/newsfirstlive-kannada/media/media_files/2025/11/18/dk-shivakumar-3-2025-11-18-07-22-33.jpg)
ರಾಜ್ಯದಲ್ಲಿ ಇಷ್ಟು ದಿನ ಕಾಂಗ್ರೆಸ್​​ ಕ್ರಾಂತಿಯದ್ದೇ ಭಾರೀ ಸದ್ದು.. ಆದರೆ ಈಗ ಅದಕ್ಕೆ ಫುಲ್​ ಸ್ಟಾಪ್​​ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಪುನರಾಚನೆಗೆ ದೆಹಲಿ ದಂಡಯಾತ್ರೆ ಮಾಡ್ತಾನೇ ಇದ್ದಾರೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಸಚಿವ ಸಂಪುಟ ಪುನಾರಚನೆಗೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಾಜ್ಯದಲ್ಲೀ ಭಾರೀ ಸದ್ದು ಮಾಡಿದ್ದ ಸಚಿವ ಸಂಪುಟ ಪುನಾರಚನೆಗೆ ದೆಹಲಿಯ ಹೈಕಮಾಂಡ್​​ ಅಂಗಳದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆದಿದ್ದು ಒಪ್ಪಿಗೆ ಪಡೆದು ಸಿಎಂ ರಾತ್ರಿಯೇ ಬೆಂಗಳೂರಿಗೆ ವಾಪಸ್​ ಆಗಿದ್ದಾರೆ.
ಇದನ್ನೂ ಓದಿ: ರಾಜ್ಯ ಕ್ಯಾಬಿನೆಟ್ ಪುನರ್ ರಚನೆ: AICC ಅಧ್ಯಕ್ಷ ಖರ್ಗೆ ಭೇಟಿಯಾಗಿ ಚರ್ಚಿಸಿದ ಸಿಎಂ ಸಿದ್ದರಾಮಯ್ಯ
ಸಂಪುಟ ಪುನಾರಚನೆಗೆ ಖರ್ಗೆ ಒಪ್ಪಿಗೆ
- ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಖರ್ಗೆ ಗ್ರೀನ್ ಸಿಗ್ನಲ್
- ಖರ್ಗೆ ಜೊತೆಗೆ ಸಿಎಂ ಸಿದ್ದರಾಮಯ್ಯ ಸುದೀರ್ಘ ಮಾತುಕತೆ
- ರಾಹುಲ್ ಗಾಂಧಿ ಜೊತೆಗೆ ಸಿಎಂ ಮತ್ತೊಂದು ಸುತ್ತಿನ ಮಾತುಕತೆ
- ಬಳಿಕ ಸಂಪುಟ ಪುನಾರಚನೆ ಕೈಗೆತ್ತಿಕೊಳ್ಳುವ ಬಗ್ಗೆ ನಿರ್ಧಾರ
- ಸಂಪುಟ ಪುನಾರಚನೆಗೆ ಒಪ್ಪಿಗೆ ನೀಡಿರುವ ಎಐಸಿಸಿ ಅಧ್ಯಕ್ಷ
- ರಾಹುಲ್ ಜೊತೆಗೂ ಅಂತಿಮ ಸುತ್ತಿನ ಸಭೆ ನಡೆಸಿ ಎಂದ ಖರ್ಗೆ
- ರಾಹುಲ್ ಜೊತೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸೋಣ ಎಂದ ಖರ್ಗೆ
- ರಾಹುಲ್ ಅಂಗಳದಲ್ಲಿ ಬೆಂಕಿ ಚೆಂಡು, ಓಕೆ ಅಂದ್ರೆ ಪುನಾರಚನೆ
ಖರ್ಗೆ ಭೇಟಿಗೂ ಮುನ್ನ ಸುದ್ದಿಗೋಷ್ಟಿ ನಡೆಸಿದ್ದ ಸಿದ್ದರಾಮಯ್ಯ, 4 ತಿಂಗಳ ಹಿಂದೆಯೇ ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನಾರಚನೆಗೆ ಸೂಚಿಸಿತ್ತು. ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣವಾಗಲಿ ಎಂದು ನಾನೇ ಹೇಳಿದ್ದೆ ಅಂತ ಹೇಳಿದ್ರು. ಇತ್ತ ಡಿಸಿಎಂ ಡಿಕೆಶಿ ಕಳೆದ 3 ದಿನಗಳಿಂದ ಡೆಲ್ಲಿಯಲ್ಲೇ ಠಿಕಾಣಿ ಹೂಡಿದ್ರು, ಸಿಎಂಗೂ ಮೊದಲೇ ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದ ಡಿಕೆಶಿಗೆ ಹೈಕಮಾಂಡ್​​ ಸಮಾಧಾನ ಮಾಡಿದ್ದಾರಂತೆ. ಬಿಹಾರ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಮಾಡಿರುವ ಕಾರಣ ಯಾವುದೇ ನಿರ್ಧಾರ ಮಾಡಲಾಗದ ಸ್ಥಿತಿಯಲ್ಲಿ ಹೈಕಮಾಂಡ್ ಇದ್ದು, ಯಾವ ಕಾಲಕ್ಕೆ ಏನು ಮಾಡಬೇಕೋ ಅದನ್ನ ಮಾಡುತ್ತೇವೆ, ಸದ್ಯಕ್ಕೆ ಸೈಲೆಂಟ್ ಆಗಿರುವಂತೆ ಡಿಕೆಶಿಗೆ ಹೈಕಮಾಂಡ್​​ ಮನವರಿಕೆ ಮಾಡಿದ್ಯಂತೆ. ಹೀಗಾಗಿ ದೆಹಲಿಗೆ ತೆರಳಿದ್ದ ಡಿಸಿಎಂ ಡಿಕೆಶಿ ಸೈಲೆಂಟ್​ ಆಗಿಯೇ ರಾಜ್ಯಕ್ಕೆ ವಾಪಸ್​ ಆಗಿದ್ದಾರೆ.
ರಾಹುಲ್​​​ ಫೈನಲ್​​ ಡಿಸಿಷನ್​​!
ಸಂಪುಟ ಪುನರ್ ರಚನೆ ಮೂಲಕ ಸಿಎಂ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ರಾಹುಲ್ ಗಾಂಧಿಯನ್ನು ಸಿಎಂ ಭೇಟಿಯಾಗಿದ್ದರು. ಈ ವೇಳೆ, ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಭೇಟಿಯಾಗಲು ರಾಹುಲ್ ಸೂಚಿಸಿದ್ದ ಕಾರಣ ಸಿದ್ದರಾಮಯ್ಯ ದೆಹಲಿಯಲ್ಲಿ ಖರ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಿಎಂ ಪ್ರಸ್ತಾಪ ಆಲಿಸಿದ ಖರ್ಗೆ ಸಂಪುಟ ಪುನಾರಚನೆಗೆ ಮಾಡಿಕೊಂಡಿರುವ ತಯಾರಿಗೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಎಷ್ಟು ಸ್ಥಾನ ಬದಲಾವಣೆ ಮಾಡ್ಬೇಕು..? ಯಾರನ್ನು ಬಿಡಬೇಕು..? ಯಾರನ್ನು ಸೇರ್ಪಡೆ ಮಾಡ್ಬೇಕು ಅಂತ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ರಸ್ತೆ ಕಸ ಗುಡಿಸುವ ಯಂತ್ರ ವಾಹನಗಳಿಗೆ 613 ಕೋಟಿ ರೂ. ಬಾಡಿಗೆ ಮೊತ್ತ! ಬಾಡಿಗೆ ಬದಲು ಖರೀದಿಯನ್ನೇ ಮಾಡಿ ಎಂದ ಜನರು
ಸದ್ಯಕ್ಕೆ ಅನಗತ್ಯ ಗೊಂದಲ ಸೃಷ್ಟಿಸದಂತೆ ಸೂಚನೆ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ 10 ಸಚಿವರನ್ನು ಕೈಬಿಟ್ಟು, ಖಾಲಿ ಇರೋ 2 ಸ್ಥಾನದ ಜೊತೆ ಒಟ್ಟು 12 ಸಚಿವರ ಭರ್ತಿಗೆ ಸಿಎಂ ಕೇಳಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆ, ಸಂಪುಟ ಪುನರ್ ರಚನೆ ಖರ್ಗೆ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯದ ಕಾಂಗ್ರೆಸ್​​ನ ಕೆಲ ನಾಯಕರಲ್ಲಿ ಆತಂಕ ಮನೆ ಮಾಡಿದೆ, ಇನ್ನು ಕೆಲ ನಾಯಕರಿಗೆ ಸಂತೋಷ ತಂದಿದೆ. ಸಂಪುಟದಲ್ಲಿ ಯಾರಿಗೆ ಚಾನ್ಸ್​​?, ಯಾರಿಗೆ ಕೋಕ್​ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಗೆ ಹೊರಟ ಸಿಎಂ ಸಿದ್ದರಾಮಯ್ಯ: ಕಬ್ಬು ಎಫ್‌ಆರ್‌ಪಿ ಹೆಚ್ಚಳ, ಮೇಕೆದಾಟು ಅನುಮತಿ ಬಗ್ಗೆ ಚರ್ಚೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us