Advertisment

ಗುವಾಹಟಿಯಲ್ಲಿ ಪಂತ್​ ಪಡೆ ಪರದಾಟ.. ಗೆಲುವಿನತ್ತ ಸೌತ್​ ಆಫ್ರಿಕಾ..!

ಇಂಡೋ-ಆಫ್ರಿಕಾ ಗುವಾಹಟಿ ಟೆಸ್ಟ್​ ಪಂದ್ಯ ಅಂತಿಮ ಘಟ್ಟ ತಲುಪಿದೆ. ಐತಿಹಾಸಿಕ ಸರಣಿ ಗೆಲ್ಲಲು ಸೌತ್​ ಆಫ್ರಿಕಾ ತುದಿಗಾಲಲ್ಲಿ ನಿಂತಿದೆ. ಟೀಮ್​ ಇಂಡಿಯಾ ಕನಿಷ್ಠ ಡ್ರಾ ಮಾಡಿಕೊಂಡಾದ್ರೂ ಮಾನ ಉಳಿಸಿಕೊಳ್ಳಲು ಹೋರಾಡ್ತಿದೆ. 4ನೇ ದಿನದಾಟದಲ್ಲಿ ಹರಿಣಗಳ ಹೋರಾಟದ ಮುಂದೆ ಟೀಮ್​ ಇಂಡಿಯಾದ ಆಟವೇ ನಡೆಯಲಿಲ್ಲ.

author-image
Ganesh Kerekuli
Team india (5)
Advertisment
  • ಐತಿಹಾಸಿಕ ಗೆಲುವಿನ ಕನವರಿಕೆಯಲ್ಲಿ ಸೌತ್​ ಆಫ್ರಿಕಾ
  • 4ನೇ ದಿನದಾಟದಲ್ಲೂ ಮೇಲುಗೈ ಸಾಧಿಸಿದ ಆಫ್ರಿಕನ್ಸ್​
  • ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ ಟ್ರಸ್ಟನ್​ ಸ್ಟಬ್ಸ್​​

ಇಂಡೋ-ಆಫ್ರಿಕಾ ಗುವಾಹಟಿ ಟೆಸ್ಟ್​ ಪಂದ್ಯ ಅಂತಿಮ ಘಟ್ಟ ತಲುಪಿದೆ. ಭಾರತದ ನೆಲದಲ್ಲಿ ಐತಿಹಾಸಿಕ ಸರಣಿ ಗೆಲ್ಲಲು ಸೌತ್​ ಆಫ್ರಿಕಾ ತುದಿಗಾಲಲ್ಲಿ ನಿಂತಿದೆ. ಟೀಮ್​ ಇಂಡಿಯಾ ಕನಿಷ್ಠ ಡ್ರಾ ಮಾಡಿಕೊಂಡಾದ್ರೂ ಮಾನ ಉಳಿಸಿಕೊಳ್ಳಲು ಹೋರಾಡ್ತಿದೆ. 4ನೇ ದಿನದಾಟದಲ್ಲಿ ಹರಿಣಗಳ ಹೋರಾಟದ ಮುಂದೆ ಟೀಮ್​ ಇಂಡಿಯಾದ ಆಟವೇ ನಡೆಯಲಿಲ್ಲ.

Advertisment

ಭಾರತ-ಸೌತ್​ ಆಫ್ರಿಕಾ ನಡುವಿನ ಗುವಾಹಟಿ ಟೆಸ್ಟ್​ ಮ್ಯಾಚ್​ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಪಂದ್ಯದ ಆರಂಭಕ್ಕೂ ಮುನ್ನ ಗೆದ್ದೇ ಬೀಡೋ ಆತ್ಮವಿಶ್ವಾಸದಲ್ಲಿ ಟೀಮ್​ ಇಂಡಿಯಾ ಕನಿಷ್ಟ ಡ್ರಾ ಸಾಧಿಸೋಕೆ ಪರದಾಡ್ತಿದೆ. 4ನೇ ದಿನದಾಟದಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ ಪ್ರವಾಸಿ ಸೌತ್​ ಆಫ್ರಿಕಾ ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸೋ ತವಕದಲ್ಲಿದೆ.

ಇದನ್ನೂ ಓದಿ:KSCA ಅಧ್ಯಕ್ಷರಾಗಿ ವೆಂಕಟೇಶ್​ ಪ್ರಸಾದ್​ ಅವಿರೋಧ ಆಯ್ಕೆ -ಅಸಲಿಗೆ ಆಗಿದ್ದೇನು?

Team India

ವಿಕೆಟ್​ ನಷ್ಟವಿಲ್ಲದೇ 26 ರನ್​ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಸೌತ್​ ಆಫ್ರಿಕಾ ಪರ ಓಪನರ್ಸ್​​ ಹಾಫ್​​ ಸೆಂಚುರಿ ಜೊತೆಯಾಟವಾಡಿದ್ರು. ರಿಯಾನ್​ ರಿಕಲ್ಟನ್​ ಹಾಗೂ ಎಡೆನ್​ ಮರ್ಕರಮ್ 113 ಎಸೆತಗಳಲ್ಲಿ 59 ರನ್​ಗಳಿಸಿದ್ರು. 
2ನೇ ಇನ್ನಿಂಗ್ಸ್​ನಲ್ಲೂ ಅದ್ಭುತ ಓಪನಿಂಗ್​ ಪಡೆದ ಸೌತ್​ ಆಫ್ರಿಕಾವನ್ನ ರವೀಂದ್ರ ಜಡೇಜಾ ಸ್ಪಿನ್​ ಜಾದೂವಿನಿಂದ ಕಟ್ಟಿ ಹಾಕಿದ್ರು. ಜಡೇಜಾ ಮ್ಯಾಜಿಕಲ್​ ಎಸೆತಗಳಿಗೆ ರಿಕಲ್ಟನ್,​ ಮರ್ಕರಮ್​ ಬಲಿಯಾದ್ರು. 

Advertisment

ನಾಯಕ ಟೆಂಬಾ ಬವುಮಾಗೂ ಕ್ರಿಸ್​ನಲ್ಲಿ ನೆಲೆಯೂರಲು ಅವಕಾಶ ಸಿಗಲಿಲ್ಲ. ವಾಷಿಂಗ್ಟನ್ ಸುಂದರ್​ ಬವುಮಾಗೆ ಪೆವಿಲಿಯನ್​ ದಾರಿ ತೋರಿಸಿದ್ರು. ಮೊದಲ ಸೆಷನ್​ನಲ್ಲಿ 107 ರನ್​ಗಳಿಸಿದ ಸೌತ್​ ಆಫ್ರಿಕಾ 3 ವಿಕೆಟ್​ ಕಳೆದುಕೊಳ್ತು.  2ನೇ ಸೆಷನ್​ನಲ್ಲಿ ಸೌತ್​ ಆಫ್ರಿಕಾದ ಟ್ರಿಸ್ಟನ್​ ಸ್ಟಬ್ಸ್​ ಹಾಗೂ ಟೋನಿ ಡಿ ಝೋರ್ಝಿ ಅದ್ಭುತ ಬ್ಯಾಟಿಂಗ್​ ನಡೆಸಿದ್ರು. ಇಂಡಿಯನ್ ಬೌಲಿಂಗ್​ ಅಟ್ಯಾಕ್​ನ ದಿಟ್ಟವಾಗಿ ಎದುರಿಸಿದ ಈ ಜೋಡಿ ಶತಕದ ಜೊತೆಯಾಟವಾಡಿತು. 4ನೇ ವಿಕೆಟ್​ಗೆ 162 ಎಸೆತಗಳಲ್ಲಿ 101 ರನ್​ಗಳು ಹರಿದುಬಂದ್ವು. 

ಅಂತಿಮವಾಗಿ ಝೋರ್ಝಿ ವಿಕೆಟ್​ ಬೇಟೆಯಾಡಿದ ಜಡೇಜಾ ಜೊತೆಯಾಟಕ್ಕೆ ಬ್ರೇಕ್​ ಹಾಕಿದ್ರು. 68 ಎಸೆತ ಎದುರಿಸಿದ 4 ಬೌಂಡರಿ, 1 ಸಿಕ್ಸರ್​ ಸಿಡಿಸಿದ್ದ ಝೋರ್ಝಿ 49 ರನ್​​ಗಳಿಸಿ ನಿರ್ಗಮಿಸಿದ್ರು. ಟ್ರಿಸ್ಟನ್​​ ಸ್ಟಬ್ಸ್​ ಮತ್ತೊಂದು ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. 9 ಆಕರ್ಷಕ ಬೌಂಡರಿ, 1 ಸಿಕ್ಸರ್​ ಸಿಡಿಸಿದ ಸ್ಟನ್ಸ್​ ಅರ್ಧಶತಕ ಸಿಡಿಸಿ ಮಿಂಚಿದ್ರು. ಸ್ಟಬ್ಸ್​ಗೆ ವಿಯಾನ್ ಮುಲ್ಡರ್​ ಸಾಥ್​ ನೀಡಿದ್ರು. 69 ಎಸೆತಗಳಲ್ಲಿ ಮುಲ್ಡರ್​ ಅಜೇಯ 35 ರನ್​ಗಳಿಸಿದ್ರು.

ಇದನ್ನೂ ಓದಿ:ಗಂಭೀರ್ ವಿರುದ್ಧ ತೊಡೆ ತಟ್ಟಿದ ರೋಹಿತ್ ಶರ್ಮಾ.. ಟಾರ್ಗೆಟ್​ ಫಿಕ್ಸ್​..!

Advertisment

Team india (4)

ಗುವಾಹಟಿಯಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ ಸ್ಟಬ್ಸ್​ ಶತಕದ ಅಂಚಿನಲ್ಲಿ ಎಡವಿದ್ರು. 180 ಎಸೆತಗಳನ್ನ ಎದುರಿಸಿ 9 ಬೌಂಡರಿ, 1 ಸಿಕ್ಸರ್​ ಸಿಡಿಸಿದ್ದ ಸ್ಟಬ್ಸ್​ 94 ರನ್​ಗಳಿಸಿದ್ದ ವೇಳೆ ಜಡೇಜಾ ಜಾದೂಗೆ ಮರುಳಾಗಿ ಕ್ಲೀನ್​ಬೋಲ್ಡ್​ ಆದ್ರು. ಸ್ಟಬ್ಸ್​ ವಿಕೆಟ್​ ಪತನದೊಂದಿಗೆ ಸೌತ್​ ಆಫ್ರಿಕಾ ಇನ್ನಿಂಗ್ಸ್​ ಡಿಕ್ಲೆರ್​ ಮಾಡಿಕೊಳ್ತು. 2ನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 260 ರನ್​ಗಳಿಸಿದ್ದ ವೇಳೆ ಡಿಕ್ಲೆರ್​ ಮಾಡಿಕೊಂಡ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾಗೆ ಬರೋಬ್ಬರಿ 549 ರನ್​ಗಳ ಬಿಗ್​ ಟಾರ್ಗೆಟ್​ ನೀಡ್ತು.

ಈ ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಮುಗ್ಗರಿಸಿತು. 1 ಬೌಂಡರಿ, 1 ಸಿಕ್ಸರ್​ ಬಾರಿಸಿ ಭರವಸೆ ಹುಟ್ಟಿಸಿದ ಜೈಸ್ವಾಲ್​ 13 ರನ್​ಗಳಿಸಿ ಪೆವಿಲಿಯನ್​ ಸೇರಿದ್ರು. ಇನ್ನೊರ್ವ ಓಪನರ್​ ಕೆ.ಎಲ್​ ರಾಹುಲ್​ 6 ರನ್​ಗಳಿಸಿ ಔಟಾದ್ರು. ಆ ಬಳಿಕ ಟೀಮ್ ಇಂಡಿಯಾಗೆ ಸಾಯಿ ಸುದರ್ಶನ್​, ಕುಲ್​ದೀಪ್​ ಯಾದವ್​ ಕ್ರಿಸ್​ನಲ್ಲಿದ್ದಾರೆ. 4ನೇ ದಿನದ ಅಂತ್ಯಕ್ಕೆ 2 ವಿಕೆಟ್​ ನಷ್ಟಕ್ಕೆ ಟೀಮ್​ ಇಂಡಿಯಾ 27 ರನ್​ಗಳಿಸಿದೆ. ಭಾರತದ ಗೆಲುವಿಗೆ ಇನ್ನೂ 522 ರನ್​ಗಳು ಬೇಕಿದ್ರೆ, ಸೌತ್​ ಆಫ್ರಿಕಾ ಜಯಕ್ಕೆ 8 ವಿಕೆಟ್​ಗಳು ಬೇಕಿವೆ. ಗೆಲುವು, ಸೋಲು, ಡ್ರಾ ಮೂರೂ ರಿಸಲ್ಟ್​ಗೆ ಇನ್ನೂ ಅವಕಾಶವಿರೋದ್ರಿಂದ ಇಂದಿನ ದಿನದಾಟ ಕುತೂಹಲ ಮೂಡಿಸಿದೆ. 

ಇದನ್ನೂ ಓದಿ: ವಿಶ್ವಕಪ್ ದಂಡಯಾತ್ರೆಗೆ ಬ್ಲೂ ಪ್ರಿಂಟ್ ರೆಡಿ.. SKY ಪಡೆ ಮುಂದೆ ಬಿಗ್​ ಟಾಸ್ಕ್​..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Ind vs SA India vs South Africa Test Match
Advertisment
Advertisment
Advertisment