/newsfirstlive-kannada/media/media_files/2025/11/19/delhi-incident-9-2025-11-19-07-53-36.jpg)
ನವೆಂಬರ್ 10 ರಂದು ದೆಹಲಿ ಆತ್ಮ*ತ್ಯಾ ಕಾರು ಸ್ಪೋಟದಲ್ಲಿ ಭಾಗಿಯಾದ ವೈಟ್ ಕಾಲರ್ ಉಗ್ರರು ಭಯಾನಕ ದಾಳಿಗೆ ಸಂಚು ಮಾಡಿದ್ರು ಅನ್ನೋ ಆಘಾತಕಾರಿ ವಿಚಾರ ಬಯಲಾಗಿದೆ. ಕಾರು ಸ್ಫೋ*ಿಸುವ ಮುನ್ನ ಹಮಾಸ್ ಉಗ್ರರಿಂದ ಪ್ರೇರೇಪಿತರಾಗಿ ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಲು ಸಂಚು ಹೂಡಿದ್ರು ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಮಾತ್ರವಲ್ಲದೇ ರಾಕೆಟ್‌ಗಳ ಮೂಲಕ ಬ್ಲಾಸ್ಟ್ ನಡೆಸಲು ನಡೆಸಲು ಸಜ್ಜಾಗಿದ್ದರು ಎನ್ನಲಾಗಿದೆ. ಹಮಾಸ್ ರೀತಿ ದೆಹಲಿ ಸೇರಿ ಹಲವು ಕಡೆ ಏಕಕಾಲಕ್ಕೆ ಸ್ಫೋ* ಮಾಡಲು ಆತ್ಮ*ತ್ಯಾಹತ್ಯಾ ಬಾಂಬರ್ ಉಮರ್ ಉನ್ ನಬಿ, ಶೂ ಮೂಲಕ ಯೋಚಿಸಿದ್ದ ಬಗ್ಗೆ ಹಲವು ಸಾಕ್ಷ್ಯಗಳು ದೊರೆತಿವೆ.
ಇದನ್ನೂ ಓದಿ: ಸಂಪುಟ ಪುನಾರಚನೆಗೆ ಸಿಎಂ ಸಿದ್ದರಾಮಯ್ಯ ಬಿಗಿ ಪಟ್ಟು, ಆದರೆ..!
ಆತ್ಮ*ತ್ಯಾ ಬಾಂಬರ್ ಉಮರ್ ಉನ್ ನಬಿಗೆ ಸಾಥ್​ ನೀಡಿದ್ದ ಹಲವರನ್ನು ಎನ್​ಐಎ ಬಂಧಿಸಿದೆ. ಈ ಬೆನ್ನಲ್ಲೇ ನಬಿ ಜೊತೆ ಕೆಲಸ ಮಾಡಿದ್ದ ಜಮ್ಮು ಕಾಶ್ಮೀರದ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್​ನನ್ನ ಶ್ರೀನಗರದಲ್ಲಿ ಎನ್‌ಐಎ ಬಂಧಿಸಿದೆ. ಈ ಜಾಸಿರ್ ವಾನಿ, ಸ್ಫೋ*ಕ್ಕೆ ಮುಂಚಿತವಾಗಿ ಡ್ರೋನ್‌ಗಳನ್ನು ಮಾರ್ಪಡಿಸಿ ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಿದ್ದ. ಕ್ಯಾಮೆರಾಗಳ ಜೊತೆ ಭಾರವಾದ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ದೊಡ್ಡ ಬ್ಯಾಟರಿಗಳನ್ನು ಅಳವಡಿಸಲಾದ ಶಕ್ತಿಶಾಲಿ ಡ್ರೋನ್‌ಗಳನ್ನು ತಯಾರಿಸಲು ಡ್ಯಾನಿಶ್ ಪ್ರಯತ್ನಿಸಿದ್ದ.
ಜಾವೆದ್ ಅಹ್ಮದ್ ಸಿದ್ಧಿಕಿ ಬಂಧನ
ಇನ್ನು ದೆಹಲಿಯ ಬಾಂಬ್ ಸ್ಫೋ* ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಅಲ್ ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಎಂಬಾತನನ್ನು ಇ.ಡಿ ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ಭಯೋತ್ಪಾದನಾ ಹಣಕಾಸು ಸಂಬಂಧಿ ಹಣ ವರ್ಗಾವಣೆ ಸಂಬಂಧಿಸಿದಂತೆ ಇಡಿ ಕಾರ್ಯಾಚರಣೆ ನಡೆಸಿತ್ತು. ಸ್ಫೋ* ಸಂಬಂಧ ವೈದ್ಯರನ್ನು ಬಂಧಿಸಿದ ನಂತರ ಫರಿದಾಬಾದ್‌ನ ಧೌಜ್‌ನಲ್ಲಿರುವ ಅಲ್ ಫಲಾಹ್ ವಿವಿ ಪರಿಶೀಲನೆಗೆ ಒಳಪಟ್ಟಿದೆ. ಅಲ್ಲದೆ ಉಮರ್ ಉನ್ ನಬಿ ಇದೇ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿದ್ದ ಅನ್ನೋದು ಬಯಲಾಗಿದೆ. ಅಲ್ ಫಲಾಹ್ ಗ್ರೂಪ್‌ಗೆ ಸಂಬಂಧಿಸಿದಂತೆ ವಿವಿ ಆವರಣದಲ್ಲಿ ನಡೆಸಿದ ಶೋಧ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದಲ್ಲಿ ಬಂಧಿಸಲಾಗಿದೆ.
ಒಟ್ಟಾರೆ ದೆಹಲಿ ಸ್ಫೋ* ಸಂಬಂಧ ಎನ್​ಐಎ ಅಧಿಕಾರಿಗಳು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದೆ. ಈ ನಡುವೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯದ ಸಂಸ್ಥಾಪಕನೇ ಬಂಧನಕ್ಕೊಳಗಾಗಿದ್ದು ದುರಂತ.
ಇದನ್ನೂ ಓದಿ: ಕೇರಳದ ಶಬರಿಮಲೆ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿ : ಮಿದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರ ವಹಿಸಲು ಸೂಚನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us