/newsfirstlive-kannada/media/media_files/2025/09/05/donal-trump-2025-09-05-21-53-50.jpg)
ಸುಂಕ ಯುದ್ಧದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಜೊತೆಗಿನ ಪ್ರಸ್ತುತ ಸಂಬಂಧದ ಕುರಿತು ದೊಡ್ಡ ಹೇಳಿಕೆ ನೀಡಿದ್ದಾರೆ. ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಬರೆದುಕೊಂಡಿರುವ ಟ್ರಂಪ್.. ಅತ್ಯಂತ್ರ ಕ್ರೂರ ಮತ್ತು ಕರಾಳ ಚೀನಾಗಾಗಿ ನಾವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಜೊತೆಗೂಡಿ ಅವರು ಬಹುಕಾಲ ಸಮೃದ್ಧಿಯಿಂದ ಇರಲಿ ಎಂದಿದ್ದಾರೆ.
ಹೀಗೆ ಬರೆದುಕೊಂಡಿರುವ ಟ್ರಂಪ್, ಎಸ್ಸಿಒ ಶೃಂಗಸಭೆಯಲ್ಲಿ ಮೋದಿ, ಪುಟಿನ್ ಮತ್ತು ಜಿನ್‌ಪಿಂಗ್ ಒಟ್ಟಿಗೆ ಹೆಜ್ಜೆ ಹಾಕ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಆ ಮೂಲಕ ಟ್ರಂಪ್‌ಗೆ ಕೆಟ್ಟ ಮೇಲೆ ಬುದ್ಧಿ ಬಂತಾ ಎಂಬ ಪ್ರಶ್ನೆ ಶುರುವಾಗಿದೆ.
ಟ್ರಂಪ್‌ಗೆ ಟಕ್ಕರ್..!
ಇತ್ತೀಚೆಗೆ ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆಯ (SCO) ಶೃಂಗಸಭೆ ನಡೆಯಿತು. ಈ ವೇಳೆ ಮೋದಿ, ಪುಟಿನ್, ಜಿನ್‌ಪಿಂಗ್ ಸೇರಿದಂತೆ ಅನೇಕ ವಿಶ್ವದ ನಾಯಕರು ಒಗ್ಗಟ್ಟು ಪ್ರದರ್ಶನ ನೀಡಿದರು. ಈ ಶೃಂಗಸಭೆಯನ್ನು ಟ್ರಂಪ್ ಅವರ ಕಠಿಣ ಸುಂಕಗಳ ವಿರುದ್ಧ ಬಲವಾದ ಸಂದೇಶ ಎಂದು ಪರಿಗಣಿಸಲಾಗುತ್ತಿದೆ. ಶೃಂಗಸಭೆಯಲ್ಲಿ ಮೋದಿ, ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ಭೇಟಿ ಕ್ಷಣಗಳು ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ಇಡೀ ಪ್ರಪಂಚದ ಗಮನ ಸೆಳೆದಿದೆ.
SCO ಶೃಂಗಸಭೆ ನಂತರ ಟ್ರಂಪ್ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಏಕಪಕ್ಷೀಯ ದುರಂತ ಎಂದು ಕರೆದಿದ್ದರು. ‘ಅಮೆರಿಕನ್ ಕಂಪನಿಗಳು ಭಾರತದಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಭಾರತವು ರಷ್ಯಾದಿಂದ ಬೃಹತ್ ಪ್ರಮಾಣದಲ್ಲಿ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತದೆ. ಆದರೆ ಅಮೆರಿಕದಿಂದ ಕಡಿಮೆ. ಭಾರತ ಈಗ ತನ್ನ ಸುಂಕಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಮುಂದಾಗಿದೆ. ಆದರೆ ಅದನ್ನ ವರ್ಷಗಳ ಹಿಂದೆಯೇ ಮಾಡಬೇಕಾಗಿತ್ತು ಎಂದಿದ್ದರು.
ಇದನ್ನೂ ಓದಿ:ದಾಸನಿಗಿಲ್ಲ ಜೈಲಲ್ಲಿ ರಾಜಾತಿಥ್ಯ.. ಅಧಿಕಾರಿಗಳಿಗೆ ಕಾಡಿದೆ ಅದೊಂದು ಭಯ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ