Advertisment

ನಾವು ಯಾಕೆ ನವೆಂಬರ್ 26 ರಂದು ಸಂವಿಧಾನ ದಿನ ಆಚರಿಸುತ್ತೇವೆ..?

ನವೆಂಬರ್ 26, 2015 ರಂದು ಭಾರತ ಸರ್ಕಾರ ‘ಸಂವಿಧಾನ ದಿನ’ ಆಚರಿಸುವ ನಿರ್ಧಾರವನ್ನು ಪ್ರಕಟಿಸಿತು. ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳಿಗೆ ಗೌರವ ಹಾಗೂ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ

author-image
Ganesh Kerekuli
constitution Day
Advertisment

ದೇಶದಾದ್ಯಂತ ಇವತ್ತು ‘ಸಂವಿಧಾನ ದಿನ’ (Constitution Day) ಆಚರಿಸಲಾಗುತ್ತಿದೆ. ವಾಸ್ತವವಾಗಿ ನವೆಂಬರ್ 26, 1949 ರಂದು ಸಂವಿಧಾನ ಸಭೆಯು ‘ಭಾರತದ ಸಂವಿಧಾನ’ವನ್ನು ಔಪಚಾರಿಕವಾಗಿ ಅಂಗೀಕರಿಸಿತು. ಅದೇ ಕಾರಣಕ್ಕೆ ಈ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ. 

Advertisment

2015ರಲ್ಲಿ ಸಂವಿಧಾನದ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ನಡೆಯಿತು. ನವೆಂಬರ್ 26, 2015 ರಂದು ಭಾರತ ಸರ್ಕಾರ ‘ಸಂವಿಧಾನ ದಿನ’ ಆಚರಿಸುವ ನಿರ್ಧಾರವನ್ನು ಪ್ರಕಟಿಸಿತು. ಅವತ್ತೇ ಮೊದಲ ಬಾರಿಗೆ ‘ಸಂವಿಧಾನ ದಿನ’ವನ್ನು ಆಚರಿಸಲಾಯಿತು. ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳಿಗೆ ಗೌರವ ಹಾಗೂ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ  ಆಚರಿಸಲಾಗುತ್ತದೆ. 

ಇದನ್ನೂ ಓದಿ: ಗುವಾಹಟಿಯಲ್ಲಿ ಪಂತ್​ ಪಡೆ ಪರದಾಟ.. ಗೆಲುವಿನತ್ತ ಸೌತ್​ ಆಫ್ರಿಕಾ..!

ಸಂವಿಧಾನ ಏನು ನೀಡಿದೆ?

ನವೆಂಬರ್ 26 ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನ. ಪ್ರತಿ ಭಾರತೀಯನಿಗೂ ಸಮಾನತೆಯ ಹಕ್ಕು, ಮುಕ್ತವಾಗಿ ಬದುಕುವ ಹಕ್ಕು ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನೀಡುವ ದಾಖಲೆಯನ್ನು ರಚಿಸಿದ ದಿನ ಇದಾಗಿದೆ. ಯಾವುದೇ ವ್ಯಕ್ತಿಯ ಹಕ್ಕುಗಳನ್ನು ನಿರಾಕರಿಸದಂತೆ ನೋಡಿಕೊಳ್ಳಲು ಈ ಸಂವಿಧಾನ ರೂಪಿಸಲು ಹಗಲಿರುಳು ಶ್ರಮದಾಯಕ ಪ್ರಯತ್ನ ನಡೆದಿದೆ. ಸಂವಿಧಾನ ರಚನೆ ಬಗ್ಗೆ ಹಲವು ವಾದಗಳು ಎದ್ದಿದ್ದವು. ಅದರ ಪ್ರತಿಯೊಂದು ಅಂಶವನ್ನು ಪರಿಗಣಿಸಲು ಸುಮಾರು ಮೂರು ವರ್ಷಗಳೇ ಬೇಕಾಯಿತು.
ಭಾರತ ವೈವಿಧ್ಯತೆಯಿಂದ ಕೂಡಿರುವ ದೇಶ. ಹೀಗಾಗಿ ಭಾರತೀಯ ಸಂವಿಧಾನ ರಚಿಸುವುದು ಸುಲಭದ ಕೆಲಸವಾಗಿರಲಿಲ್ಲ. ಎಲ್ಲಾ ಧರ್ಮಗಳು, ನಂಬಿಕೆಗಳು, ಜಾತಿಗಳು ಮತ್ತು ವೈವಿಧ್ಯಮಯ ಸಿದ್ಧಾಂತಗಳ ಜನರ ಒಟ್ಟುಗೂಡಿಸುವುದು ಕಷ್ಟಕರವಾಗಿತ್ತು. 

ಸಂವಿಧಾನವನ್ನು ಹೇಗೆ ರಚಿಸಲಾಯಿತು..? 

ಭಾರತೀಯ ಸಂವಿಧಾನವನ್ನು ರಚಿಸಲು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳು ಬೇಕಾಯಿತು. ಹೀಗಾಗಿ, ನವೆಂಬರ್ 26, 1949 ರಂದು ನಮ್ಮ ಸಂವಿಧಾನವು ಪೂರ್ಣಗೊಂಡಿತು. ನಮ್ಮ ಸಂವಿಧಾನ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನವನ್ನು ರಚಿಸುವಾಗ ಸಾಮಾನ್ಯರ ಜೀವನವನ್ನು ಸುಧಾರಣೆ ತರುವ ತತ್ವಗಳನ್ನು ಸೇರಿಸಲಾಯಿತು. ಇದಕ್ಕಾಗಿ ಯುನೈಟೆಡ್ ಸ್ಟೇಟ್ಸ್, ಐರ್ಲೆಂಡ್, ಕೆನಡಾ, ಜಪಾನ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ದೇಶಗಳ ಸಂವಿಧಾನಗಳ ಸಹಾಯ ಕೋರಿದ್ದೇವೆ. ಈ ದೇಶಗಳ ಸಂವಿಧಾನಗಳಿಂದ ನಾಗರಿಕರ ಕರ್ತವ್ಯಗಳು, ಮೂಲಭೂತ ಹಕ್ಕುಗಳು, ಸರ್ಕಾರದ ಪಾತ್ರ, ಪ್ರಧಾನಿ, ಅಧ್ಯಕ್ಷರು, ರಾಜ್ಯಪಾಲರು ಮತ್ತು ಚುನಾವಣಾ ಪ್ರಕ್ರಿಯೆಯಂತಹ ಪ್ರಮುಖ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 

Advertisment

ಇದನ್ನೂ ಓದಿ: ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್..? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

constitution Day
Advertisment
Advertisment
Advertisment