಿಕ ತೈಲ ಖರೀದಿ ವಿಚಾರದಲ್ಲಿ ಭಾರತದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಸುಂಕಾಸ್ತ್ರ ಹೇರಿದೆ. ಈ ಎಲ್ಲಾ ಬೆದರಿಕೆಗಳ ನಡುವೆಯೂ ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದು ಮಹತ್ವದ ಮಾತುಕತೆಗಳಿಗೆ ವೇದಿಕೆ ಸಜ್ಜಾಗಿದೆ.
ಇದನ್ನೂ ಓದಿ: ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್ : ಶಿಷ್ಟಾಚಾರ ಬದಿಗೊತ್ತಿ ಏರ್ ಪೋರ್ಟ್ ಗೆ ತೆರಳಿ ಸ್ವಾಗತಿಸಿದ ಮೋದಿ
/filters:format(webp)/newsfirstlive-kannada/media/media_files/2025/12/05/modi-and-putin-6-2025-12-05-07-40-58.jpg)
ಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿಳಿದಿದ್ದಾರೆ.. ನಿನ್ನೆ ರಾತ್ರಿ ವಿಶೇಷ ವಿಮಾನದ ಮೂಲಕ ದೆಹಲಿಯ ಪಾಲಂ ವಿಮಾನಕ್ಕೆ ಆಗಮಿಸಿದ ಪುಟಿನ್‌ನ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಸ್ವಾಗತಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸಾಂಸ್ಕೃತಿಕ ಕಲೆಯಾದ ಭರತ ನಾಟ್ಯದ ಮೂಲಕ ರಷ್ಯಾ ಅಧ್ಯಕ್ಷನನ್ನು ಸ್ವಾಗತಿಸಲಾಯ್ತು. ನಂತರ ಏರ್‌ಪೋರ್ಟ್‌ನಿಂದ ಪ್ರಧಾನಿ ಮೋದಿ ಮತ್ತು ಪುಟಿನ್ ಒಂದೇ ಕಾರಿನಲ್ಲಿ ತೆರಳಿದ್ರು.
ಇದನ್ನೂ ಓದಿ:ಕ್ರಿಕೆಟರ್ ರಿಚಾ ಘೋಷ್‌ಗೆ ಡಿವೈಎಸ್ಪಿ ಹುದ್ದೆ : ಸಿಲಿಗುರಿ ಎಸಿಪಿ ಆಗಿ ಅಧಿಕಾರ ಸ್ವೀಕಾರ
/filters:format(webp)/newsfirstlive-kannada/media/media_files/2025/12/05/modi-and-putin-5-2025-12-05-07-41-43.jpg)
ಪುಟಿನ್‌ಗೆ ಭಗವದ್ಗೀತೆ ಕೊಟ್ಟ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವ್ರ ಅಧಿಕೃತ ನಿವಾಸಕ್ಕೆ ಪುಟಿನ್ ಭೇಟಿ ಕೊಟ್ಟಿದ್ರು. ರಷ್ಯಾ ಅಧ್ಯಕ್ಷರನ್ನ ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಿ ಮೋದಿ ಭಗವದ್ಗೀತೆ ಪುಸ್ತಕವನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಮೋ, ರಷ್ಯಾದ ಅಧ್ಯಕ್ಷರಿಗೆ ರಷ್ಯನ್ ಭಾಷೆಯಲ್ಲಿ ಭಾಷಾಂತರಗೊಂಡಿರುವ ಭಗವದ್ಗೀತೆಯನ್ನು ನೀಡಲಾಯಿತು. ಗೀತೆಯ ಬೋಧನೆಗಳು ಪ್ರಪಂಚದಲ್ಲಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ. ನಂತರ ಮೋದಿ ನಿವಾಸದಲ್ಲಿಯೇ ಖಾಸಗಿ ಭೋಜನ ಕೂಟವನ್ನೂ ಆಯೋಜಿಸಲಾಗಿತ್ತು. ಇಂದು ಭಾರತ-ರಷ್ಯಾ 23ನೇ ವಾರ್ಷಿಕ ಶೃಂಗಸಭೆ ನಡೆಯಲಿದ್ದು, ಇದರ ಜೊತೆಗೆ ಹಲವು ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ.
ಇದನ್ನೂ ಓದಿ: ಚಿನ್ನದ ಮೇಲೆ ಸಾಲ, ಪರ್ಸನಲ್ ಲೋನ್ -ಯಾವುದು ಬೆಸ್ಟ್​..?
Presented a copy of the Gita in Russian to President Putin. The teachings of the Gita give inspiration to millions across the world.@KremlinRussia_Epic.twitter.com/D2zczJXkU2
— Narendra Modi (@narendramodi) December 4, 2025
ಭಾರತಕ್ಕೆ ಬಂದ ರಷ್ಯಾಧಿಪತಿ..!
- ಇಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ
- ರಷ್ಯಾ ಅಧ್ಯಕ್ಷ ಪುಟಿನ್‌ಗೆ ತ್ರಿಪಡೆಯಿಂದ ಗೌರವ ವಂದನೆ ಸಲ್ಲಿಕೆ
- ಬೆ.11:30ಕ್ಕೆ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕ್ಕೆ ನಮನ
- ಬೆ. 11:50ಕ್ಕೆ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ
- 13:50 ಕ್ಕೆ ಪ್ರಧಾನಿ ಮೋದಿ ಮತ್ತು ಪುಟಿನ್ ಜಂಟಿ ಸುದ್ದಿಗೋಷ್ಠಿ
- ಮಧ್ಯಾಹ್ನ ಭಾರತ ಮಂಟಪ ಕಾರ್ಯಕ್ರಮದಲ್ಲಿ ನಾಯಕರಿಬ್ಬರು ಭಾಗಿ
- ರಾತ್ರಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಔತಣಕೂಟದಲ್ಲಿ ಭಾಗಿ
ಪುಟಿನ್ ಭಾರತ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಅಮೆರಿಕದಿಂದ ಹೆಚ್ಚುತ್ತಿರುವ ತೆರಿಗೆ ಸೇರಿದಂತೆ ಇತರೆ ಒತ್ತಡದ ಹೊರತಾಗಿಯೂ ರಷ್ಯಾದೊಂದಿಗಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಇದು ಸಹಕಾರಿಯಾಗಲಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us