/newsfirstlive-kannada/media/media_files/2025/08/15/darshan_pavitra-1-2025-08-15-11-53-57.jpg)
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರೋ ನಟ ದರ್ಶನ್ ಬಳ್ಳಾರಿ ಜೈಲು ಭವಿಷ್ಯ ಸೆಪ್ಟೆಂಬರ್ 9ಕ್ಕೆ ನಿರ್ಧಾರ ಆಗಲಿದೆ. ಈ ಮಧ್ಯೆ ದಾಸನಿಗೆ ಜೈಲಿನ ಅಸಲಿ ದರ್ಶನ ಆಗ್ತಿದ್ದು ಹೆಚ್ಚುವರಿ ಸೌಲಭ್ಯ ಕೊಡಲು ಜೈಲಾಧಿಕಾರಿಗಳೇ ಹಿಂದೇಟು ಹಾಕ್ತಿದ್ದಾರೆ. ಯಾಕೆ ಗೊತ್ತಾ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸ್ತಿದ್ದಾರೆ.. ಕೆಲ ದಿನಗಳಲ್ಲೇ ಟ್ರಯಲ್ ಕೋರ್ಟ್ನಲ್ಲಿ ವಿಚಾರಣೆ ಆರಂಭ ಆಗಲಿದ್ದು ಬಳ್ಳಾರಿಗೆ ಶಿಫ್ಟ್ ಆಗ್ತಾರಾ ಅಥವಾ ಇಲ್ವಾ ಅನ್ನೋದು ಕುತೂಹಲ ಮೂಡಿಸಿದೆ. ಈ ಮಧ್ಯೆ ಜೈಲಿನಲ್ಲಿ ಸೌಕರ್ಯ ಸಿಗದೇ ನಟ ದರ್ಶನ್ ವಿಲವಿಲ ಒದ್ದಾಡುವಂತಾಗಿದೆ.
ಇದನ್ನೂ ಓದಿ:5.2 ಕೆ.ಜಿ ತೂಕದ ‘ಛೋಟಾ ಭೀಮ’ ಜನನ.. ಅಪರೂಪದಲ್ಲಿಯೇ ಅಪರೂಪದ ಕೇಸ್ ಇದು!
ನಟ ದರ್ಶನ್ಗೆಗೆ ಪರಪ್ಪನ ಅಗ್ರಹಾರ ಜೈಲು ನರಕವಾಗಿ ಪರಿಣಮಿಸಿದೆ. ಹೀಗಾಗಿ ಹಾಸಿಗೆ, ದಿಂಬು ಹಾಗೂ ಮನೆ ಊಟಕ್ಕೆ ಅನುಮತಿ ಕೋರಿ ನ್ಯಾಯಾಲಯದಲ್ಲಿ ವಿಚಾರಣೆ ನಡೀತಿದ್ದು ಇನ್ನಷ್ಟೇ ತೀರ್ಮಾನ ಆಗ್ಬೇಕಿದೆ.. ಈ ನಡುವೆ ನಟ ದರ್ಶನ್ಗೆ ರಾಜಾತಿಥ್ಯ ಸಿಗುತ್ತಾ, ಇಲ್ವಾ ಅನುಮಾನ ಮೂಡಿಸಿದೆ.. ಈ ಹಿಂದೆಯೂ ಜೈಲಿನ ನಿಯಮದ ಪ್ರಕಾರ ಸೌಕರ್ಯ ನೀಡಿದ್ರೂ ಕೈದಿಗಳು ಅದನ್ನು ದುರುಪಯೋಗ ಪಡಿಸಿಕೊಂಡಿದ್ದರು. ಮತ್ತೊಂದೆಡೆ ದರ್ಶನ್ಗೆ ಸೌಲಭ್ಯ ನೀಡಿದ್ದಕ್ಕೆ ಗರಂ ಆಗಿದ್ದ ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ಅಮಾನತಿಗೆ ಎಚ್ಚರಿಕೆ ಕೂಡ ನೀಡಿತ್ತು.. ಹೀಗಾಗಿ ನಟ ದರ್ಶನ್ಗೆ ಜೈಲಾಧಿಕಾರಿಗಳು ಸೌಕರ್ಯ ಕೊಡಲು ಹಿಂದೇಟು ಹಾಕ್ತಿದ್ದಾರೆ..
ದಾಸನಿಗಿಲ್ಲ ರಾಜಾತಿಥ್ಯ!
- ದಪ್ಪನೆ ಹಾಸಿಗೆಗಳಲ್ಲಿ ಮೊಬೈಲ್, ಸಿಮ್ ಕಾರ್ಡ್ ಇಡುವ ಸಾಧ್ಯತೆ
- ಈ ಹಿಂದೆ ಹಲವರ ಬಳಿ ಮೊಬೈಲ್ ಸಿಮ್ ಪತ್ತೆ ಹಚ್ಚಿ ಪೊಲೀಸರು
- ಜೈಲಿನ ಮೇಲೆ ಸಿಸಿಬಿ ದಾಳಿಯ ವೇಳೆಯೂ ಮೊಬೈಲ್ಗಳು ಪತ್ತೆ
- ಹಾಸಿಗೆ, ದಿಂಬುಗಳಲ್ಲಿ ಮೊಬೈಲ್ಗಳನ್ನು ಅಡಗಿಸಿಡುವ ಆತಂಕ
- ಹಳೆಯ ಘಟನೆಗಳಿಂದ ಆರೋಪಿ ದರ್ಶನ್ ಮೇಲೂ ಪರಿಣಾಮ
- ಅಲ್ಲದೇ ರಾಜಾತಿಥ್ಯ ವಿಚಾರವಾಗಿ ಸುಪ್ರೀಂಕೋರ್ಟ್ ತರಾಟೆ
- ಸೆಲೆಬ್ರಿಟಿ ಅಂತಾ ವಿಶೇಷ ಫೆಸಿಲಿಟಿ ಕೊಡಬಾರದು ಅಂತ ಆದೇಶ
- ಅಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ
- ಆದೇಶದ ಮಧ್ಯೆಯೂ ವ್ಯವಸ್ಥೆ ಮಾಡಿದ್ರೆ ಕುತ್ತು ಬರುವ ಆತಂಕ
- ದರ್ಶನ್ಗೆ ಸವಲತ್ತು ಕೊಟ್ರೆ ಉಳಿದ ಕೈದಿಗಳು ಕೇಳುವ ಸಾಧ್ಯತೆ
- ಇದೇ ಕಾರಣ ದರ್ಶನ್ಗೆ ಬೆಡ್ಶೀಟ್, ಹಾಸಿಗೆ ನೀಡಲು ಹಿಂದೇಟು
ಒಂದ್ಕಡೆ ಸುಪ್ರೀಂ ಕೋರ್ಟ್ ಭಯ.. ಮತ್ತೊಂದೆಡೆ ಉಳಿದ ಕೈದಿಗಳು ಸೌಲಭ್ಯ ಕೇಳುವ ಪರಿಸ್ಥಿತಿ ಇದೆ, ಬೆನ್ನುನೋವು ಸೇರಿ ಇತರೆ ಆರೋಗ್ಯ ಸಮಸ್ಯೆಗಳಿದ್ದು ಹಾಸಿಗೆ, ತಲೆದಿಂಬು ಇಲ್ಲದೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಜೈಲೂಟ ಕೂಡ ದೇಹಕ್ಕೆ ಒಗ್ಗದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇನೆ. ಹೀಗಾಗಿ ಕನಿಷ್ಠ ಸೌಲಭ್ಯ ನೀಡ್ಬೇಕು ಅಂತ ದರ್ಶನ್ ಮನವಿ ಮಾಡಿದ್ದಾರೆ.. ಸದ್ಯ ಸೆಪ್ಟೆಂಬರ್ 9ಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ಅಥವಾ ಇಲ್ವಾ ಅನ್ನೋ ತೀರ್ಪು ಹೊರಬೀಳಲಿದೆ.. ಆವತ್ತೇ ಜೈಲಲ್ಲಿ ಸವಲತ್ತು ನೀಡುವ ಕುರಿತು ಕೋರ್ಟ್ ತೀರ್ಪು ನೀಡುವ ಸಾಧ್ಯತೆ ಇದೆ, ಅದೇನೇ ಇರಲಿ, ಬಣ್ಣದ ಲೋಕದಲ್ಲಿ ಕೋಟ್ಯಂತರ ಅಭಿಮಾನಿಗಳ ದಾಸನ ಪರಿಸ್ಥಿತಿ ಮಾತ್ರ ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.
ಇದನ್ನೂ ಓದಿ:ಯಲಹಂಕ ಬಳಿ ಹೈಟೆಕ್ ಟೌನ್‌ಶಿಪ್‌ಗೆ ಸಚಿವ ಸಂಪುಟ ಅನುಮೋದನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ