/newsfirstlive-kannada/media/media_files/2025/11/06/suryakumar_gill_indvsaus-2025-11-06-10-52-20.jpg)
2026ರ ಟಿ-20 ವಿಶ್ವಕಪ್​​​ಗೆ ಕೌಂಟ್​ಡೌನ್ ಶುರುವಾಗಿದೆ. ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಹಾಲಿ ಚಾಂಪಿಯನ್ಸ್​ ಟೀಮ್ ಇಂಡಿಯಾ ತೆರೆ ಹಿಂದೆ ಭರ್ಜರಿ ಸಿದ್ಧತೆ ನಡೆಸಿಕೊಳ್ತಿದೆ. ವಿಶ್ವಕಪ್​ಗೂ ಮುನ್ನ ಸೂರ್ಯಕುಮಾರ್ ಯಾದವ್ ಪಡೆ ಮುಂದಿರೋದು, ಕೇವಲ ಎರಡೇ ಎರಡು ಟಿ-20 ಸರಣಿಗಳು ಮಾತ್ರ. ಈ 2 ಸರಣಿಗಳಲ್ಲೇ 15 ಸದಸ್ಯರ ತಂಡವನ್ನ ಫೈನಲ್ ಮಾಡಲು ಮುಂದಾಗಿದೆ.
2026 ಫೆಬ್ರವರಿ ಟೀಮ್ ಇಂಡಿಯಾ ಪಾಲಿಗೆ ಅಗ್ನಿಪರೀಕ್ಷೆಯ ದಿನಗಳು. ಕಳೆದ ವರ್ಷ ವೆಸ್ಟ್ ವಿಂಡೀಸ್​​ನಲ್ಲಿ ಟಿ-20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾ, ಇದೀಗ ಪಟ್ಟ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ವಿಶ್ವಕಪ್​​​​ಗೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್​ ಮತ್ತು ಕೋಚ್ ಗೌತಮ್ ಗಂಭೀರ್ ಮುಂದೆ ಸಾಲು ಸಾಲು ಸವಾಲುಗಳು ಎದುರಾಗಿವೆ. ಆ ಸವಾಲುಗಳನ್ನ ಮೆಟ್ಟಿನಿಲ್ಲಲು ಈಗಿನಿಂದಲೇ ತಯಾರಿ ನಡೆಸಿಕೊಳ್ಳಲಾಗ್ತಿದೆ.
ಇದನ್ನೂ ಓದಿ:‘ಬಾ ನನ್ನ ಜೊತೆ..’ ಸ್ನೇಹಿತೆ ರೂಮಿಗೆ ಕರೆದೊಯ್ದು ಜೀವ ತೆಗೆದೇ ಬಿಟ್ಟ..
ಬ್ಲೂ ಪ್ರಿಂಟ್ ರೆಡಿ
ಇತ್ತೀಚಿಗಷ್ಟೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ನಮ್ಮ ತಂಡ ಟಿ-20 ವಿಶ್ವಕಪ್​ಗೆ ರೆಡಿ ಇಲ್ಲ ಅಂತ ಆಶ್ಚರ್ಯಕರ ಹೇಳಿಕೆ ನೀಡಿದ್ರು. ನಿಜ ಹೇಳಬೇಕು ಅಂದ್ರೆ ಟೀಮ್ ಇಂಡಿಯಾಕ್ಕೆ ಟಿ-20 ವರ್ಲ್ಡ್​ಕಪ್ ಪ್ರಿಪರೇಷನ್ಸ್​​ಗೆ ಹೆಚ್ಚು ಕಾಲಾವಕಾಶವಿಲ್ಲ. ಇರೋದು ಜಸ್ಟ್​ ಎರಡುವರೆ ತಿಂಗಳು ಮಾತ್ರ. ಹಾಗಾಗಿ ಕೋಚ್ ಮತ್ತು ಟೀಮ್ ಮ್ಯಾನೇಜ್ಮೆಂಟ್, ಈಗಿನಿಂದಲೇ ಬ್ಲೂ ಪ್ರಿಂಟ್ ರೆಡಿ ಮಾಡಿಕೊಳ್ಳೋಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಹೃದಯಸ್ಪರ್ಷಿ ಪ್ರೀತಿಯ ಅಂತಾರಳ ಹೇಳಿದ ಬೆಸ್ಟ್​ ಬಡ್ಡೀಸ್..! ಹಾರ್ಟ್​ ಟಚ್ಚಿಂಗ್ ವಿಡಿಯೋ
ಟಿ-20 ವಿಶ್ವಕಪ್​​ಗೂ ಮುನ್ನ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ವಿರುದ್ಧ 5 ಟಿ-ಟ್ವೆಂಟಿ ಪಂದ್ಯಗಳು ಮತ್ತು ನ್ಯೂಜಿಲೆಂಡ್ ವಿರುದ್ಧ 5 ಟಿ-ಟ್ವೆಂಟಿ ಪಂದ್ಯಗಳನ್ನ ಆಡಲಿದೆ. ಒಟ್ಟು 10 ಟಿ-20 ಪಂದ್ಯಗಳನ್ನ ಆಡಲಿರೋ ಟೀಮ್ ಇಂಡಿಯಾಕ್ಕೆ, ಇದೇ ಪ್ರಿಪರೇಷನ್ ಸೀರಿಸ್. ಜೊತೆಗೆ ಸೌತ್ ಆಫ್ರಿಕಾ ಟಿ-20 ಸರಣಿಯಲ್ಲೇ ಎಕ್ಸ್​ಪಿರಿಮೆಂಟ್ ಮಾಡೋಕೆ ಒಂದೊಳ್ಳೆ ಅವಕಾಶ ಸಿಗುತ್ತದೆ.
ನಾಯಕ ಸೂರ್ಯಕುಮಾರ್ ಯಾದವ್, ಸೌತ್ ಆಫ್ರಿಕಾ ವಿರುದ್ಧ ಬ್ಯಾಟಿಂಗ್, ಬೌಲಿಂಗ್​​​ನಲ್ಲಿ ಪ್ರಯೋಗ ಮಾಡಬಹುದು. ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರೋ ಟಿ-20 ಸರಣಿಯಲ್ಲಿ ಯಾವುದೇ ಕಾರಣಕ್ಕೂ ಎಕ್ಸ್​ಪಿರಿಮೆಂಟ್ ಮಾಡೋಕೆ ಆಗೋದಿಲ್ಲ. ಯಾಕಂದ್ರೆ ನ್ಯೂಜಿಲೆಂಡ್ ವಿರುದ್ಧ ಆಡಲಿರುವ ತಂಡವೇ 99% ಟಿ-20 ವಿಶ್ವಕಪ್ ಆಡೋದು. ಹಾಗಾಗಿ ಕಿವೀಸ್ ವಿರುದ್ಧದ ತಂಡವೇ ವಿಶ್ವಕಪ್​ಗೂ ಫೈನಲ್.
ಇದನ್ನೂ ಓದಿ: KSCA ಅಧ್ಯಕ್ಷರಾಗಿ ವೆಂಕಟೇಶ್​ ಪ್ರಸಾದ್​ ಅವಿರೋಧ ಆಯ್ಕೆ -ಅಸಲಿಗೆ ಆಗಿದ್ದೇನು?
ಈ ಬಾರಿ ಟಿ-20 ವಿಶ್ವಕಪ್ ಆತಿಥ್ಯವನ್ನ ಭಾರತ ಮತ್ತು ಶ್ರೀಲಂಕಾ ವಹಿಸಿಕೊಳ್ಳುತ್ತಿದೆ. ಉಪಖಂಡದಲ್ಲಿ ನಡೆಯಲಿರುವ ವಿಶ್ವಕಪ್​ನಲ್ಲಿ, ಸ್ಪಿನ್ನರ್ಸ್ ಪ್ರಮುಖ ಪಾತ್ರವಹಿಸಲಿದ್ದಾರೆ. ಸದ್ಯ ಟೀಮ್ ಇಂಡಿಯಾ ಹೆವಿ ಸ್ಪಿನ್​​​​​​​​​​ ಅಟ್ಯಾಕ್​​​ಗೆ, ಪ್ಲಾನ್ ಮಾಡಿಕೊಳ್ತಿದೆ. ಕ್ವಾಲಿಟಿ ಸ್ಪಿನ್ನರ್​ಗಳನ್ನ ಟಿ-20 ವಿಶ್ವಕಪ್ ಆಡಿಸುವ ಲೆಕ್ಕಾಚಾರದಲ್ಲಿದೆ. ಸ್ಪಿನ್ ಟು ವಿನ್ ಮಂತ್ರವನ್ನ, ಟಿ-ಟ್ವೆಂಟಿ ವಿಶ್ವಕಪ್ ಟೀಮ್ ಇಂಡಿಯಾ ಪಾಲಿಸಲಿದೆ.​​
ಟಿ-20 ವಿಶ್ವಕಪ್​​ಗೆ ಒಂದು ತಿಂಗಳಿರುವಂತೆ ಎಲ್ಲಾ ರಾಷ್ಟ್ರಗಳು 15 ಸದಸ್ಯರ ಆಟಗಾರರನ್ನ ಪ್ರಕಟಿಸಬೇಕು. ಟೀಮ್ ಇಂಡಿಯಾದಲ್ಲಿ 15ಕ್ಕಿಂತ ಹೆಚ್ಚು ಸದಸ್ಯರು ಟಿ-20 ವಿಶ್ವಕಪ್ ಆಡಲು ಅರ್ಹರಿದ್ದಾರೆ. ಕ್ಯಾಪ್ಟನ್, ಕೋಚ್ ಮತ್ತು ಟೀಮ್ ಮ್ಯಾನೇಜ್ಮೆಂಟ್, ಸೂಕ್ತ ಬ್ಯಾಕ್​ಅಪ್ ಆಟಗಾರರು ಯಾರು ಅನ್ನೋದನ್ನ ಮೊದಲೇ ಗುರುತಿಸಬೇಕು. ಕೊನೆಯಲ್ಲಿ ಯಾರಾದ್ರೂ ಇಂಜುರಿ ಆದ್ರೆ ಬ್ಯಾಕ್​ಅಪ್ ಪ್ಲೇಯರ್​ಗಳನ್ನ ರೆಡಿಯಾಗಿ ಇಟ್ಟುಕೊಳ್ಳಬೇಕು. ಪರದಾಡಬಾರದಷ್ಟೇ.
ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪಟ್ಟ ಉಳಿಸಿಕೊಳ್ಳಲು, ಶತಪ್ರಯತ್ನ ನಡೆಸಲಿದೆ. ಪಟ್ಟ ಉಳಿಸಯಬೇಕಾದ್ರೆ ಸೂರ್ಯಕುಮಾರ್ ಯಾದವ್ ಸೈನ್ಯ, ಈಗಿನಿಂದಲೇ ಶಸ್ತ್ರಾಭ್ಯಾಸ ನಡೆಸಬೇಕು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us