/newsfirstlive-kannada/media/post_attachments/wp-content/uploads/2025/07/SIDDU-DK.jpg)
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್​ ಹೈಕಮಾಂಡ್​ ಹಸಿರು ನಿಶಾನೆ ತೋರಿಸಿದೆ. ಆದ್ರೆ, ‘ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು‘ ಎಂಬ ಗಾದೆಯಂತೆ ಆಗಿದೆ ರಾಜ್ಯ ಕಾಂಗ್ರೆಸ್​​ ಪಾಡು. ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆ ಆಗಬೇಕು ಅಂದ್ರೆ ಅತ್ತ ಡಿಸಿಎಂ ಡಿಕೆಶಿಯಿಂದ ವಿರೋಧ ವ್ಯಕ್ತವಾಗಿದೆ. ಆದ್ರೆ ಶತಾಯಗತಾಯ ಸಿಎಂ ಮಾತ್ರ ಸಚಿವ ಸಂಪುಟ ಪುನಾರಚನೆಗೆ ಹಠ ತೊಟ್ಟಂತಿದೆ.
ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ವರಿಷ್ಠರು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಏನಾದ್ರೂ ಮಾಡಿ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಸಂಪುಟ ಪುನಾರಚನೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಸರ್ಕಸ್​ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಿಎಂ ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್​​ ಗಾಂಧಿ ಜೊತೆ ಮಾತುಕತೆ ಸಹ ನಡೆಸಿದ್ದಾರೆ. ಸಿಎಂ ಪುನಾರಚನೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ರೆ, ಡಿಸಿಎಂ ಮಾತ್ರ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದು ಸೈಲೆಂಟ್​​ ಸೂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಜಗ್ಗಾಟದಲ್ಲಿ ಗೆಲ್ಲೋಱರು?
ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿ ಸಚಿವ ಸಂಪುಟ ಪುನಾರಚನೆಗೆ ಸಾಕಷ್ಟು ಸರ್ಕಸ್​ ಮಾಡಿ ವರಿಷ್ಠರಿಂದ ಒಪ್ಪಿಗೆ ಪಡೆದು ಬಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಜೊತೆ ಸಿಎಂ ಚರ್ಚೆ ಮಾಡಿ ಸಂಪುಟ ಪುನಾರಚನೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅತ್ತ ಸಂಪುಟ ಪುನಾರಚನೆಗೆ ಡಿಕೆಶಿಯಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಾಂಗ್ರೆಸ್​​ ಹೈಕಮಾಂಡ್​​ ಮತ್ತೆ ಸಿಎಂ ಹಾಗೂ ಡಿಸಿಎಂನ್ನ ದೆಹಲಿಗೆ ಕರೆಸಲು ಸಜ್ಜಾಗಿದೆ ಎನ್ನಲಾಗ್ತಿದೆ.
ಇದನ್ನೂ ಓದಿ:ರಾಜ್ಯ ಕ್ಯಾಬಿನೆಟ್ ಪುನರ್ ರಚನೆ: AICC ಅಧ್ಯಕ್ಷ ಖರ್ಗೆ ಭೇಟಿಯಾಗಿ ಚರ್ಚಿಸಿದ ಸಿಎಂ ಸಿದ್ದರಾಮಯ್ಯ
ಸಿದ್ದು ಸಂಪುಟ ಸರ್ಕಸ್
- ದೆಹಲಿಯಲ್ಲಿ ಸಿದ್ದರಾಮಯ್ಯರಿಂದ ಸಂಪುಟ ಪುನಾರಚನೆ ಸರ್ಕಸ್​
- ಅಧಿವೇಶನಕ್ಕೂ ಮೊದಲೇ ಸಂಪುಟ ಪುನಾರಚನೆ ಮಾಡಲು ಪಟ್ಟು
- ಸಿಎಂ ಬಿಗಿಪಟ್ಟು ಹಿನ್ನೆಲೆಯಲ್ಲಿ ಈ ವಾರದೊಳಗೆ ಖರ್ಗೆ ಚರ್ಚೆ
- ರಾಹುಲ್ ಗಾಂಧಿ & ಕೆ.ಸಿ ವೇಣುಗೋಪಾಲ್ ಜೊತೆ ಸಿಎಂ ಚರ್ಚೆ
- ರಾಗಾ ಜೊತೆಗಿನ ಮಾತುಕತೆ ಬಳಿಕ ಸಿಎಂ & ಡಿಸಿಎಂಗೆ ಬುಲಾವ್
- ಮುಂದಿನ ವಾರದೊಳಗೆ ಸಿಎಂ, ಡಿಕೆಶಿ ಇಬ್ಬರಿಗೂ ಖರ್ಗೆ ಬುಲಾವ್
- ನಂತರ ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ
ಸಚಿವ ಸಂಪುಟ ಪುನಾರಚನೆ ಮಾಡದಂತೆ ಡಿಸಿಎಂ ಡಿಕೆ ಪಟ್ಟು
ರಾಜ್ಯ ಕಾಂಗ್ರೆಸ್​​​ನಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.. ಸಿಎಂ ಸಂಪುಟ ಪುನಾರಚನೆ ಆಗಬೇಕು ಅಂದ್ರೆ, ಡಿಸಿಎಂ ಬೇಡ ಅಂತಿದ್ದಾರೆ.. ಕೆಲ ಸಸಚಿವಾಕಾಂಕ್ಷಿಗಳು ಗೊಂದಲದಲ್ಲೇ ಇದ್ದಾರೆ.. ಅತ್ತ ಹೈಕಮಾಂಡ್​ ನಾಯಕರು ಕೂಡ ಅಡ ಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.. ಒಂದು ವೇಳೆ ಸಂಪುಟ ಪುನಾರಚನೆ ಮಾಡಿದ್ರೆ ಮುಂದೇನಾಗುತ್ತೆ ಎಂಬ ಚಿಂತೆ ಕಾಡುತ್ತಿದೆ.
ಡಿಕೆಶಿ ದೆಹಲಿ ದಂಡಯಾತ್ರೆ!
- ರಾಹುಲ್ ಗಾಂಧಿಯನ್ನ ಭೇಟಿ ಮಾಡಲು ಡಿಸಿಎಂ ಡಿಕೆಶಿ ಹರಸಾಹಸ
- ಒಂದೆರಡು ದಿನಗಳಲ್ಲಿ ಮತ್ತೆ ದೆಹಲಿಗೆ ಹಾರಲಿರೋ ಡಿಸಿಎಂ ಡಿಕೆಶಿ
- ಮೂರು ದಿನದ ಹಿಂದೆ ಎಐಸಿಸಿ ಅಧ್ಯಕ್ಷರನ್ನ ಭೇಟಿಯಾಗಿದ್ದ ಡಿಕೆಶಿ
- ಸಹೋದರ ಡಿ.ಕೆ ಸುರೇಶ್ ಜೊತೆ ಖರ್ಗೆ ಭೇಟಿ ಮಾಡಿದ್ದ ಡಿಸಿಎಂ
- ನಾಯಕತ್ವ ಗೊಂದಲ ಇತ್ಯರ್ಥಪಡಿಸಿ ಎಂದು ಪಟ್ಟು ಹಿಡಿದಿದ್ದ ಡಿಕೆಶಿ
- ಇದೀಗ ಅಧಿವೇಶನಕ್ಕೂ ಮೊದಲೇ ಸಂಪುಟ ಪುನಾರಚನೆ ಚರ್ಚೆ
- ಸಚಿವ ಸಂಪುಟ ಪುನಾರಚನೆ ಆದ್ರೆ, ಸಿಎಂ ಗಾದಿ ಕೈತಪ್ಪುವ ಆತಂಕ
- ಮತ್ತೆ ದೆಹಲಿಗೆ ದೌಡಾಯಿಸುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್​​
ಅಧಿಕಾರ ಹಸ್ತಾಂತರ ಪಟ್ಟು ಬಿಡದ ಡಿಸಿಎಂ ಡಿ.ಕೆ ಶಿವಕುಮಾರ್ ಸೋನಿಯಾ ಗಾಂಧಿ ಭೇಟಿಗೆ ಸಮಯ ಕೇಳಿದ್ದಾರೆ ಎನ್ನಲಾಗ್ತಿದೆ. ಮಲ್ಲಿಕಾರ್ಜುನ ಖರ್ಗೆ ಮೂಲಕ ಡಿಕೆಶಿ ಒತ್ತಡ ಹಾಕುತ್ತಿದ್ದಾರೆ. ಅತ್ತ ರಾಹುಲ್ ಗಾಂಧಿ ಭೇಟಿಗೂ ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಸಂಪುಟ ಪುನಾರಚನೆಯಾದಲ್ಲಿ, ಸಿಎಂ ಗಾದಿ ‘ಕೈ’ತಪ್ಪುವ ಆತಂಕ ಶುರುವಾಗಿದೆ. ಪುನಾರಚನೆ ಬೇಡ, ನಾಯಕತ್ವ ಗೊಂದಲ ಇತ್ಯರ್ಥಕ್ಕೆ ಪಟ್ಟು ಹಿಡಿದು ತರಾತುರಿಯಲ್ಲಿ ದೆಹಲಿಗೆ ತೆರಳಲು ಮುಂದಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ದೆಹಲಿಯಲ್ಲೇ ಡಿ.ಕೆ.ಶಿವಕುಮಾರ್​ ಠಿಕಾಣಿ.. ಸಂಪುಟ ಪುನಾರಚನೆ ಚೆಂಡು ರಾಹುಲ್ ಅಂಗಳಕ್ಕೆ..!
ಎಲ್ಲವೂ ಹೈಕಮಾಂಡ್ ನಿರ್ಧಾರ, ಖಾತೆ ಬೇರೆ ಕೊಡಿ, ನಾವು ಮಂತ್ರಿ ಆಗಿರಬೇಕು ಅಂತೆಲ್ಲಾ ನಾವು ಮಾತಾಡಬಾರದು ಎಂದು ಸಚಿವೆ ಹೆಬ್ಬಾಳ್ಕರ್ ಮಾತನಾಡಿದ್ದಾರೆ. ಆದ್ರೆ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಪ್ರಬಲ ಲಾಬಿ ಶುರು ಮಾಡಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಮಂತ್ರಿ ಸ್ಥಾನ ಬೇಕು, ಮಂತ್ರಿ ಆಗುತ್ತೇನೆ ಎಂಬ ವಿಶ್ವಾಸವಿದೆ ಎಂದಿದ್ದಾರೆ..
ಒಟ್ಟಾರೆ, ಸಂಪುಟ ಪುನಾರಚನೆ ನೀ ಕೊಡೆ... ನಾ ಬಿಡೆ ಎಂಬಂತಾಗಿದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಪರಿಸ್ಥಿತಿ. ಸಿಎಂ ಸಂಪುಟ ಪುನಾರಚನೆಗೆ ಪಟ್ಟು ಹಿಡಿದಿದ್ರೆ, ಡಿಸಿಎಂ ವಿರೋಧ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್​ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ.
ಇದನ್ನೂ ಓದಿ: ಬೆಂಗಳೂರಿಗೆ ಬಂದು ದೋಸೆ ಸವಿದ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ : ಕರ್ನಾಟಕಕ್ಕೂ ಅಖಿಲೇಶ್ ಯಾದವ್‌ಗೂ ಇರೋ ನಂಟೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us