ಸಾಮಾನ್ಯ ಜನರಿಗೆ ರಿಲೀಫ್! ಬಟ್ಟೆ, ಮೊಬೈಲ್, ಔಷಧ ಅಗ್ಗ.. ಯಾವುದೆಲ್ಲ ದುಬಾರಿ..?

ವಿಕಸಿತ ಭಾರತ 2047’ ಗುರಿಯೊಂದಿಗೆ ಮಂಡಿಸಲಾದ ಈ ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಹಲವು ಆಶಾದಾಯಕ ಘೋಷಣೆಗಳನ್ನು ಮಾಡಲಾಗಿದ್ದು, ದಿನನಿತ್ಯದ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ. ತೆರಿಗೆ ಬದಲಾವಣೆಯಿಂದಾಗಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.

author-image
Ganesh Kerekuli
union budget and cheap and increased
Advertisment

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ.

‘ವಿಕಸಿತ ಭಾರತ 2047’ ಗುರಿಯೊಂದಿಗೆ ಮಂಡಿಸಲಾದ ಈ ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಹಲವು ಆಶಾದಾಯಕ ಘೋಷಣೆಗಳನ್ನು ಮಾಡಲಾಗಿದ್ದು, ದಿನನಿತ್ಯದ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ. ತೆರಿಗೆ ಬದಲಾವಣೆಯಿಂದಾಗಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಬಜೆಟ್‌ನಲ್ಲಿ ಸುಂಕ ಕಡಿತದ ಹಿನ್ನೆಲೆಯಲ್ಲಿ ಈ ಕೆಳಗಿನ ವಸ್ತುಗಳ ಬೆಲೆ ಇಳಿಕೆಯಾಗಲಿದೆ. 

ಇದನ್ನೂ ಓದಿ: ಆದಾಯ ತೆರಿಗೆದಾರರಿಗೆ ಸಿಹಿಸುದ್ದಿ! ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ, ಯಾರಿಗೆ ಎಷ್ಟು ಲಾಭ?

ಯಾವುದು ಅಗ್ಗ? 

  • ಔಷಧಗಳು: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 17 ಪ್ರಮುಖ ಔಷಧಗಳು ಮತ್ತು ಸಕ್ಕರೆ ಕಾಯಿಲೆ (Diabetes) ಔಷಧಗಳು ಅಗ್ಗವಾಗಲಿವೆ.
  • ಲೆದರ್ ಮತ್ತು ಪಾದರಕ್ಷೆ: ಚರ್ಮದ ಶೂಗಳು ಹಾಗೂ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ
  • ಬಟ್ಟೆ: ಬಟ್ಟೆ ಮತ್ತು ಸಿದ್ಧ ಉಡುಪುಗಳ ರಫ್ತಿಗೆ ಉತ್ತೇಜನ ನೀಡಲಾಗಿದ್ದು, ಇವುಗಳ ಬೆಲೆ ಇಳಿಕೆಯಾಗಲಿದೆ
  • ಎಲೆಕ್ಟ್ರಾನಿಕ್ಸ್: ಮೈಕ್ರೋವೇವ್ ಓವನ್‌ಗಳು ಇನ್ಮುಂದೆ ಕಡಿಮೆ ಬೆಲೆಗೆ ಸಿಗಲಿವೆ
  • ವಾಹನ ಮತ್ತು ಇಂಧನ: ಎಲೆಕ್ಟ್ರಿಕ್ ವಾಹನಗಳ (EV) ಬ್ಯಾಟರಿಗಳು ಮತ್ತು ಬಯೋಗ್ಯಾಸ್ ಮಿಶ್ರಿತ ಸಿಎನ್‌ಜಿ (CNG) ಅಗ್ಗವಾಗಲಿದೆ
  • ಪ್ರವಾಸ ಮತ್ತು ವಿಮಾನ: ವಿದೇಶಿ ಪ್ರಯಾಣದ ವೆಚ್ಚ ತಗ್ಗಲಿದೆ ಹಾಗೂ ವಿಮಾನ ತಯಾರಿಕೆಗೆ ಸಂಬಂಧಿಸಿದ ಬಿಡಿಭಾಗಗಳ ಬೆಲೆ ಇಳಿಕೆಯಾಗಲಿದೆ
  • ಸೌರಶಕ್ತಿ: ಸೋಲಾರ್ ಪ್ಯಾನಲ್ ಮತ್ತು ಸೌರಶಕ್ತಿಗೆ ಸಂಬಂಧಿಸಿದ ಉಪಕರಣಗಳು ಅಗ್ಗವಾಗಲಿವೆ.
  • ಸೀಫುಡ್
  • ವಿದೇಶಿ ಟೂರ್ ಪ್ಯಾಕೇಜ್
  • ವಿದೇಶಿ ಶಿಕ್ಷಣ ಖರ್ಚುವೆಚ್ಚಗಳು
  • ಸ್ಮಾರ್ಟ್​ಫೋನ್ಸ್​
  • EV ಬ್ಯಾಟರಿಸ್
  • ಕ್ರೀಡಾ ಸಾಮಗ್ರಿಗಳು
  • ಲಿಥಿಯಂ ಬ್ಯಾಟರಿ ಘಟಕಗಳು
  • ಪರಮಾಣು ವಿದ್ಯುತ್ ಯೋಜನೆಗಳಿಗೆ ಆಮದು ಮಾಡಿಕೊಳ್ಳುವ ಸರಕುಗಳು

ಯಾವುದು ದುಬಾರಿ? 

  • ಮದ್ಯ: ಮದ್ಯದ ಮೇಲಿನ ಸುಂಕ ಹೆಚ್ಚಳದಿಂದಾಗಿ ಮದ್ಯ ಪ್ರಿಯರಿಗೆ ಬಿಸಿ ತಟ್ಟಲಿದೆ
  • ಖನಿಜಗಳು ಮತ್ತು ಸ್ಕ್ರ್ಯಾಪ್: ವಿವಿಧ ಖನಿಜಗಳು (Minerals) ಮತ್ತು ಸ್ಕ್ರ್ಯಾಪ್‌ಗಳ ಬೆಲೆ ಏರಿಕೆಯಾಗಲಿದೆ
  • ಸಿಗರೇಟ್
  • ಸಿಗರೇಟ್ ಮತ್ತು ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳು
  • ಆದಾಯ ತೆರಿಗೆಯನ್ನು ತಪ್ಪಾಗಿ ವರದಿ ಮಾಡುವುದು (Misreporting income tax)
  • ಚರ ಆಸ್ತಿಗಳನ್ನು ಬಹಿರಂಗಪಡಿಸದಿರುವುದು (Non-disclosure of movable assets)
  • ಷೇರು ಆಯ್ಕೆಗಳು ಮತ್ತು ಭವಿಷ್ಯದ ವ್ಯಾಪಾರ (Stock options and futures trading)

ವಿಕಸಿತ ಭಾರತ 2047ಕ್ಕೆ ಬುನಾದಿ

ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಅಮೆರಿಕದ ಹೆಚ್ಚಿನ ಸುಂಕದ (High US Tariffs) ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಯನ್ನು ಸದೃಢಗೊಳಿಸಲು ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಈ ಬಜೆಟ್ ಹೊಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಬಾರಿಯ ಬಜೆಟ್‌ನಲ್ಲಿ ಉತ್ಪಾದನಾ ವಲಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಾಮಾನ್ಯ ಜನರ ಜೀವನ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸಲಾಗಿದೆ.

ಇದನ್ನೂ ಓದಿ:Union Budget: ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯಿದೆ ಜಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nirmala Sitharaman union budget Kitchen Budget budget 2026 union budget 2026 expectations
Advertisment