Advertisment

‘ಬಾ ನನ್ನ ಜೊತೆ..’ ಸ್ನೇಹಿತೆ ರೂಮಿಗೆ ಕರೆದೊಯ್ದು ಜೀವ ತೆಗೆದೇ ಬಿಟ್ಟ..

ದೇವಿಶ್ರೀ.. ಬದುಕಿ ಬಾಳ ಬೇಕಿದ್ದ ಚೆಲುವೆ.. ಅಪ್ಪ, ಅಮ್ಮನ ಕನಸಿಗೆ ರೆಕ್ಕೆಯಾಗ್ಬೇಕಿದ್ದ ಸುಂದರಿ.. ಕಲರ್​ಫಲ್​ ಕನಸು ಹೊತ್ತು ಆಂಧ್ರದಿಂದ ಬೆಂಗಳೂರಿಗೆ ಕಾಲಿಟ್ಟ ವಿದ್ಯಾರ್ಥಿನಿ.. ಆದ್ರೀಗ ಹೆ*ವಾಗಿದ್ದಾಳೆ..

author-image
Ganesh Kerekuli
Devishree
Advertisment

ಬೆಂಗಳೂರಿನಲ್ಲಿ 21 ವರ್ಷದ ವಿದ್ಯಾರ್ಥಿನಿ ದೇವಿಶ್ರೀ ಕೊ*ಯಾಗಿದೆ.. ಸ್ನೇಹಿತನೊಬ್ಬ ಬಾ ನನ್ನ ಸ್ನೇಹಿತನ ರೂಮ್​ಗೆ ಹೋಗೋಣ ಅಂತ ಒಂದು ರೂಮ್​ಗೆ ಕರೆದುಕೊಂಡು ಹೋಗಿದ್ದಾನೆ.. ಬಳಿಕ ಆ ರೂಮ್​ನಲ್ಲಿ ಏನ್​ ಆಯ್ತೋ ಏನೋ.. ದೇವಿಶ್ರೀಯ ಉಸಿರು ನಿಂತು ಹೋದ್ರೆ, ಸ್ನೇಹಿತ ಎಸ್ಕೇಪ್​ ಆಗಿದ್ದಾನೆ.. 

Advertisment

ಆಗಿದ್ದೇನು?

ದೇವಿಶ್ರೀ.. 21 ವರ್ಷ ಮೂಲತಃ ಆಂಧ್ರ ನಿವಾಸಿ, ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಾಂಗ ಮಾಡ್ತಿದ್ಲು.. ಆದ್ರೆ ಪ್ರೇಮ್​ ವರ್ಧನ್​ ಸ್ನೇಹದಿಂದ ಇದೀಗ  ಬೆಂಗಳೂರು ಉತ್ತರ ವಲಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿರೋ ಮನೆಯಲ್ಲಿ ಕೊ*ಯಾಗಿ ಪತ್ತೆಯಾಗಿದ್ದಾಳೆ.. ಸ್ನೇಹಿತನೇ ದೇವಿಶ್ರೀಯನ್ನ ರೂಮಿಗೆ ಕರೆದೊಯ್ದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ..

ಇದನ್ನೂ ಓದಿ: ಬೆಂಗಳೂರು ಮಾದರಿಯಲ್ಲೇ ಹುಬ್ಬಳ್ಳಿಯಲ್ಲಿ ರಾಬರಿ.. 3 ಕೋಟಿಗೂ ಅಧಿಕ ಬೆಲೆಬಾಳೋ ಚಿನ್ನಾಭರಣ ದೋಚಿ ಪರಾರಿ

ರೂಮ್​ಗೆ ಕರೆದ.. 

ಮೂಲತಃ ಆಂಧ್ರದವಳಾಗಿದ್ದ ಮೃತ ದೇವಿಶ್ರೀ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ಲು.. ಮಗಳು ಚನ್ನಾಗಿ ಓದ್ಲಿ ಅಂತ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಂಡು ಇದ್ರು.. ಹೀಗಿರುವಾಗ ಕಳೆದ ಭಾನುವಾರ ಬೆಳಗ್ಗೆ ಪ್ರೇಮ್​ ವರ್ಧನ್​​ ಅನ್ನೋ ಸ್ನೇಹಿತನ ಜೊತೆ ತಮ್ಮೇನಹಳ್ಳಿಯಲ್ಲಿರೋ ರೂಮ್​ಗೆ ಹೋಗಿದ್ದಾಳೆ.. ಆದ್ರೆ ಅದೇ ರೂಮ್​ನಲ್ಲಿ ಪ್ರೇಮ್​ ವರ್ಧನ್ ಸ್ನೇಹಿತೆ ದೇವಿಶ್ರೀಯನ್ನ ಕೊಲೆ ಮಾಡಿದ್ದು, ಬಳಿಕ ಎಸ್ಕೇಪ್​ ಆಗಿದ್ದಾನೆ..  

Advertisment

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು. ತಲೆಮರೆಸಿಕೊಂಡಿರುವ ಪ್ರೇಮ್ ವರ್ಧನ್​ ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.. ಇನ್ನು ಪ್ರೇಮ್ ವರ್ಧನ್ ದೇವಿಶ್ರೀಯನ್ನು ಯಾಕ್​ ಕೊಲೆ ಮಾಡಿದಾ? ಇಬ್ಬರ ನಡುವೆ ಏನಿತ್ತು? ಕೊಲೆ ಮಾಡಲೆಂದೇ ಪ್ಲ್ಯಾನ್ ಮಾಡಿ ಸ್ನೇಹಿತೆ ರೂಮಿಗೆ ಕರೆದುಕೊಂಡು ಹೋಗಿದ್ನಾ ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ಪೊಲೀಸರ ತನಿಖೆಯಲ್ಲಿ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ:ಶ್ರೀರಾಮನ ಸನ್ನಿಧಿಯಲ್ಲಿ ರಾರಾಜಿಸಿದ ಧರ್ಮಧ್ವಜ..! ಅದ್ಭುತ ಫೋಟೋಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News
Advertisment
Advertisment
Advertisment